ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಕಾಲೆಳೆಯೋ ರಭಸದಲ್ಲಿ 'ಲೆಕ್ಕ' ತಪ್ಪಿದ ರಾಹುಲ್ ಗಾಂಧಿ!

|
Google Oneindia Kannada News

ಲೆಕ್ಕ ಮಾತ್ರ ಹೇಳ್ಬೇಡಿ, ನಾ ಲೆಕ್ಕದಲ್ಲಿ ತುಂಬಾ ವೀಕು... ಅನ್ನೋ ಪರಿಸ್ಥಿತಿ ಕಾಂಗ್ರೆಸ್ ನ ಭಾವಿ ಅಧ್ಯಕ್ಷರಿಗೇ ಬಂದೊದಗಿದೆಯಾ?! ದಣಿವಿಲ್ಲದೆ ನಿರಂತರವಾಗಿ ಗುಜರಾತ್ ಚುನಾವಣೆಯ ಪ್ರಚಾರದಲ್ಲಿ ತೊಡಗಿರುವ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿಯವರನ್ನು ಕಾಲೆಳೆಯುವ ರಭಸದಲ್ಲಿ ಟ್ವಿಟ್ಟರ್ ನಲ್ಲಿ ತಪ್ಪು ಲೆಕ್ಕ ಹೇಳಿ ನಗೆಪಾಟಲಿಗೀಡಾದರು!

ರಾಹುಲ್ ಪಟ್ಟಾಭಿಷೇಕಕ್ಕೆ ದಿನಗಣನೆ: ಯಾರು, ಏನಂದರು?ರಾಹುಲ್ ಪಟ್ಟಾಭಿಷೇಕಕ್ಕೆ ದಿನಗಣನೆ: ಯಾರು, ಏನಂದರು?

ಮೋದಿ ಪ್ರಧಾನಿಯಾದ ಮೇಲೆ ದಿನಬಳಕೆಯ ವಸ್ತುಗಳ ಬೆಲೆ ಎಷ್ಟು ಜಾಸ್ತಿಯಾಗಿದೆ ಎಂಬುದನ್ನು ಪಟ್ಟಿ ಮಾಡಿದ್ದ ರಾಹುಲ್ ಗಾಂಧಿ, ಗ್ಯಾಸ್ ಸಿಲಿಂಡರ್ ಬೆಲೆ 2014 ರಲ್ಲಿ 414 ರೂ. ಇದ್ದಿದ್ದು, 2017ರಲ್ಲಿ 742 ರೂ. ಆಗಿದೆ. ಅಂದರೆ '179%' ಪ್ರತಿಶತ ದರ ಏರಿಕೆಯಾಗಿದೆ ಎಂದು ಬರೆದಿದ್ದಾರೆ.

ಮೋದಿಗೆ ದಿನಕ್ಕೊಂದು ಪ್ರಶ್ನೆ : ರಾಹುಲ್ ಕೇಳಿದ 4 ಪ್ರಶ್ನೆಗಳು!ಮೋದಿಗೆ ದಿನಕ್ಕೊಂದು ಪ್ರಶ್ನೆ : ರಾಹುಲ್ ಕೇಳಿದ 4 ಪ್ರಶ್ನೆಗಳು!

'79%' ಎಂದು ಬರೆಯುವ ಬದಲು "179%" ಎಂದು ಬರೆಯುವ ಮೂಲಕ ಆಡಿಕೊಳ್ಳುವವರ ಮುಂದೆ ಎಡವಿಬಿದ್ದಂತಾದರು. ಆದರೆ ಆ ಟ್ವೀಟ್ ಅನ್ನು ಡಿಲೀಟ್ ಮಾಡುವ ಮೂಲಕ ತಾವು ಮಾಡಿದ ತಪ್ಪನ್ನು ಮರೆಮಾಚುವ ಪ್ರಯತ್ನವನ್ನೂ ಮಾಡಿದರು. ಆದರೆ ಚಾಲಾಕಿ ಜನರು ಈಗಾಗಲೇ ಆ ಟ್ವೀಟ್ ನ ಸ್ಕ್ರೀನ್ ಶಾಟ್ ತೆಗೆದಿಟ್ಟುಕೊಂಡು, 'ಗಣಿತ ಬರೋಲ್ವಾ ಕಾಂಗ್ರೆಸ್ಸಿನ ಭಾವಿ ಅಧ್ಯಕ್ಷರೇ..?' ಅಂತ ಗೇಲಿ ಮಾಡುತ್ತಿದ್ದಾರೆ!

ಏನದು ತಪ್ಪು ಲೆಕ್ಕ?

ಏನದು ತಪ್ಪು ಲೆಕ್ಕ?

ಸಿಲಿಂಡರ್ ಗ್ಯಾಸ್ ದರ 179% ಹೆಚ್ಚಾಗಿದೆ ಎಂದು ಒಂದು ಕಡೆ ಹೇಳಿದರೆ, ನಂತರ ಬೇಳೆ, 2014 ರಲ್ಲಿ ಕೆಜಿಗೆ 45 ರೂ. ಇತ್ತು. ಆದರೆ 2017ರ ಹೊತ್ತಿಗೆ ಅದು 80 ರೂ. ಆಗಿದೆ ಎಂದು ಬರೆದು, 177% ಪ್ರತಿಶತ ಹೆಚ್ಚಾಗಿದೆ ಎಂದು ಬರೆದಿದ್ದಾರೆ. ಬೇಳೆ ದರ 77% ಹೆಚ್ಚಾಗಿದೆ ಎಂದು ಬರೆಯುವ ಬದಲು 177% ಎಂದು ಬರೆದಿದ್ದಾರೆ! ಒಟ್ಟಿನಲ್ಲಿ ಆ ಇಡೀ ಪಟ್ಟಿಯೇ ತಪ್ಪಾಗಿದೆ!

ಈ ಶೇಕಡಾ ಲೆಕ್ಕವೇ ಸಾಕು!

ತೀವ್ರ ನಗೆಪಾಟಲಿಗೀಡಾಗುತ್ತಿದ್ದಂತೆಯೇ, ಆ ಟ್ವೀಟ್ ಅನ್ನೇ ಡಿಲೀಟ್ ಮಾಡಿದ ರಾಹುಲ್ ಗಾಂಧಿ, ನಂತರ ಮತ್ತೊಂದು 'ಪರಿಷ್ಕೃತ' ಪಟ್ಟಿಯನ್ನು ಟ್ವೀಟ್ ಮಾಡಿದರು. ಇದರಲ್ಲಿ 'ಶೇಕಡಾ ಲೆಕ್ಕದ ಸಹವಾಸವೇ ಸಾಕು' ಅಂತ 2014 ರಿಂದ 2017ರವರೆಗೆ ದರ ಏರಿಕೆಯಾಗಿರುವ ಪಟ್ಟಿಯನ್ನು ಶೇಕಡಾದ ಬದಲು, ರೂಪಾಯಿಗಳಲ್ಲೇ ನಮೂದಿಸಿದರು!

ಅದೆಲ್ಲಾ ಸರಿ, ಟ್ವೀಟ್ ಅನ್ನು ಡಿಲೀಟ್ ಮಾಡಿದ್ದೇಕೆ ಹೇಳಿ!

ಟ್ವೀಟ್ ಡಿಲೀಟ್ ಮಾಡಿ, 'ಸದ್ಯ ಪಾರಾದೆ' ಅಂತ ರಾಹುಲ್ ಗಾಂಧಿ ನಿಟ್ಟುಸಿರು ಬಿಡುವ ಹೊತ್ತಿಗೆ, 'ಅದೆಲ್ಲಾ ಸರಿ, ನೀವು ಆ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದೇಕೆ ಮೊದಲು ಹೇಳಿ! ನಿಮಗೆ ಪರ್ಸಂಟೇಜ್ ಲೆಕ್ಕ ಹಾಕೋಕೂ ಬರಲ್ವಾ? ನೀವು ನಿಜಕ್ಕೂ ಪ್ರಧಾನಿಯಾಗ್ತೀರಾ?' ಅಂತ ಅವರ ಟ್ವೀಟ್ ನ ಸ್ಕ್ರೀನ್ ಶಾಟ್ ಅನ್ನು ಹಾಕಿ, ಶ್ರೀರಾಮ್ ಎಂಬುವವರೊಬ್ಬರು ಪ್ರತಿಟ್ವೀಟ್ ಮಾಡಿಬಿಟ್ಟಿದ್ದಾರೆ!

ಮೋದಿ ಕಾಲೆಳೆಯುವ ರಭಸದಲ್ಲಿ ತಪ್ಪೋಯ್ತು ಲೆಕ್ಕ!

ಮೋದಿ ಕಾಲೆಳೆಯುವ ರಭಸದಲ್ಲಿ ತಪ್ಪೋಯ್ತು ಲೆಕ್ಕ!

ಡಿಸೆಂಬರ್ 9 ಮತ್ತು 14 ರಂದು ನಡೆಯಲಿರುವ ಗುಜರಾತ್ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ವ್ಯಾಪಕ ಪ್ರಚಾರ ಕಾರ್ಯದಲ್ಲಿ ತೊಡಗಿರುವ ರಾಹುಲ್ ಗಾಂಧಿ, ಪ್ರಧಾನಿ ಮೋದಿಯವರ ಕಾಲೆಳೆಯುವ ರಭಸದಲ್ಲಿ ಇಂಥ ಹಲವು 'ಹಾಸ್ಯಾಸ್ಪದ' ಸನ್ನಿವೇಶ ಸೃಷ್ಟಿಸಿಕೊಂಡಿದ್ದಾರೆ. ಇದೂ ಅದರ ಒಂದು ಭಾಗವಷ್ಟೆ!

English summary
Shooting off a seventh question at Prime Minister Narendra Modi, even as campaigning for elections in Gujarat reached fever pitch, Congress vice president Rahul Gandhi committed an embarrassing mathematical faux pax with regard prices of essential commodities on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X