ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಿಜೋರಾಂ ಅಂತ ನೂರು ಬಾರಿ ಬರೀರಿ... ರಾಹುಲ್ ಗೆ ಬಿಜೆಪಿ ಶಿಕ್ಷೆ!

|
Google Oneindia Kannada News

Recommended Video

ರಾಹುಲ್ ಗಾಂಧಿಗೆ ಶಿಕ್ಷೆ ಕೊಟ್ಟ ಬಿಜೆಪಿ | Oneindia Kannada

ಕಾಗುಣಿತ ತಪ್ಪು ಬರೆದ ಮಕ್ಕಳಿಗೆ, ಆ ಪದವನ್ನು ನೂರು ಬಾರಿ, ಐವತ್ತು ಬಾರಿ ಸರಿಯಾಗಿ ಬರೆಯಿರಿ... ಅಂತೆಲ್ಲ ಶಿಕ್ಷಕರು ಶಿಕ್ಷೆ ನೀಡುತ್ತಿದ್ದುದು ನೆನಪಿರಬಹುದು. ಆ ಕಿರಿಕಿರಿ ಶಿಕ್ಷೆ ಈಗ್ಯಾಕಪ್ಪ ನೆನಪಾಯ್ತು ಅಂದ್ರೆ... ಇಂಥದೇ ಶಿಕ್ಷೆಯನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಬಿಜೆಪಿ ನೀಡಿದೆ!

ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಿಜೋರಾಂನ ಸುದ್ದಿಯೊಂದನ್ನು ಶೇರ್ ಮಾಡಿದ್ದ ರಾಹುಲ್ ಗಾಂಧಿ, ಆ ಲೇಖನದಲ್ಲಿ ಶ್ಲಾಘಿಸಲಾಗಿದ್ದ ಹೆಣ್ಣು ಮಕ್ಕಳನ್ನು ಹೊಗಳುವ ಸಂದರ್ಭದಲ್ಲಿ 'ಮಣಿಪುರ'ದ ಹೆಣ್ಣುಮಕ್ಕಳು ಎಂದು ಬರೆದಿದ್ದರು.

'ಮಾಜಿ ಸಂಸದರಿಗೆ ವಿಧಾನಸಭೆ ಟಿಕೆಟ್ ಬೇಡವೇ ಬೇಡ! ಯಾಕಂದ್ರೆ...''ಮಾಜಿ ಸಂಸದರಿಗೆ ವಿಧಾನಸಭೆ ಟಿಕೆಟ್ ಬೇಡವೇ ಬೇಡ! ಯಾಕಂದ್ರೆ...'

ಕಾಲೆಳೆಯುವುದಕ್ಕೆಂದೇ ಕಾಯುತ್ತಿದ್ದ ಬಿಜೆಪಿ ನಾಯಕರು ಆ ಟ್ವಿಟ್ಟರ್ ನ ಸ್ಕ್ರೀನ್ ಶಾಟ್ ಅನ್ನು ಪಕ್ಕನೇ ತೆಗೆದುಕೊಂಡು ಟ್ರೋಲ್ ಆರಂಭಿಸಿದ್ದಾರೆ. ರಾಹುಲ್ ಗಾಂಧಿ ಅವರನ್ನು ಅಣುಕಿಸುವುದಕ್ಕೆ ಶುರುಮಾಡಿದರು.

ನೂರು ಬಾರಿ ಬರೆಯಿರಿ!

ರಾಹುಲ್ ಗಾಂಧಿಯವರೇ, ಹೋಗಿ, ಇದನ್ನು ನೂರು ಬಾರಿ ಬರೆಯಿರಿ, "ಮಿಜೋರಾಂ ಮತ್ತು ಮಣಿಪುರ ಎರಡೂ ಭಾರತದ ಈಶಾನ್ಯ ಭಾಗದ ಎರಡು ಬೇರೆ ಬೇರೆ ರಾಜ್ಯಗಳು. ಇದನ್ನು ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿರುವವರೆಗೂ ನೆನಪಿನಲ್ಲಿಟ್ಟುಕೊಳ್ಳುತ್ತೇನೆ" ಎಂದು ಬಿಜೆಪಿ ಐಟಿ ಸೆಲ್ ಮುಖಂಡ ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದಾರೆ.

ರಾಹುಲ್ ಟ್ವೀಟ್ ನಲ್ಲೇನಿತ್ತು?

ರಾಹುಲ್ ಟ್ವೀಟ್ ನಲ್ಲೇನಿತ್ತು?

"ಅವಕಾಶ ನೀಡಿದರೆ ಒಬ್ಬ ಬಾಲಕಿಗೆ ಸಾಧ್ಯವಿಲ್ಲದ್ದು ಯಾವುದೂ ಇಲ್ಲ. 'ಮಣಿಪುರ'ದ ಈ ಸೈನಿಕ ಶಾಲೆಯ ಹುಡುಗಿಯರು ಅದಕ್ಕೊಂದು ಉದಾಹರಣೆ. ಈ ಎಲ್ಲ ಸ್ಫೂರ್ತಿದಾಯಕ, ಧೈರ್ಯವಂತ ಹುಡುಗಿಯರಿಗೆ ನನ್ನ ಶುಭಹಾರೈಕೆಗಳು. ನೀವೆಲ್ಲ ಈ ದೇಶದ ಭವಿಷ್ಯ. ನೀವೆಲ್ಲ ನಾವು ಹೆಮ್ಮೆ ಪಡುವಂತೆ ಮಾಡಿದ್ದೀರಿ" ಎಂದು ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ, 'ಮಿಜೋರಾಂ' ನ ಸುದ್ದಿಯನ್ನು ಶೇರ್ ಮಾಡಿದ್ದರು! ನಂತರ ತಪ್ಪಿನ ಅರಿವಾಗಿ ಅದನ್ನು 'ಮಿಜೋರಾಂ' ಎಂದು ಬದಲಿಸಿದರು.

ಪ್ರಧಾನಿ ಅಭ್ಯರ್ಥಿ ರಾಹುಲ್: ಸಹಮತ ಇದೆ ಎಂದು ದೇವೇಗೌಡ ಘೋಷಣೆಪ್ರಧಾನಿ ಅಭ್ಯರ್ಥಿ ರಾಹುಲ್: ಸಹಮತ ಇದೆ ಎಂದು ದೇವೇಗೌಡ ಘೋಷಣೆ

ಈಶಾನ್ಯ ರಾಜ್ಯಗಳ ಬಗೆಗಿನ ನಿರ್ಲಕ್ಷ್ಯಕ್ಕೆ ಸಾಕ್ಷಿ!

ಮಿಜೋರಾಂನ ಲೇಖನವನ್ನು ಶೇರ್ ಮಾಡಿ ಮಣಿಪುರ ಎಂದು ರಾಹುಲ್ ಗಾಂಧಿ ಬರೆದಿದ್ದಾರೆ! ಇದು ಅವರಿಗಿರುವ ಈಶಾನ್ಯ ರಾಜ್ಯದ ಬಗೆಗಿನ ದಿವ್ಯನಿರ್ಲಕ್ಷ್ಯ ಭಾವಕ್ಕೆ ಸಾಕ್ಷಿ ಎಂದು ಕಾಲೆಳೆದಿದ್ದಾರೆ ಅಮಿತ್ ಮಾಳವೀಯ!

ಟ್ವಿಟ್ಟರ್ ಹ್ಯಾಂಡಲ್ ಮಾಡುವವರದು ಮಂದಬುದ್ಧಿ!

ರಾಹುಲ್ ಗಾಂಧಿ ಅವರ ಟ್ವಿಟ್ಟರ್ ಹ್ಯಾಂಡಲ್ ಅನ್ನು ಬೇರೆ ಯಾರೋ ನಿರ್ವಹಿಸುತ್ತಾರೆ. ಆದರೆ ಅವರು ಸಹ ಮಂದಬುದ್ಧಿಯವರು ಎಂದು ನನಗನ್ನಿಸುತ್ತಿದೆ. ಅವರಿಗೆ ಮಿಜೋರಾಂ ಮತ್ತು ಮಣಿಪುರದ ನಡುವಿನ ವ್ಯತ್ಯಾಸ ಗೊತ್ತಿಲ್ಲವೇ? ಎಂದು ಪ್ರಶ್ನಿಸಿದ್ದಾರೆ ಕಿರಣ್.

ಇಂದಿರಾ ವಿಷಯದಲ್ಲಿ ಪವಾಡ ಮಾಡಿದ್ದ ಮಹಾಕಾಳೇಶ್ವರನ ನೆಲೆಗೆ ರಾಹುಲ್! ಇಂದಿರಾ ವಿಷಯದಲ್ಲಿ ಪವಾಡ ಮಾಡಿದ್ದ ಮಹಾಕಾಳೇಶ್ವರನ ನೆಲೆಗೆ ರಾಹುಲ್!

English summary
While applauding the girls, Congress president Rahul Gandhi referred to the story as that of Manipur instead of Mizoram. The Bharatiya Janata Party (BJP) was quick to spot the error and put the Congress president in the dock.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X