• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೇದಾರನಾಥ ಸನ್ನಿಧಿಯಲ್ಲಿ 'ಚೈತನ್ಯ' ಪಡೆದ ರಾಹುಲ್ ಗಾಂಧಿ

By Mahesh
|

ಡೆಹ್ರಾಡೂನ್, ಏ.,24: 'ನಾನು ಸಾಮಾನ್ಯವಾಗಿ ಮಂದಿರಕ್ಕೆ ತೆರಳಿದರೆ ಏನೂ ಬೇಡುವುದಿಲ್ಲ. ಆದರೆ, ಕೇದಾರನಾಥನ ಸನ್ನಿಧಿಯಲ್ಲಿ ಹೊಸ ಚೈತನ್ಯ(ಅಗ್ನಿ ರೂಪದ) ಸಿಕ್ಕಿತು' ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹಿಮಾಲಯದಲ್ಲಿ ಶುಕ್ರವಾರ ಬೆಳಗ್ಗೆ ಹೇಳಿದ್ದಾರೆ.

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಹಿಂದೂಗಳ ಪವಿತ್ರ ಯಾತ್ರಾ ಸ್ಥಳ ಕೇದಾರನಾಥಯಾತ್ರೆ ಕೈಗೊಂಡಿದ್ದು, ಜನ ಸಾಮಾನ್ಯರಂತೆ ಪಾದಯಾತ್ರೆ ಮೂಲಕ ಶುಕ್ರವಾರ ಬೆಳಗ್ಗೆ ಕೇದಾರನಾಥ ತಲುಪಿದ್ದಾರೆ.[ಕೇದಾರನಾಥ ದೇಗುಲ ಅಚ್ಚಳಿಯದೆ ಉಳಿದಿದ್ದು ಹೇಗೆ?]

ಗುರುವಾರ ಗೌರಿಕುಂಡ ತಲುಪಿದ್ದ ರಾಹುಲ್ ಗಾಂಧಿ ಅವರು ಶುಕ್ರವಾರ ಮುಂಜಾನೆ ಪಾದಯಾತ್ರೆ ಮುಂದುವರೆಸಿ ಶಿವನ ದೇಗುಲ ಪ್ರವೇಶಿಸಿದ್ದಾರೆ. ರಾಹುಲ್ ಗಾಂಧಿ ಅವರ ಜೊತೆಗೆ ಹಿರಿಯ ಕಾಂಗ್ರೆಸ್ ನಾಯಕರು ಕೂಡಾ 16 ಕಿ.ಮೀ ದೂರದ ಟ್ರೆಕ್ಕಿಂಗ್ ನಲ್ಲಿ ಪಾಲ್ಗೊಂಡಿದ್ದರು. [ಆಮ್ ಆದ್ಮಿ'ಯಂತೆ ಹೊರಟ ರಾಹುಲ್]

8ನೇ ಶತಮಾನದ ಕೇದಾರನಾಥ ದೇಗುಲ ಪ್ರವೇಶಿಸುತ್ತಿದ್ದಂತೆ ನನ್ನಲ್ಲಿ ಅಗ್ನಿ ಜ್ವಾಲೆ ಪ್ರವೇಶಿಸಿದಂತೆ ಭಾಸವಾಯಿತು ಎಂದು ರಾಹುಲ್ ಗಾಂಧಿ ಹೇಳಿದರು.

ಹಿಮಾಲಯದ ತಪ್ಪಲಿನ ಕೇದಾರನಾಥ್ ದೇಗುಲ

ಹಿಮಾಲಯದ ತಪ್ಪಲಿನ ಕೇದಾರನಾಥ್ ದೇಗುಲ

ಹಿಮಾಲಯದ ತಪ್ಪಲಿನ ಕೇದಾರನಾಥ್ ದೇಗುಲ ಪ್ರತಿವರ್ಷ ಅಕ್ಟೊಬರ್ -ನವೆಂಬರ್ ನಲ್ಲಿ ಮುಚ್ಚಲ್ಪಡುತ್ತದೆ. ಏಪ್ರಿಲ್ -ಮೇ ತಿಂಗಳಲ್ಲಿ ಸಾರ್ವಜನಿಕ ದರ್ಶನಕ್ಕೆ ಮುಕ್ತವಾಗಿರುತ್ತದೆ.

ಈ ಬಾರಿ ಏ.24ರಿಂದ ಕೇದಾರನಾಥ ದೇಗುಲ ದ್ವಾರ ತೆರೆಯಲಾಗಿದೆ. ಸಮುದ್ರ ಮಟ್ಟದಿಂದ ಸುಮಾರು 3,581 ಮೀಟರ್ ಎತ್ತರದಲ್ಲಿರುವ ಈ ದೇಗುಲದ ಪರಮಶಿವನನ್ನು ಕಾಣುವುದೇ ಒಂದು ಯೋಗ.

ದೇಗುಲ ದರ್ಶನದ ನಂತರ ರಾಹುಲ್ ಹೇಳಿದ್ದೇನು

ದೇಗುಲ ದರ್ಶನದ ನಂತರ ರಾಹುಲ್ ಮಾತನಾಡಿ ದೇಗುಲದ ಪ್ರವೇಶಿಸುತ್ತಿದ್ದಂತೆ ಹೊಸ ಚೈತನ್ಯ ಪಡೆದೆ ಎಂದಿದ್ದಾರೆ.

ರಾಹುಲ್ ಹಿಮಾಲಯ ಯಾತ್ರೆ ವಿಶೇಷ

ರಾಹುಲ್ ಹಿಮಾಲಯ ಯಾತ್ರೆ ವಿಶೇಷ

55-56 ದಿನಗಳ ಕಾಲ ಭಾರತದಿಂದ ಕಣ್ಮರೆಯಾಗಿದ್ದ ರಾಹುಲ್ ಗಾಂಧಿ ಅವರು ಭಾರತಕ್ಕೆ ಬಂದ ಮೇಲೆ ರೈತರ ಸಮಾವೇಶ, ಲೋಕಸಭೆ ಅಧಿವೇಶನದಲ್ಲಿ ಪಾಲ್ಗೊಂಡು ಭಾಷಣ ಮಾಡಿ ಮೋದಿ ಸರ್ಕಾರವನ್ನು ಕಾಡಿದ್ದರು. ಈಗ ಹಿಮಾಲಯದತ್ತ ಮುಖ ಮಾಡಿರುವುದು ಎಲ್ಲರ ಹುಬ್ಬೇರಿಸಿದೆ.

ಹೆಲಿಕಾಪ್ಟರ್ ಬೇಡ ಎಂದಿದ್ದೇಕೆ?

ಹೆಲಿಕಾಪ್ಟರ್ ಬೇಡ ಎಂದಿದ್ದೇಕೆ?

ಗೌರಿಕುಂಡದಿಂದ ಕಾಲ್ನಡಿಗೆಯಲ್ಲೇ ದೇಗುಲಕ್ಕೆ ತೆರಳಿದ್ದೇಕೆ? ಎಂಬ ಪ್ರಶ್ನೆಗೆ ಉತ್ತರಿಸಿದ ರಾಹುಲ್, ಕಳೆದ ಕೆಲ ವರ್ಷಗಳಲ್ಲಿ ಇಲ್ಲಿ ಅಪಾರ ಸಾವು ನೋವು ಸಂಭವಿಸಿದೆ. ಅವರೆಲ್ಲರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ನಾನು ಅವರು ತುಳಿದ ಹಾದಿಯಲ್ಲೇ ಸಾಗಬೇಕೆನಿಸಿತು. ಹೀಗಾಗಿ ಹೆಲಿಕಾಪ್ಟರ್ ನಲ್ಲಿ ಪ್ರಯಾಣ ಬೆಳೆಸಲಿಲ್ಲ. ಯಾತ್ರೆಯ ನಿಜವಾದ ಅನುಭವ ಕಾಲ್ನಡಿಗೆಯಲ್ಲೇ ಸಿಗುತ್ತದೆ ಎಂದಿದ್ದಾರೆ.

ನಮ್ಮ ಯೋಧರ ರಕ್ಷಣಾ ಕಾರ್ಯಕ್ಕೆ ನನ್ನ ಸಲಾಮ್

ನಮ್ಮ ಯೋಧರ ರಕ್ಷಣಾ ಕಾರ್ಯಕ್ಕೆ ನನ್ನ ಸಲಾಮ್

ಇಲ್ಲಿ ದುರಂತ ನಡೆದಾಗ ಸರಿಯಾದ ರಕ್ಷಣಾ ಕಾರ್ಯ ನಡೆಸಲಿಲ್ಲ ಎಂದು ಹಲವಾರು ಮಂದಿ ದೂರಿದ್ದರು. ಅದರೆ, ನಮ್ಮ ಸೇನೆ ಹಾಗೂ ಪೊಲೀಸರು ಅದ್ಭುತ ಕಾರ್ಯಾಚರಣೆ ಮೂಲಕ ಹಲವಾರು ಜನರನ್ನು ರಕ್ಷಿಸಿದ್ದಾರೆ. ಅವರಿಗೆ ನನ್ನ ಸಲಾಮ್ ಎಂದು ರಾಹುಲ್ ಹೇಳಿದರು.

ಚಾರ್ ಧಾಮ್ ಯಾತ್ರೆ

ಚಾರ್ ಧಾಮ್ ಯಾತ್ರೆ

ಕೇದಾರನಾಥ, ಬದ್ರಿನಾಥ, ಯಮುನೋತ್ರಿ ಹಾಗೂ ಗಂಗೋತ್ರಿ ಚಾರ್ ಧಾಮ್ ಯಾತ್ರೆ ಕೈಗೊಳ್ಳುವ ಭಕ್ತರಿಗೆ ಸಕಲ ಸೌಕರ್ಯ ಒದಗಿಸುವಂತೆ ಉತ್ತರಾಖಂಡ ಸಿಎಂ ಹರೀಶ್‌ ರಾವತ್‌ ಅವರಲ್ಲಿ ರಾಹುಲ್ ಮನವಿ ಮಾಡಿದರು.

ಕೇದಾರನಾಥ ದೇಗುಲದ ಹೊರಗೆ ರಾಹುಲ್

ಕೇದಾರನಾಥ ದೇಗುಲದ ಹೊರಗೆ ರಾಹುಲ್ ಗಾಂಧಿ ಹಾಗೂ ಶೈವಮತದ ದೇಗುಲದ ಪ್ರಧಾನ ಅರ್ಚಕರೊಂದಿಗೆ ಕಾಣಿಸಿಕೊಂಡಿದ್ದು ಹೀಗೆ...

ಕೇದಾರನಾಥ ಪ್ರಧಾನ ಅರ್ಚಕರ ಜೊತೆ ರಾಹುಲ್

ಕೇದಾರನಾಥ ಪ್ರಧಾನ ಅರ್ಚಕರ ಜೊತೆ ರಾಹುಲ್

ಕೇದಾರನಾಥ ಪ್ರಧಾನ ಅರ್ಚಕರಾದ ರಾವಲ್ ಜಗದ್ಗುರು ಭೀಮಾಶಂಕರ್ ಲಿಂಗಾ ಶಿವಾಚಾರ್ಯ ಅವರ ಜೊತೆ ದೇಗುಲದ ಹೊರಗೆ ಬರುತ್ತಿರುವ ರಾಹುಲ್ ಗಾಂಧಿ. (ಪಿಟಿಐ)

ಅನುಭವ ಹಂಚಿಕೊಂಡ ರಾಹುಲ್ ಗಾಂಧಿ

ಅನುಭವ ಹಂಚಿಕೊಂಡ ರಾಹುಲ್ ಗಾಂಧಿ

ದೇಗುಲ ದರ್ಶನದ ನಂತರ ಮಾಧ್ಯಮ ಪ್ರತಿನಿಧಿಗಳ ಜೊತೆ ಅನುಭವ ಹಂಚಿಕೊಂಡ ರಾಹುಲ್ ಗಾಂಧಿ. (ಪಿಟಿಐ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
After spending the whole night at Gaurikund, Congress vice president Rahul Gandhi reached the revered ancient Kedarnath shrine in the lower Himalayas on Friday(Apr.24) morning. 'I normally don't pray for anything in Temples but today i found a force(like fire) inside the Temple' he said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more