• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪರಿಕರ್ ಗೆ ಕರುಳು ಕತ್ತರಿಸುವಂಥ ಪತ್ರ ಬರೆದ ರಾಹುಲ್ ಗಾಂಧಿ!

By Anil Achar
|

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕರ್ ಗೆ ಬುಧವಾರ ಪತ್ರವೊಂದನ್ನು ಬರೆದಿದ್ದಾರೆ. ರಾಹುಲ್ ಗಾಂಧಿ ಅವರು ತಮ್ಮನ್ನು ಭೇಟಿ ಆದ ನಂತರ ರಫೇಲ್ ಯುದ್ಧ ವಿಮಾನದ ವಿಚಾರದಲ್ಲಿ ನೀಡಿದ ಹೇಳಿಕೆ ಚಿಲ್ಲರೆ ರಾಜಕಾರಣ ಎಂದು ಪರಿಕರ್ ಪತ್ರ ಬರೆದು, ಅದು ಮಾಧ್ಯಮಗಳಿಗೆ ದೊರೆತಿದ್ದವು.

ಇದೀಗ ರಾಹುಲ್ ಗಾಂಧಿ ಅವರು ಪರಿಕರ್ ಗೆ ಪತ್ರ ಬರೆದಿದ್ದಾರೆ. ಆ ಪತ್ರದಲ್ಲಿ ಏನಿದೆ ಎಂಬುದು ಇಲ್ಲಿ ನೀಡಲಾಗಿದೆ.

ಪ್ರಿಯ ಪರಿಕರ್ ಜೀ,

ನೀವು ನನಗೆ ಬರೆಯಬೇಕಿದ್ದ ಪತ್ರದ ಬಗ್ಗೆ ಕೇಳಿ ತಿಳಿದು, ಬಹಳ ಬೇಸರ ಆಯಿತು. ಆದರೆ ಮಾಧ್ಯಮಗಳಿಗೆ ಅದು ಸೋರಿಕೆ ಅಗುವ ಬದಲು ನನಗೆ ಓದುವ ಅವಕಾಶ ಸಿಗಬೇಕಿತ್ತು.

ಗೌರವಪೂರ್ವಕವಾಗಿ, ನಾನು ನಿಮ್ಮನ್ನು ಭೇಟಿ ಆಗಿದ್ದು ವೈಯಕ್ತಿಕವಾಗಿಯಷ್ಟೇ. ನಿಮ್ಮ ಸದ್ಯದ ಪರಿಸ್ಥಿತಿಗೆ ಸಹಾನುಭೂತಿ ತೋರಿಸುವ ಉದ್ದೇಶದಿಂದ ಅಷ್ಟೇ ಅಗಿತ್ತು. ಈ ಹಿಂದೆ ನೀವು ಯುನೈಟೆಡ್ ಸ್ಟೇಟ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೂ ನಿಮಗೆ ಕರೆ ಮಾಡಿ, ಆರೋಗ್ಯದ ಬಗ್ಗೆ ವಿಚಾರಿಸಿದ್ದೆ. ನಿಮಗೆ ಒಳ್ಳೆಯದಾಗಲಿ ಎಂದು ಹಾರೈಸಿದ್ದೆ ಎಂಬುದನ್ನು ನೀವು ನೆನಪಿಸಿಕೊಂಡರೆ ಈಗ ನಿಮಗೆ ಅನುಮಾನ ಬರಲಿಕ್ಕಿಲ್ಲ.

ಆದರೆ, ಪರಿಕರ್ ಜೀ, ನನ್ನ ಭೇಟಿಯನ್ನು ಹೊರತುಪಡಿಸಿ, ನಾನೊಬ್ಬ ಪ್ರಜಾ ಪ್ರತಿನಿಧಿ. ಭಾರತದ ಪ್ರಜೆಗಳಿಗೆ ಸೇವೆ ಸಲ್ಲಿಸಲು ಆಯ್ಕೆಯಾದಂಥ ವ್ಯಕ್ತಿ. ಮತ್ತು ಆ ಕಾರಣಕ್ಕೆ ರಫೇಲ್ ವ್ಯವಹಾರದಲ್ಲಿ ಅಪ್ರಾಮಾಣಿಕರಾಗಿರುವ ಭ್ರಷ್ಟ ಪ್ರಧಾನಿಗಳ ಮೇಲೆ ವಾಗ್ದಾಳಿ ಮಾಡುವ ಎಲ್ಲ ಹಕ್ಕು ನನಗಿದೆ.

'ರಫೇಲ್ ಸತ್ಯ ಪರಿಕರ್ ಗೆ ಗೊತ್ತಿದೆ, ಅದಕ್ಕೆ ಅವರ ಬಗ್ಗೆ ಮೋದಿಗೆ ಹೆದರಿಕೆ'

ನಿನ್ನೆ ನಿಮ್ಮನ್ನು ಗೋವಾದಲ್ಲಿ ಭೇಟಿ ಆದೆನಲ್ಲಾ ಆಗಿನ ನಮ್ಮ ಮಾತುಕತೆಯ ಯಾವುದೇ ಮಾಹಿತಿಯನ್ನು ನಾನು ಹಂಚಿಕೊಂಡಿಲ್ಲ. ನಮ್ಮ ಭೇಟಿ ಆದ ನಂತರ ನನ್ನ ಎರಡು ಭಾಷಣಗಳಲ್ಲಿ, ಈಗಾಗಲೇ ಸಾರ್ವಜನಿಕವಾಗಿ ಹೇಳಿದ್ದನ್ನೇ ಮತ್ತೆ ಉಲ್ಲೇಖ ಮಾಡಿದ್ದೇನೆ ಅಷ್ಟೇ.

ವಾಸ್ತವ ಏನೆಂದರೆ, 2015ರ ಏಪ್ರಿಲ್ ನಲ್ಲಿ ನೀವು ಗೋವಾದಲ್ಲಿ ಮೀನು ಮಾರುಕಟ್ಟೆ ಉದ್ಘಾಟನೆ ಮಾಡುತ್ತಿರುವಾಗ ಪ್ರಧಾನಿ ನರೇಂದ್ರ ಮೋದಿ ಫ್ರಾನ್ಸ್ ನ ಆಗಿನ ಅಧ್ಯಕ್ಷ ಹೊಲಾಂಡ್ ಜತೆಗೆ ರಫೇಲ್ ಖರೀದಿ ಘೋಷಣೆ ಮಾಡಿದರು. ಇನ್ನೊಂದು ವಿಚಾರ ಕೂಡ ಇಲ್ಲಿ ಸ್ಪಷ್ಟ. ಪ್ರಧಾನಿಗಳು ರೂಪಿಸಿದ ಈ ವ್ಯವಹಾರದ ಬಗ್ಗೆ ನಿಮಗೆ ಏನೂ ಗೊತ್ತಿಲ್ಲ ಎಂಬುದನ್ನು ಮಾಧ್ಯಮಗಳಿಗೆ ನೀವೇ ಹೇಳಿದ್ದೀರಿ. ಅದು ಎಲ್ಲ ಮಾಧ್ಯಮಗಳಲ್ಲಿ ವರದಿ ಕೂಡ ಆಗಿದೆ.

ರಫೇಲ್ ಬಗ್ಗೆ ರಾಹುಲ್ ಸುಳ್ಳು ಹೇಳಿದರೆ? ಪರಿಕ್ಕರ್ ಪತ್ರದಲ್ಲಿರುವುದೇನು?

ಇನ್ನೊಂದು ವಾಸ್ತವ ಏನೆಂದರೆ, ಗೋವಾದ ನಿಮ್ಮದೇ ಸಂಪುಟ ಸಹೋದ್ಯೋಗಿಯ ಆಡಿಯೋ ರೆಕಾರ್ಡಿಂಗ್ ಇದೆ. ನಿಮ್ಮ ಮನೆಯ 'ಬೆಡ್ ರೂಮ್'ನಲ್ಲಿ ರಫೇಲ್ ಕಡತಗಳು ಇವೆ ಎಂದು ಸಂಪುಟ ಸಭೆಯಲ್ಲಿ ಸಚಿವರ ಬಳಿ ಹೇಳಿಕೊಂಡಿದ್ದೀರಿ ಎಂಬ ಮಾತನ್ನು ಆ ಸಚಿವ ಹೇಳಿದ್ದಾರೆ. ಅದರ ಅರ್ಥ ಪ್ರಧಾನಿ ಅವರ ಮರ್ಯಾದೆಗೆ ಅಂಜಿರುವ ಕಾರಣಕ್ಕೆ ನೀವು ಅಧಿಕಾರದಲ್ಲಿ ಇದ್ದೀರಿ ಅಂತ ತಾನೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
AICC president writes a letter to Goa CM Manohar Parrikar about his recent allegation against statement and called as 'petty politics' by Congress. Here is the complete details of Letter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more