ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಫೆಲ್ ಹಗರಣ ಆರೋಪ: ರಾಹುಲ್ ಗಾಂಧಿಗೆ ಮುಖಭಂಗ

|
Google Oneindia Kannada News

ನವದೆಹಲಿ, ಜುಲೈ 20: ಫ್ರಾನ್ಸ್‌ನಿಂದ ರಫೆಲ್ ಯುದ್ಧ ವಿಮಾನ ಖರೀದಿಸುವಾಗ ಮಾಡಿಕೊಳ್ಳಲಾದ ಒಪ್ಪಂದದ ಮಾಹಿತಿಯನ್ನು ನೀಡುವುದಾಗಿ ಫ್ರಾನ್ಸ್ ಸರ್ಕಾರ ಹೇಳಿದೆ ಎಂಬ ಹೇಳಿಕೆ ನೀಡಿದ್ದ ರಾಹುಲ್ ಗಾಂಧಿಗೆ ತೀವ್ರ ಮುಖಭಂಗವಾಗಿದೆ.

ಯುದ್ಧ ವಿಮಾನಗಳ ಖರೀದಿಯ ರಫೆಲ್ ಒಪ್ಪಂದದ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಫ್ರಾನ್ಸ್ ಸರ್ಕಾರ ಸ್ಪಷ್ಟಪಡಿಸಿದೆ.

ರಾಫೇಲ್ ಡೀಲ್ ನಲ್ಲಿ ಗೋಲ್ ಮಾಲ್: ರಾಹುಲ್ ಗಂಭೀರ ಆರೋಪರಾಫೇಲ್ ಡೀಲ್ ನಲ್ಲಿ ಗೋಲ್ ಮಾಲ್: ರಾಹುಲ್ ಗಂಭೀರ ಆರೋಪ

ಲೋಕಸಭೆಯ ಅವಿಶ್ವಾಸ ನಿರ್ಣಯದ ಭಾಷಣದ ವೇಳೆ ರಾಹುಲ್ ಗಾಂಧಿ ಅವರು, ರಫೆಲ್ ಯುದ್ಧ ವಿಮಾನ ಖರೀದಿಯಲ್ಲಿ ಹಗರಣ ನಡೆದಿದೆ ಎಂದು ಆರೋಪಿಸಿದ್ದರು.

Rahul gandhi rafale deal french clarification

ಯುದ್ಧ ವಿಮಾನ ಖರೀದಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ನೀಡಬೇಕು. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶದ ಜನರಿಗೆ ಸುಳ್ಳು ಹೇಳಿದ್ದಾರೆ ಎಂದು ರಾಹುಲ್ ಆರೋಪ ಮಾಡಿದ್ದರು.

ಅಲ್ಲದೆ, ಮೋದಿ ಅವರ ಸರ್ಕಾರವು ಸಹಿಹಾಕಿದ ರಫೆಲ್ ಒಪ್ಪಂದದ ಮಾಹಿತಿಗಳನ್ನು ನೀಡಲು ಯಾವುದೇ ಸಮಸ್ಯೆಯಿಲ್ಲ ಎಂದು ಫ್ರಾನ್ಸ್ ಅಧ್ಯಕ್ಷರು ತಮಗೆ ತಿಳಿಸಿದ್ದಾಗಿ ರಾಹುಲ್ ಹೇಳಿಕೆ ನೀಡಿದ್ದರು.

ರಫೇಲ್ ಒಪ್ಪಂದಕ್ಕೆ ಆಕ್ಷೇಪ, ಕಾಂಗ್ರೆಸ್ ಕಡೆಗೆ ಬಾಣ ತಿರುಗಿಸಿದ ಸಚಿವೆರಫೇಲ್ ಒಪ್ಪಂದಕ್ಕೆ ಆಕ್ಷೇಪ, ಕಾಂಗ್ರೆಸ್ ಕಡೆಗೆ ಬಾಣ ತಿರುಗಿಸಿದ ಸಚಿವೆ

ಇದಕ್ಕೆ ಪ್ರತಿಕ್ರಿಯೆ ಹೇಳಿಕೆ ಬಿಡುಗಡೆ ಮಾಡಿರುವ ಫ್ರಾನ್ಸ್ ಸರ್ಕಾರ, ರಾಹುಲ್ ಗಾಂಧಿ ಅವರು ಸಂಸತ್‌ನಲ್ಲಿ ನೀಡಿರುವ ಹೇಳಿಕೆಯನ್ನು ಗಮನಿಸಿದ್ದೇವೆ. 2008ರಲ್ಲಿ ಭಾರತ ಮತ್ತು ಫ್ರಾನ್ಸ್ ಒಂದು ರಕ್ಷಣಾ ಒಪ್ಪಂದ ಮಾಡಿಕೊಂಡಿದ್ದವು.

ಭಾರತ ಅಥವಾ ಫ್ರಾನ್ಸ್‌ನ ಭದ್ರತೆ ಮತ್ತು ಕಾರ್ಯಾಚರಣಾ ಸಾಮರ್ಥ್ಯದ ಮೇಲೆ ಪರಿಣಾಮ ಬೀರುವ ಮಾಹಿತಿಯನ್ನು ರಕ್ಷಿಸುವ ಒಪ್ಪಂದಕ್ಕೆ ಉಭಯ ದೇಶಗಳು ಕಾನೂನಿಗೆ ಅನುಗುಣವಾಗಿ ಬದ್ಧವಾಗಿವೆ ಎಂದಿದೆ.

ಎರಡೂ ದೇಶಗಳು ಇದರ ಮಾಹಿತಿಯನ್ನು ರಕ್ಷಿಸುವ ಸಂಬಂಧ ಒಪ್ಪಂದಕ್ಕೆ ಸಹಿ ಹಾಕಿವೆ ಎಂದು ಫ್ರಾನ್ಸ್‌ನ ಯುರೋಪ್ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ಇದು 2016ರ ಸೆಪ್ಟೆಂಬರ್‌ 23 ರಂದು 36 ರಫೇಲ್ ಯುದ್ಧವಿಮಾನಗಳು ಹಾಗೂ ಶಸ್ತ್ರಾಸ್ತ್ರಗಳ ಖರೀದಿ ಒಪ್ಪಂದಕ್ಕೂ ಸಹಜವಾಗಿಯೇ ಅನ್ವಯವಾಗಿದೆ.

ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ 2018ರ ಮಾರ್ಚ್ 9ರಂದು ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ, 'ಭಾರತ ಮತ್ತು ಫ್ರಾನ್ಸ್‌ನಲ್ಲಿ ಆಗಲಿ, ಒಪ್ಪಂದವು ಸೂಕ್ಷ್ಮವಾಗಿರುವಾಗ ಎಲ್ಲ ಮಾಹಿತಿಗಳನ್ನು ನಾವು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು ಎಂಬುದಾಗಿ ವಕ್ತಾರರು ತಿಳಿಸಿದ್ದಾರೆ.

ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಮಾಡಿಕೊಂಡ ಒಪ್ಪಂದಕ್ಕಿಂತಲೂ ಅಧಿಕ ಹಣತೆತ್ತು ಎನ್‌ಡಿಎ ಸರ್ಕಾರ ರಫೆಲ್ ಯುದ್ಧ ವಿಮಾನಗಳನ್ನು ಖರೀದಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಆದರೆ, ರಾಹುಲ್ ಗಾಂಧಿ ತಮ್ಮ ಹೇಳಿಕೆಗೆ ಬದ್ಧವಾಗಿರುವುದಾಗಿ ಹೇಳಿದ್ದಾರೆ. ಫ್ರಾನ್ಸ್ ಜತೆ ಯಾವುದೇ ಒಪ್ಪಂದ ನಡೆದಿಲ್ಲ ಎಂದು ಫ್ರಾನ್ಸ್ ಅಧ್ಯಕ್ಷರೇ ನನ್ನ ಮುಂದೆ ಹೇಳಿದ್ದರು.

ಅವರು ಬಯಸಿದ್ದರೆ ನಿರಾಕರಿಸಿಕೊಳ್ಳಲಿ. ಅವರು (ಫ್ರಾನ್ಸ್ ಅಧ್ಯಕ್ಷ) ನನ್ನ ಮುಂದೆಯೇ ಹೇಳಿದ್ದರು. ನಾನು, ಆನಂದ್ ಶರ್ಮಾ ಮತ್ತು ಮನಮೋಹನ್ ಸಿಂಗ್ ಕೂಡ ಅಲ್ಲಿದ್ದರು ಎಂದು ರಾಹುಲ್ ಗಾಂಧಿ ಸಮರ್ಥನೆ ನೀಡಿದ್ದಾರೆ.

English summary
French government clarified that it cannot reveal the details of rafale Deal. As per deal signed with previous UPA government in 2008, cannot reveal the details, it said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X