ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ಗಾಂಧಿ ರಿಟರ್ನ್ಸ್; ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೇರಲು ಮತ್ತೆ ಸಜ್ಜು!

|
Google Oneindia Kannada News

ನವದೆಹಲಿ, ಮೇ 12: ಮಾರ್ಚ್ 14 ರಂದು ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯಲ್ಲಿ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಬೇಕು ಎಂದು ಉನ್ನತ ನಾಯಕರು ಒತ್ತಾಯಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ಮುಂಬರುವ 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಗೆ ಸವಾಲೊಡ್ಡಲು ಕಾರ್ಯತಂತ್ರ ರೂಪಿಸಲು ಮತ್ತು ಪಕ್ಷ ಸಂಘಟನೆ ಕುರಿತು ಚರ್ಚೆ ನಡೆಸಲು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಉದಯಪುರದಲ್ಲಿ 'ಚಿಂತನ್ ಶಿಬಿರ್' ನಡೆಸಲಿದೆ. ಇಲ್ಲಿಗೆ ದೇಶದ ವಿವಿದೆಢೆಗಳಿಂದ ನಾಯಕರು ಬಂದು ಸೇರುತ್ತಾರೆ.

ಮಾರ್ಚ್ 14 ರಂದು ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯಲ್ಲಿ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಬೇಕು ಎಂದು ಉನ್ನತ ನಾಯಕರು ಒತ್ತಾಯಿಸಿದ್ದರು. ಇದೇ ಸಭೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ವೈನಾಡ್ ಸಂಸದರಿಗೆ ಅಧ್ಯಕ್ಷ ಸ್ಥಾನವನ್ನು ಒಪ್ಪಿಕೊಳ್ಳಬೇಕು ಎಂದು ಹೇಳಿದರು ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಅಂತರಿಕ ಚರ್ಚೆಗಳು ನಡೆಯುತ್ತಿವೆ.

 Rahul Gandhi Ready to Consider Return as Congress President: Report

ಈ ಬಗ್ಗೆ ಮಾಹಿತಿ ನೀಡಿದ್ದು, "ರಾಹುಲ್ ಹುದ್ದೆಯನ್ನು ಪರಿಗಣಿಸಲು ಸಿದ್ಧರಾಗಿದ್ದಾರೆ. ಇದಾದ ನಂತರ ಆಗಸ್ಟ್-ಸೆಪ್ಟೆಂಬರ್‍‌ನಲ್ಲಿ ಅಧ್ಯಕ್ಷರ ಆಯ್ಕೆಯನ್ನು ನಡೆಸುವ ಪ್ರಸ್ತಾಪ ಸಭೆಯಲ್ಲಿ ಬಂದಿತು. ಆದರೆ, ನಡೆಯುತ್ತಿರುವ ಪ್ರಕ್ರಿಯೆಯನ್ನು ಪೂರ್ವಭಾವಿಯಾಗಿ ಮುಂದೂಡಲು ಸಾಧ್ಯವಿಲ್ಲ ಎಂದು ನಿರ್ಧರಿಸಲಾಯಿತು. " ಎನ್ನಲಾಗಿದೆ. 2019 ರ ಸೋಲಿನ ನಂತರ, ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಮತ್ತು ಸೋನಿಯಾ ಗಾಂಧಿ ಪಕ್ಷದ ಹಂಗಾಮಿ ಅಧ್ಯಕ್ಷರಾದರು. ಆಗ ರಾಹುಲ್‌ ನಾಯಕತ್ವದ ಬಗ್ಗೆ ಕಾಂಗ್ರೆಸ್‌ನ ಹಿರಿಯ ನಾಯಕರು ಮತ್ತು ವರಿಷ್ಠರಿಂದ ಸಾಕಷ್ಟು ಆಕ್ಷೇಪಗಳು ಬಹಿರಂಗವಾಗಿಯೇ ಕೇಳಿ ಬಂದಿದ್ದವು.

ಶೀಘ್ರವೇ ನಿರ್ಣಾಯಕ ನಿರ್ಧಾರ
ಪ್ರಬಲ ಎದುರಾಳಿ ಪಕ್ಷ ಬಿಜೆಪಿಯಂತು ನಮಗೆ ಪ್ರಚಾರಕ್ಕೆ ಕಾಂಗ್ರೆಸ್‌ನಿಂದ ರಾಹುಲ್‌ ಮಾತ್ರ ಸಾಕು ಅವರೇ ನಮಗೆ ಪುಕ್ಕಟೆ ಪ್ರಚಾರ ನೀಡುತ್ತಾರೆ ಎಂದು ಕುಹಕವಾಡಿತ್ತು, ದೇಶಾದ್ಯಂತ ಕಾಂಗ್ರೆಸ್‌ನ ನಾಯಕತ್ವದ ಬಗ್ಗೆ ಯಾರು ಅಂತ ನಾಯಕರಿಲ್ಲ ಎಂದು ಭಾವಿಸಿ ಹಲವು ಸ್ವಪಕ್ಷದ ನಾಯಕರೇ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದರು. ಕಾಂಗ್ರೆಸ್‌ ಈಗ ಮೊದಲಿನಂತೆ ಇಲ್ಲ ದೃಢ ನಿರ್ಧಾರಗಳು ಸಂಘಟನೆ ಬಗ್ಗೆ ಆಗುತ್ತಿಲ್ಲ. ಕಾರ್ಯಕರ್ತರು ಯಾರು ಕ್ರಿಯಾಶೀಲವಾಗಿ ಮೊದಲಿನಂತೆ ಇಲ್ಲ ಮಾತುಗಳು ಕಾಂಗ್ರೆಸ್‌ ಪಕ್ಷದಲ್ಲೆ ಕೇಳಿ ಬಂದಿತ್ತು. ಇದನ್ನೇ ಬಳಸಿಕೊಂಡಿದ್ದ ಅನ್ಯ ಪಕ್ಷಗಳು ರಾಹುಲ್‌ ಅವರನ್ನು ಪಪ್ಪು ಎಂದೆಲ್ಲ ಕರೆದು ಜರಿದಿದ್ದವು. ಈಗ ಮತ್ತೆ ರಾಹುಲ್‌ ಗಾಂಧಿಯವರು ಅಧ್ಯಕ್ಷರಾಗಲಿದ್ದಾರೆ ಎಂದು ಕಾಂಗ್ರೆಸ್‌ನಲ್ಲಿ ಮಾತುಕತೆ ಶುರುವಾಗಿದೆ.

 Rahul Gandhi Ready to Consider Return as Congress President: Report

Recommended Video

Ashwin ಭಾರತ ತಂಡಕ್ಕೆ ವಿಶ್ವಕಪ್ ಆಡೇ ಆಡ್ತಾರೆ | Oneindia Kannada

ಉದಯಪುರದಲ್ಲಿ ನಡೆಯಲಿರುವ ಮುಂದಿನ ಚಿಂತನ ಶಿಬಿರದಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದಂತೆ ಚರ್ಚೆಗಳು ಮತ್ತು ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ. ಈ ವರ್ಷದ ಆರಂಭದಲ್ಲಿ ಐದು ರಾಜ್ಯಗಳ ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಪಕ್ಷವು ಹೀನಾಯವಾಗಿ ಸೋತ ಹಿನ್ನೆಲೆಯಲ್ಲಿ ಚಿಂತನ ಶಿಬಿರವನ್ನು ಆಯೋಜಿಸಲಾಗಿದೆ. ಕಳೆದ ಎಂಟು ವರ್ಷಗಳಲ್ಲಿ ನಡೆದ ಚುನಾವಣೆಗಳಲ್ಲಿ ಪಕ್ಷವು ಹಲವಾರು ಚುನಾವಣಾ ಸೋಲುಗಳನ್ನು ಕಂಡಿದೆ. ಕಾಂಗ್ರೆಸ್ ತನ್ನ ಕೆಲವು ಪ್ರಮುಖ ಮುಖಗಳ ನಿರ್ಗಮನವನ್ನೂ ಕಂಡಿದೆ. ಮುಂದಿನ ಚಿಂತನ ಶಿಬಿರವು ಮೇ 13 ರಂದು ಸೋನಿಯಾ ಗಾಂಧಿ ಜನರನ್ನು ಉದ್ದೇಶಿಸಿ ಮಾತನಾಡುವುದರೊಂದಿಗೆ ಪ್ರಾರಂಭವಾಗಲಿದೆ ಮತ್ತು ಮೇ 14 ರಂದು ರಾಹುಲ್ ಗಾಂಧಿಯವರ ಭಾಷಣದೊಂದಿಗೆ ಮುಕ್ತಾಯಗೊಳ್ಳಲಿದೆ.

English summary
The top leaders demanded that Rahul Gandhi should take over the post of Congress President in the Congress Working Committee (CWC) meeting held on March 14.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X