ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪ್ಪನ ಸಾವಿನ ಕುರಿತ ಮೋದಿ ಹೇಳಿಕೆಗೆ ರಾಹುಲ್ ಅಪ್ಪುಗೆಯ ಉತ್ತರ

|
Google Oneindia Kannada News

ನವದೆಹಲಿ, ಮೇ 05: ಅಪ್ಪ ರಾಜೀವ್ ಗಾಂಧಿ ಅವರ ಸಾವಿನ ಕುರಿತಾದ ಮೋದಿ ಹೇಳಿಕೆಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಅಪ್ಪುಗೆ ಉತ್ತರ ನೀಡಿದ್ದಾರೆ.

'ಭ್ರಷ್ಟಾಚಾರಿ ನಂ 1 ಹಣೆಪಟ್ಟಿಯೊಂದಿಗೆ ಅವರ ಬದುಕು ಅಂತ್ಯವಾಯಿತು' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಜೀವ್ ಗಾಂಧಿ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು, ಈ ಬಗ್ಗೆ ಭಾರಿ ವಿರೋಧ ವ್ಯಕ್ತವಾಗಿತ್ತು.

ರಾಜೀವ್ ಗಾಂಧಿ ಭ್ರಷ್ಟಾಚಾರಿ ನಂ 1 : ನರೇಂದ್ರ ಮೋದಿರಾಜೀವ್ ಗಾಂಧಿ ಭ್ರಷ್ಟಾಚಾರಿ ನಂ 1 : ನರೇಂದ್ರ ಮೋದಿ

ಮೋದಿ ಅವರ ಹೇಳಿಕೆಗೆ ಇಂದು ಟ್ವೀಟ್ ಮೂಲಕ ಉತ್ತರಿಸಿರುವ ರಾಹುಲ್ ಗಾಂಧಿ, ಯುದ್ಧ ಮುಗಿದಿದೆ, ನಿಮ್ಮ ಕರ್ಮ ನಿಮಗಾಗಿ ಕಾಯುತ್ತಿದೆ, ನಿಮ್ಮ ಬಗ್ಗೆಗಿನ ನಿಮ್ಮ ನಂಬಿಕೆಗಳನ್ನು ನನ್ನ ತಂದೆಯವರ ಮೇಲೆ ಹೇರುತ್ತಿರುವುದು ನಿಮಗೆ ಸಹಾಯ ಮಾಡಲಾರದು ಎಂದು ರಾಹುಲ್ ಗಾಂಧಿ ಅವರು ಹೇಳಿದ್ದಾರೆ.

Rahul Gandhi replies to Modi statement about his father Rajeev Gandhi

ಕೊನೆಯಲ್ಲಿ, 'ನಿಮಗೆ ನನ್ನ ಕಡೆಯಿಂದ ಪ್ರೀತಿ ತುಂಬಿದ ದೊಡ್ಡ ಅಪ್ಪುಗೆ' ಎಂದು ರಾಹುಲ್ ಅವರು ಟ್ವೀಟ್ ಮಾಡಿದ್ದಾರೆ.

ಸೈನಿಕರ ರಕ್ತಕ್ಕೆ ಕಾಂಗ್ರೆಸ್ ಕ್ರೆಡಿಟ್ ಪಡೆದುಕೊಳ್ಳಲಿಲ್ಲ: ರಾಹುಲ್ ಗಾಂಧಿಸೈನಿಕರ ರಕ್ತಕ್ಕೆ ಕಾಂಗ್ರೆಸ್ ಕ್ರೆಡಿಟ್ ಪಡೆದುಕೊಳ್ಳಲಿಲ್ಲ: ರಾಹುಲ್ ಗಾಂಧಿ

ರಾಜೀವ್ ಗಾಂಧಿ ಅವರ ಪುತ್ರಿ, ಪ್ರಿಯಾಂಕಾ ಗಾಂಧಿ ಸಹ ಮೋದಿ ಅವರ ಹೇಳಿಕೆಗೆ ಟ್ವೀಟ್ ಪ್ರತಿಕ್ರಿಯೆ ನೀಡಿದ್ದು, ಹುತಾತ್ಮರ ಹೆಸರಲ್ಲಿ ಮತ ಕೇಳುವ ಮೋದಿ, ಮತ್ತೊಬ್ಬ ಹುತಾತ್ಮ ವ್ಯಕ್ತಿಯನ್ನು ಅವಮಾನಿಸಿದ್ದಾರೆ, ಇದಕ್ಕೆ ಅಮೇಥಿಯ ಜನ ತಕ್ಕ ಉತ್ತರ ನೀಡಲಿದ್ದಾರೆ, ನನ್ನ ತಂದೆ ಅಮೇಥಿಯ ಜನರಿಗಾಗಿ ಪ್ರಾಣ ತ್ಯಾಗ ಮಾಡಿದ್ದಾರೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

ಮಾಜಿ ಹಣಕಾಸು ಮಂತ್ರಿ ಪಿ.ಚಿದಂಬರಂ, ಕಾಂಗ್ರೆಸ್ ವಕ್ತಾರ ಸ್ಯಾಮ್ ಪಿತ್ರೋಡಾ ಇನ್ನೂ ಹಲವರು ಮೋದಿ ಅವರ ರಾಜೀವ್ ಗಾಂಧಿ ಬಗೆಗಿನ ಹೇಳಿಕೆಯನ್ನು ಖಂಡಿಸಿದ್ದಾರೆ.

English summary
AICC president Rahul Gandhi replies to Narendra Modi statement about his father Rajeev Gandhi, Rahul says your Karma is waiting for you. Rahul gives loves and hugs to Modi through twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X