ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಡಿದ ಪಟ್ಟು ಬಿಡದ ರಾಹುಲ್ ಗಾಂಧಿ: ಬೇಡ ಅಂದ್ರೆ ಬೇಡ, ದಟ್ಸ್ ಆಲ್

|
Google Oneindia Kannada News

ಕರ್ನಾಟಕ ಕಾಂಗ್ರೆಸ್ ಘಟಕಕ್ಕೆ ಅಧ್ಯಕ್ಷರನ್ನು ನೇಮಕ ಮಾಡುವುದು ಹೈಕಮಾಂಡ್ ಗೆ ಎಷ್ಟು ದುಸ್ತರವಾಗುತ್ತಿದೆಯೋ, ಅದೇ ರೀತಿ ಎಐಸಿಸಿ ಅಧ್ಯಕ್ಷ ಹುದ್ದೆಗೆ ಕೂಡಾ.

ಕಳೆದ ಲೋಕಸಭಾ ಚುನಾವಣೆಯಲ್ಲಿನ ಹೀನಾಯ ಸೋಲಿನ ತರುವಾಯ, ಅಧ್ಯಕ್ಷ ಹುದ್ದೆಯಿಂದ ರಾಹುಲ್ ಕೆಳಗಿಳಿದ ನಂತರ, ಹಂಗಾಮಿ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಅಧಿಕಾರ ಸ್ವೀಕರಿಸಿದ್ದರು.

ಇವತ್ತಿಲ್ಲಾಂದ್ರೆ ನಾಳೆ ಮತ್ತೆ ರಾಹುಲ್ ಗಾಂಧಿಯೇ ಆ ಹುದ್ದೆಗೆ ಬರಬಹುದು ಎನ್ನುವ ಎಲ್ಲಾ ಕಾಂಗ್ರೆಸ್ಸಿಗರ ಲೆಕ್ಕಾಚಾರ ಪ್ರತೀಸಲ ತಪ್ಪುತ್ತಿದೆ. ಪಕ್ಷದ ಹಲವು ಮುಖಂಡರು, ಆ ಹುದ್ದೆಗೆ ಯಾರನ್ನಾದರೂ ಆಯ್ಕೆ ಮಾಡಿ ಎಂದು ಹಲವು ಬಾರಿ ಸೋನಿಯಾ ಗಾಂಧಿಯವರನ್ನು ಒತ್ತಾಯಿಸಿದ್ದರು.

ಸಮಯ ವ್ಯರ್ಥ ಮಾಡದೇ, ಕೊರೊನಾ ವಿರುದ್ಧ ಹೋರಾಡಿ: ರಾಹುಲ್ ಗಾಂಧಿ ಸಮಯ ವ್ಯರ್ಥ ಮಾಡದೇ, ಕೊರೊನಾ ವಿರುದ್ಧ ಹೋರಾಡಿ: ರಾಹುಲ್ ಗಾಂಧಿ

ಆದರೆ, ಕೆಲವು ದಿನಗಳ ಹಿಂದೆ, ಎಐಸಿಸಿ ಅಧ್ಯಕ್ಷ ಹುದ್ದೆಗೆ ಮತ್ತೆ ರಾಹುಲ್ ಗಾಂಧಿಯೇ ವಾಪಸ್ ಆಗುತ್ತಾರೆ ಎನ್ನುವ ಸುದ್ದಿ ದಟ್ಟವಾಗಿ ಹಬ್ಬಿತ್ತು. ಇದಕ್ಕೆ ಅತ್ಯಂತ ಸ್ಪಷ್ಟವಾಗಿ ರಾಹುಲ್ ಪ್ರತಿಕ್ರಿಯೆ ನೀಡಿದ್ದಾರೆ.

ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಪ್ರತಿಸ್ಪರ್ಧಿಯೇ ಇಲ್ಲ

ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಪ್ರತಿಸ್ಪರ್ಧಿಯೇ ಇಲ್ಲ

ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಪ್ರತಿಸ್ಪರ್ಧಿಯೇ ಇಲ್ಲದ ಕಾರಣ ರಾಹುಲ್ ಗಾಂಧಿ ಒಬ್ಬರೇ ಆ ಸ್ಥಾನಕ್ಕೆ ಸೂಕ್ತ ಎನ್ನುವ ಕೂಗು ಕೆಲವು ದಿನಗಳಿಂದ ಜೋರಾಗಿ ಕೇಳುತ್ತಿತ್ತು. ಮುಂಬರುವ ಏಪ್ರಿಲ್ ನಲ್ಲಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವ ಸಾಧ್ಯತೆಗಳಿದ್ದು, ವಯನಾಡು ಸಂಸದ ರಾಹುಲ್ ಗಾಂಧಿ ಅವರನ್ನು ಮತ್ತೊಮ್ಮೆ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವ ಬಗ್ಗೆ ಕಾಂಗ್ರೆಸ್ ಆಂತರಿಕ ವಲಯದಲ್ಲಿ ಚಿಂತನೆ ನಡೆಸಲಾಗುತ್ತಿದೆ ಎಂದು ವರದಿಯಾಗಿತ್ತು.

ರಾಹುಲ್ ಗಾಂಧಿ ಮತ್ತೊಮ್ಮೆ ತಮ್ಮ ನಿಲುವನ್ನು ಸ್ಪಷ್ಟ ಪಡಿಸಿದ್ದಾರೆ

ರಾಹುಲ್ ಗಾಂಧಿ ಮತ್ತೊಮ್ಮೆ ತಮ್ಮ ನಿಲುವನ್ನು ಸ್ಪಷ್ಟ ಪಡಿಸಿದ್ದಾರೆ

ಎಐಸಿಸಿಯ ನಾಯಕತ್ವ ವಹಿಸಿಕೊಳ್ಳುವ ಬಗ್ಗೆ ರಾಹುಲ್ ಗಾಂಧಿ ಮತ್ತೊಮ್ಮೆ ತಮ್ಮ ನಿಲುವನ್ನು ಸ್ಪಷ್ಟ ಪಡಿಸಿದ್ದಾರೆ. "ಅಧ್ಯಕ್ಷ ಹುದ್ದೆಗೆ ಈಗಾಗಲೇ ರಾಜೀನಾಮೆಯನ್ನು ನೀಡಿದ್ದೇನೆ. ಮತ್ತೊಮ್ಮೆ, ಆ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಪ್ರಶ್ನೆ ಉದ್ಭವಿಸುವುದಿಲ್ಲ" ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಸಂಸದ ರಾಹುಲ್ ಗಾಂಧಿಗೆ ಮತ್ತೆ ಎಐಸಿಸಿ ಪಟ್ಟ?ಸಂಸದ ರಾಹುಲ್ ಗಾಂಧಿಗೆ ಮತ್ತೆ ಎಐಸಿಸಿ ಪಟ್ಟ?

ಅಧ್ಯಕ್ಷನಾಗುತ್ತೇನೆ ಎಂದು ಹರಿದಾಡುತ್ತಿರುವ ಸುದ್ದಿಗಳು ಊಹಾಪೋಹಗಳಷ್ಟೇ

ಅಧ್ಯಕ್ಷನಾಗುತ್ತೇನೆ ಎಂದು ಹರಿದಾಡುತ್ತಿರುವ ಸುದ್ದಿಗಳು ಊಹಾಪೋಹಗಳಷ್ಟೇ

"ನಾನು ಮತ್ತೆ ಅಧ್ಯಕ್ಷನಾಗುತ್ತೇನೆ ಎಂದು ಹರಿದಾಡುತ್ತಿರುವ ಸುದ್ದಿಗಳು ಊಹಾಪೋಹಗಳಷ್ಟೇ. ಏಪ್ರಿಲ್ ಮಧ್ಯಭಾಗದಲ್ಲಿ ನಡೆಯುವ ಪಕ್ಷದ ಅಧಿವೇಶನದಲ್ಲಿ ಈ ಬಗ್ಗೆ ಅಂತಿಮ ನಿರ್ಣವನ್ನು ತೆಗೆದುಕೊಳ್ಳಲಾಗುವುದು" ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಪಕ್ಷದ ಅಧ್ಯಕ್ಷರ ವಿವೇಚನೆಗೆ ಬಿಟ್ಟ ವಿಚಾರ

ಪಕ್ಷದ ಅಧ್ಯಕ್ಷರ ವಿವೇಚನೆಗೆ ಬಿಟ್ಟ ವಿಚಾರ

ಅಧ್ಯಕ್ಷ ಹುದ್ದೆಗೆ ವಾಪಸ್ ಆಗಲು ಪಕ್ಷದಲ್ಲಿ ಒತ್ತಡ ಹೆಚ್ಚಾದರೆ ನಿಮ್ಮ ನಿರ್ಧಾರವೇನು ಎನ್ನುವ ಪ್ರಶ್ನೆಗೆ, "ಅದು ಪಕ್ಷದ ಅಧ್ಯಕ್ಷರ ವಿವೇಚನೆಗೆ ಬಿಟ್ಟ ವಿಚಾರ. ನನ್ನ ನಿರ್ಧಾರ ಮಾತ್ರ ಅಚಲ" ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ರಾಹುಲ್ ರಾಜೀನಾಮೆಯ ನಂತರ, ಒಲ್ಲದ ಮನಸ್ಸಿನಿಂದ ಸೋನಿಯಾ ಅಧ್ಯಕ್ಷ ಹುದ್ದೆಯ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ.

English summary
Return As AICC Chief, Rahul Gandhi Reaction: I Have Made It Clear Earlier Too, No Question Of Returning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X