• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನವಿಲುಗಳ ಜೊತೆ ಮೋದಿ ಬ್ಯುಸಿ, ನಿಮ್ಮ ಜೀವ ನೀವೇ ಉಳಿಸಿಕೊಳ್ಳಿ: ರಾಹುಲ್

|

ನವದೆಹಲಿ, ಸೆಪ್ಟೆಂಬರ್ 14: 'ಪ್ರಧಾನಿ ನರೇಂದ್ರ ಮೋದಿ ನವಿಲುಗಳಿಗೆ ಆಹಾರ ನೀಡುವುದರಲ್ಲಿ ಬ್ಯುಸಿ ಇದ್ದಾರೆ ನಿಮ್ಮ ಜೀವವನ್ನು ನೀವೇ ಉಳಿಸಿಕೊಳ್ಳಿ' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ಕಿಡಿ ಕಾರಿದ್ದಾರೆ.

ಕೊವಿಡ್-19 ನಿರ್ವಹಣೆ, ಆರ್ಥಿಕ ಪರಿಸ್ಥಿತಿ ಬಗ್ಗೆ ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಿರಂತರವಾಗಿ ಟೀಕಿಸುತ್ತಾ ಬಂದಿದ್ದಾರೆ.

ಮತ್ತೆ ಪ್ರದಾನಿ ಮೋದಿಯವರ ವಿರುದ್ಧ ಟೀಕೆ ಮುಂದುವರಿಸಿರುವ ರಾಹುಲ್ ಗಾಂಧಿ, ಪ್ರಧಾನಿಯವರು ನವಿಲುಗಳ ಜೊತೆ ಬ್ಯುಸಿಯಾಗಿದ್ದಾರೆ, ಹೀಗಾಗಿ ದೇಶದ ಜನರು ನಿಮ್ಮ ಜೀವನವನ್ನು ನೀವೇ ನೋಡಿಕೊಳ್ಳಬೇಕು, ನಿಮ್ಮ ಜಾಗ್ರತೆಯಲ್ಲಿ ನೀವಿರಿ ಎಂದು ಹೆಚ್ಚಾಗುತ್ತಿರುವ ಕೊರೊನಾ ಪ್ರಕರಣದ ಬಗ್ಗೆ ಪ್ರಧಾನಿಯವರ ಕಾಲೆಳೆದಿದ್ದಾರೆ.

ಇಂದಿನಿಂದ ಸಂಸತ್ ಅಧಿವೇಶನ: ಮಂಡನೆಯಾಗಲಿರುವ ಮಸೂದೆಗಳು ಯಾವುವು?

ಒಂದು ದಿನದ ಹಿಂದಷ್ಟೇ ಕೇಂದ್ರ ಸರ್ಕಾರದ ಕೊವಿಡ್ ನಿರ್ವಹಣೆಯಿಂದ ಭಾರತದ ಜಿಡಿಪಿ ತಳಮಟ್ಟಕ್ಕೆ ಕುಸಿದಿದೆ ಎಂದು ಆರೋಪಿಸಿದ್ದರು.

 ಭಾರತದಲ್ಲಿ ಕೊರೊನಾ ಸೋಂಕಿತರು 50 ಲಕ್ಷ ಗಡಿ ದಾಟಬಹುದು

ಭಾರತದಲ್ಲಿ ಕೊರೊನಾ ಸೋಂಕಿತರು 50 ಲಕ್ಷ ಗಡಿ ದಾಟಬಹುದು

ಈ ವಾರ ಭಾರತದಲ್ಲಿ ಕೊವಿಡ್-19 ಪ್ರಕರಣಗಳು 50 ಲಕ್ಷ ಗಡಿ ದಾಟಬಹುದು. ಸಕ್ರಿಯ ಕೇಸುಗಳೇ 10 ಲಕ್ಷವಾಗಬಹುದು. ಒಬ್ಬ ಮನುಷ್ಯನ ಅಹಂಕಾರದ ಕೊಡುಗೆಯೇ ಸರಿಯಾದ ಯೋಜನೆ ಹಾಕಿಕೊಳ್ಳದೆ ಲಾಕ್ ಡೌನ್ ಹೇರಿಕೆ ಮಾಡಿದ್ದು, ಇದರಿಂದ ದೇಶದೆಲ್ಲೆಡೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ.

 ನಿಮ್ಮ ಜೀವವನ್ನು ನೀವೇ ಉಳಿಸಿಕೊಳ್ಳಿ

ನಿಮ್ಮ ಜೀವವನ್ನು ನೀವೇ ಉಳಿಸಿಕೊಳ್ಳಿ

ಸ್ವಾವಲಂಬಿಗಳಾಗಿ, ಆತ್ಮ ನಿರ್ಭರರಾಗಿ ಎಂದು ಪ್ರಧಾನಿಯವರು ಹೇಳುತ್ತಾರೆ. ಅದರರ್ಥ ನಿಮ್ಮ ಜೀವನವನ್ನು ನೀವೇ ನೋಡಿಕೊಳ್ಳಿ ಎಂದು, ಯಾಕೆಂದರೆ ಪ್ರಧಾನಿಯವರು ತಮ್ಮ ನವಿಲುಗಳ ಜೊತೆ ಬ್ಯುಸಿಯಾಗಿದ್ದಾರೆ ಎಂದು ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

 ದೇಶದ ನಾಗರಿಕರ ಬಗ್ಗೆ ಚಿಂತೆ ಇಲ್ಲ

ದೇಶದ ನಾಗರಿಕರ ಬಗ್ಗೆ ಚಿಂತೆ ಇಲ್ಲ

ಕಳೆದ ತಿಂಗಳು ಪ್ರಧಾನಿಯವರು ತಮ್ಮ ಕಚೇರಿ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಡಿಯೊವನ್ನು ಉಲ್ಲೇಖಿಸಿರುವ ರಾಹುಲ್ ಗಾಂಧಿ, ಪ್ರಧಾನಿಯವರು ತಮ್ಮ ನವಿಲುಗಳ ಜೊತೆ ಸಮಯ ಕಳೆಯುತ್ತಿದ್ದಾರೆ. ಅವರಿಗೆ ದೇಶದ ನಾಗರಿಕರ ಬಗ್ಗೆ ಚಿಂತೆಯಿಲ್ಲ ಎಂದಿದ್ದಾರೆ.

  Hindi Diwas ವಿಚಾರವಾಗಿ ಗರಂ ಆದ್ರು Dinesh Gundurao | Oneindia Kannada
   ವೈದ್ಯಕೀಯ ತಪಾಸಣೆಗಾಗಿ ವಿದೇಶಕ್ಕೆ ಪ್ರಯಾಣ

  ವೈದ್ಯಕೀಯ ತಪಾಸಣೆಗಾಗಿ ವಿದೇಶಕ್ಕೆ ಪ್ರಯಾಣ

  ರಾಹುಲ್ ಗಾಂಧಿ ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ಭಾಗದಲ್ಲಿ ಅನುಪಸ್ಥಿತರಿರುತ್ತಾರೆ, ಅವರು ತಮ್ಮ ತಾಯಿ ಸೋನಿಯಾ ಗಾಂಧಿಯವರ ವೈದ್ಯಕೀಯ ತಪಾಸಣೆಗಾಗಿ ವಿದೇಶಕ್ಕೆ ತೆರಳಲಿದ್ದಾರೆ.

  English summary
  Congress leader Rahul Gandhi on Monday hit out at Prime Minister Narendra Modi over the government’s handling of the novel coronavirus in the country.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X