ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೋಟೊಶಾಪ್ ಚಿತ್ರ: ಟ್ವಿಟ್ಟಿಗರಿಗೆ ಆಹಾರವಾದ ರಾಹುಲ್ ಗಾಂಧಿ!

|
Google Oneindia Kannada News

Recommended Video

ಮತ್ತೆ ಟ್ವಿಟ್ಟಿಗರ ಟ್ರೋಲ್ ಗೆ ಆಹಾರವಾದ ರಾಹುಲ್ ಗಾಂಧಿ

ನವದೆಹಲಿ, ಏಪ್ರಿಲ್ 9: ವೃದ್ಧೆಯೊಬ್ಬರನ್ನು ಅಪ್ಪಿಕೊಂಡು ರಾಹುಲ್ ಗಾಂಧಿ ಸಾಂತ್ವನ ಹೇಳುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಗೇಲಿಗೊಳಗಾಗುತ್ತಿದೆ. ಟ್ವಿಟ್ಟಿಗರು ರಾಹುಲ್ ಗಾಂಧಿಯ ಈ ಚಿತ್ರವನ್ನು ಹಂಚಿಕೊಂಡು ಜೋಕ್‌ಗಳ ಸರಮಾಲೆಯನ್ನೇ ಸೃಷ್ಟಿಸುತ್ತಿದ್ದಾರೆ.

ಲೋಕಸಭೆ ಚುನಾವಣೆಗೆ ಕೆಲವು ದಿನಗಳು ಬಾಕಿ ಇರುವಾಗಲೇ ಕಾಂಗ್ರೆಸ್ ತನ್ನ ಪ್ರಚಾರಕ್ಕಾಗಿ ಕಳಪೆ ಫೋಟೊಶಾಪ್ ಚಿತ್ರವನ್ನು ಬಳಸಿಕೊಂಡಿರುವುದು ಟ್ರೋಲ್ ಆಗುತ್ತಿದೆ.

ರಾಹುಲ್ ಗಾಂಧಿ ತಮ್ಮ ಮಾತಿನಲ್ಲಿ ಸಭ್ಯತೆ ಕಾಪಾಡಲಿ ಎಂದ ಸುಷ್ಮಾ ಸ್ವರಾಜ್ರಾಹುಲ್ ಗಾಂಧಿ ತಮ್ಮ ಮಾತಿನಲ್ಲಿ ಸಭ್ಯತೆ ಕಾಪಾಡಲಿ ಎಂದ ಸುಷ್ಮಾ ಸ್ವರಾಜ್

ರಾಹುಲ್ ಗಾಂಧಿ ವೃದ್ಧೆಯೊಬ್ಬರನ್ನು ಅಪ್ಪಿಕೊಂಡು ಸಂತೈಸುತ್ತಿರುವ ಚಿತ್ರವನ್ನು ಕಾಂಗ್ರೆಸ್ ಜಾಹೀರಾತುಗಳಲ್ಲಿ ಬಳಸಿಕೊಳ್ಳಲಾಗಿದೆ. ಬೇರೊಬ್ಬರ ದೇಹದ ಚಿತ್ರಕ್ಕೆ ರಾಹುಲ್ ಮುಖವನ್ನು ಅಂಟಿಸಿರುವುದು ಫೋಟೊಶಾಪ್ ಅಚಾತುರ್ಯದಿಂದ ಸ್ಪಷ್ಟವಾಗಿ ತಿಳಿಯುವಂತಿದೆ ಎಂದು ಟೀಕಿಸಲಾಗಿದೆ.

ಈ ಚಿತ್ರದ ಹಿನ್ನೆಲೆ ದೃಶ್ಯಗಳು ಕಾಣದಂತೆ ಸಂಪೂರ್ಣವಾಗಿ ಬ್ಲರ್ ಮಾಡಲಾಗಿದೆ. ಆದರೆ, ವೃದ್ಧೆಯನ್ನು ಬಳಸಿಕೊಂಡಿರುವ ರಾಹುಲ್‌ ಬಲಗೈ ಮತ್ತು ಎಡಗೈ ಆಕೆಯ ಮೇಲಿದ್ದರೆ, ಕೆಳಭಾಗದಲ್ಲಿ ಮತ್ತೊಂದು ಕೈ ಕಾಣಿಸುವಂತಿದೆ. ಈ ವ್ಯತ್ಯಾಸ ಸ್ಪಷ್ಟವಾಗಿ ಗೋಚರಿಸುತ್ತಿದೆ.

ಬಿಜೆಪಿ ಚುನಾವಣಾ ಪ್ರಣಾಳಿಕೆ ಬಗ್ಗೆ ರಾಹುಲ್ ಗಾಂಧಿ ಹೇಳಿದ್ದೇನು?ಬಿಜೆಪಿ ಚುನಾವಣಾ ಪ್ರಣಾಳಿಕೆ ಬಗ್ಗೆ ರಾಹುಲ್ ಗಾಂಧಿ ಹೇಳಿದ್ದೇನು?

ನೈಜ ಚಿತ್ರವನ್ನು ಬಳಸಿಕೊಂಡು ಕಳಪೆಯಾಗಿ ಎಡಿಟ್ ಮಾಡಿ ಪ್ರಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಈ ಚಿತ್ರದ ಅಧಿಕೃತತೆ ಬಗ್ಗೆ ರಾಹುಲ್ ವಿರೋಧಿಗಳು ಪ್ರಶ್ನಿಸುತ್ತಿದ್ದಾರೆ. ಆದರೆ, ಇದು ಬೇರೆಯವರ ದೇಹಕ್ಕೆ ಅಂಟಿಸಿರುವ ಚಿತ್ರವಲ್ಲ. ರಾಹುಲ್ ಗಾಂಧಿ ಅವರದೇ ನೈಜ ಚಿತ್ರ ಎಂದು ಅನೇಕರು ಅದಕ್ಕೆ ಪ್ರತಿಕ್ರಿಯೆ ನೀಡಿ ಮೂಲ ಚಿತ್ರ ಎಂದು ಮತ್ತೊಂದು ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಕಾಂಗ್ರೆಸ್‌ನ ಮತ್ತೊಬ್ಬ ನಾಯಕರ ಕೈ ಹಿನ್ನೆಲೆಯಲ್ಲಿ ಇರುವುದು ಈ ಚಿತ್ರಗಳಲ್ಲಿ ಕಾಣಿಸುತ್ತಿದೆ.

ಈ ಮೂರನೇ ಕೈ ಯಾರದ್ದು

ರಾಹುಲ್ ಗಾಂಧಿ ಅವರ ಈ ಚಿತ್ರವನ್ನು ಬಿಜೆಪಿಯ ದೆಹಲಿ ವಕ್ತಾರ ತೇಜಿಂದರ್ ಪಾಲ್ ಸಿಂಗ್ ಬಗ್ಗಾ ಲೇವಡಿ ಮಾಡಿದ್ದಾರೆ. 'ಈ ಮೂರನೇ ಕೈ ಯಾರದ್ದು ರಾಹುಲ್ ಜೀ?' ಎಂದು ವ್ಯಂಗ್ಯವಾಗಿ ಪ್ರಶ್ನಿಸಿರುವ ಬಗ್ಗಾ, ನಿನ್ನೆಯಷ್ಟೇ ನಿಮಗೆ ಹೇಳಿದ್ದೆ ಒಳ್ಳೆಯ ಪ್ರಚಾರ ಸಂಪರ್ಕ ಸಂಸ್ಥೆಯನ್ನು (ಪಿಆರ್ ಏಜೆನ್ಸಿ) ಪಡೆದುಕೊಳ್ಳಿ' ಎಂಬುದಾಗಿ ರಾಹುಲ್ ಕಾಲೆಳೆದಿದ್ದಾರೆ.

ಉತ್ತಮ ಎಡಿಟಿಂಗ್

ಇದಕ್ಕಿಂತ ಉತ್ತಮ ಎಡಿಟಿಂಗ್ ಎಂದು ಮೌಸಮಿ ಸಿಂಗ್ ಎಂಬುವವರು ರಾಹುಲ್ ಗಾಂಧಿ ವಿಮಾನದ ಮೇಲೆ ನಡೆದುಕೊಂಡು ಹೋಗುತ್ತಿರುವ ಚಿತ್ರವನ್ನು ಹಾಕಿ ಲೇವಡಿ ಮಾಡಿದ್ದಾರೆ.

ವಯನಾಡಿನಲ್ಲಿ ರಾಹುಲ್ vs ರಾಹುಲ್ vs ರಾಹುಲ್ ಗಾಂಧಿವಯನಾಡಿನಲ್ಲಿ ರಾಹುಲ್ vs ರಾಹುಲ್ vs ರಾಹುಲ್ ಗಾಂಧಿ

ನೈಜ ಚಿತ್ರ ಇಲ್ಲಿದೆ ನೋಡಿ

ಬಗ್ಗಾ ಅವರ ಟೀಕೆಗೆ ಅನೇಕರು ತೀಕ್ಷ್ಣ ಪ್ರತ್ಯುತ್ತರ ನೀಡಿದ್ದಾರೆ. ರಾಹುಲ್ ತಮಿಳುನಾಡಿಗೆ 2015ರಲ್ಲಿ ಭೇಟಿ ನೀಡಿದ್ದಾಗ ತೆಗೆದ ಚಿತ್ರವಿದು. ವೃದ್ಧೆಯ ಮೇಲೆ ಕಾಣುವ ಮೂರನೇ ಕೈ ಯಾರದ್ದೆಂದು ನೋಡಿ ಗೊತ್ತಾಗುತ್ತದೆ ಎಂದು ಮೂಲ ಚಿತ್ರ ಎನ್ನಲಾದ ಫೋಟೊ ಪ್ರಕಟಿಸಿದ್ದಾರೆ.

72 ಸಾವಿರ ರೂಪಾಯಿ ಭರವಸೆ

72 ಸಾವಿರ ರೂಪಾಯಿ ಭರವಸೆ

ಕಾಂಗ್ರೆಸ್‌ನ 'ನ್ಯಾಯ್' ಯೋಜನೆಯ ಪ್ರಚಾರಕ್ಕಾಗಿ ಈ ಚಿತ್ರವನ್ನು ಬಳಸಿಕೊಳ್ಳಲಾಗಿದ್ದು, ದೇಶದಾದ್ಯಂತ ಪತ್ರಿಕೆಗಳ ಜಾಹೀರಾತುಗಳಲ್ಲಿ ಪ್ರಕಟವಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಶೇ 20ರಷ್ಟು ಕಡುಬಡವ ಕುಟುಂಬಗಳಿಗೆ ವರ್ಷಕ್ಕೆ 72 ಸಾವಿರ ರೂಪಾಯಿ ನೀಡುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ. ಈ ಭರವಸೆಯನ್ನು ಅದು ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ.

English summary
Congress President Rahul Gandhi gets trolled on Social Media for photoshopped image used in Nyay scheme advertisements.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X