ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತರ ಜಮೀನು, ಮೋದಿ ಕೈವಶವಾಗಲು ಬಿಡುವುದಿಲ್ಲ: ರಾಹುಲ್

By Mahesh
|
Google Oneindia Kannada News

ಬೆಂಗಳೂರು ಜುಲೈ 24: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ರೈತರ ಕಷ್ಟ ಸುಖ ವಿಚಾರಿಸಲು ದಕ್ಷಿಣ ಭಾರತಕ್ಕೆ ಬಂದಿದ್ದಾರೆ. ಬೆಂಗಳೂರಿಗೆ ಬಂದು ನಂತರ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಪಾದಯಾತ್ರೆ ಕೈಗೊಂಡರು.

ಅಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಸಾಲ ಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ರಾಹುಲ್ ಗಾಂಧಿ ಅವರು ಮೋದಿ ಸರ್ಕಾರದ ಭೂಸ್ವಾದೀನ ಕಾಯ್ದೆ ವಿರುದ್ಧ ಕಿಡಿಕಾರಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ರೈತರಿಂದ ಒಂದಿಂಚು ಜಮೀನನ್ನು ಕಿತ್ತುಕೊಳ್ಳಲು ಅವಕಾಶ ನೀಡುವುದಿಲ್ಲ ಕೇಂದ್ರ ಸರ್ಕಾರದ ಉದ್ದೇಶಿತ ಭೂ ಸ್ವಾಧೀನ ಮಸೂದೆ ರೈತ ವಿರೋಧಿಯಾಗಿದ್ದು, ಕಾರ್ಪೊರೇಟ್ ಕಂಪನಿಗಳಿಗೆ ಮಾತ್ರ ನೆರವಾಗಲಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿ ಹೇಳಿದರು.

ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು 1979ರಲ್ಲಿ ಭಾಷಣ ಮಾಡಿದ್ದ ಓಬುಳದೆವರ ಚೆರುವು ಊರಿನಿಂದಲೇ ಪಾದಯಾತ್ರೆ ಕೈಗೊಂಡಿರುವುದು ನನ್ನ ಭಾಗ್ಯ ಎಂದು ರಾಹುಲ್ ಗಾಂಧಿ ಹೇಳಿದರು. ಪಾದಯಾತ್ರೆ ಚಿತ್ರಗಳು ಮುಂದಿವೆ...

ಬೆಂಗಳೂರಿಗೆ ಬಂದಿದ್ದ ಕಾಂಗ್ರೆಸ್ ಯುವರಾಜ

ಬೆಂಗಳೂರಿಗೆ ಬಂದಿದ್ದ ಕಾಂಗ್ರೆಸ್ ಯುವರಾಜ

ಆಂಧ್ರಪ್ರದೇಶಕ್ಕೆ ತೆರಳುವುದಕ್ಕೂ ಮುನ್ನ ಬೆಂಗಳೂರಿನ ಹೊರ ವಲಯದ ರೆಸಾರ್ಟ್ ನಲ್ಲಿ ತಂಗಿದ್ದ ರಾಹುಲ್ ಗಾಂಧಿ ಅವರನ್ನು ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಸ್ವಾಗತಿಸಿದರು. ನಂತರ ಚಿಕ್ಕಬಳ್ಳಾಪುರ ಮಾರ್ಗವಾಗಿ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಗ್ರಾಮಕ್ಕೆ ತೆರಳಿದರು.

ಮಾಜಿ ಪ್ರಧಾನಿ ಇಂದಿರಾಗಾಂಧಿ ಭೇಟಿ ನೀಡಿದ್ದ ಗ್ರಾಮ

ಮಾಜಿ ಪ್ರಧಾನಿ ಇಂದಿರಾಗಾಂಧಿ ಭೇಟಿ ನೀಡಿದ್ದ ಗ್ರಾಮ

ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು 1979ರಲ್ಲಿ ಭಾಷಣ ಮಾಡಿದ್ದ ಓಬುಳದೆವರ ಚೆರುವು ಊರಿನಿಂದ 5 ಕಿ.ಮೀ ಪಾದಯಾತ್ರೆ ಕೈಗೊಂಡರು. ಮಾಮಿಲ್ಲ ಕುಂಟಪಲ್ಲಿಯಲ್ಲಿ ರೈತರ ಜೊತೆ ಸಂವಾದ ನಡೆಸಿದರು. ವಿದ್ಯಾರ್ಥಿಗಳು, ನೇಕಾರರು ಕೂಡಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕುಂಟಪಲ್ಲಿಯಿಂದ ಕೊಂಡಕಮರ್ಲಾಗೆ ಪಾದಯಾತ್ರೆ

ಕುಂಟಪಲ್ಲಿಯಿಂದ ಕೊಂಡಕಮರ್ಲಾಗೆ ಪಾದಯಾತ್ರೆ

ಕುಂಟಪಲ್ಲಿಯಿಂದ ಕೊಂಡಕಮರ್ಲಾಗೆ ಪಾದಯಾತ್ರೆ ಕೈಗೊಂಡ ರಾಹುಲ್ ಗಾಂಧಿ ಅವರು ಎಂಜಿಎನ್ ಆರ್ ಇಜಿಎಸ್ ಕಾರ್ಮಿಕರ ಜೊತೆ ಮಾತುಕತೆ ನಡೆಸಿದರು.

ಸ್ತ್ರೀ ಸ್ವ ಸಹಾಯ ಗುಂಪಿನೊಡನೆ ಚರ್ಚೆ

ಸ್ತ್ರೀ ಸ್ವ ಸಹಾಯ ಗುಂಪಿನೊಡನೆ ಚರ್ಚೆ

ಪಾದಯಾತ್ರೆ ನಡುವೆ ಸ್ತ್ರೀ ಸ್ವ ಸಹಾಯ ಗುಂಪಿನೊಡನೆ ಚರ್ಚೆ ನಡೆಸಿದ ರಾಹುಲ್ ಗಾಂಧಿ ಅವರು ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡಿದರು. ರಾಹುಲ್ ಜೊತೆ ಎಪಿಸಿಸಿ ಅಧ್ಯಕ್ಷ ಎನ್ ರಘುವೀರ್ ರೆಡ್ಡಿ, ನಟ, ರಾಜಕಾರಣಿ ಚಿರಂಜೀವಿ ಇದ್ದರು.

ಆಂಧ್ರ ವಿಭಜನೆ ನಂತರ ಮೊದಲ ಭೇಟಿ

ಆಂಧ್ರ ವಿಭಜನೆ ನಂತರ ಮೊದಲ ಭೇಟಿ

ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲಾಗುವುದೆಂದು ಮೋದಿ ಹೇಳಿದ್ದರು. ರಾಜ್ಯ ರಚನೆಯಾಗಿ ಒಂದೂವರೆ ವರ್ಷ ಕಳೆದರೂ ಭರವಸೆ ಈಡೇರಿಲ್ಲ. ಇದು ವಚನ ಭ್ರಷ್ಟತೆಯಲ್ಲವೇ ಎಂದು ಮೋದಿಯನ್ನು ಪ್ರಶ್ನೆ ಮಾಡಿದರು. ಬಳಿಕ ಅವರು, ಪುಟ್ಟಪರ್ತಿಗೆ ತೆರಳಿ ಸತ್ಯ ಸಾಯಿಬಾಬಾ ಸಮಾಧಿ ಸ್ಥಳವನ್ನು ವೀಕ್ಷಿಸಿದರು. ರೈತ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.

ರೈತರ ಆತ್ಮಹತ್ಯೆ ಪ್ರಕರಣಗಳ ಬಗ್ಗೆ ರಾಹುಲ್

ರೈತರ ಆತ್ಮಹತ್ಯೆ ಪ್ರಕರಣಗಳ ಬಗ್ಗೆ ರಾಹುಲ್

ಕರ್ನಾಟಕದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದು . ಸರ್ಕಾರದ ಅಂಕಿಅಂಶಗಳ ಪ್ರಕಾರ ಸುಮಾರು 70ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಾಸ್ತವವಾಗಿ 120ಕ್ಕೂ ಹೆಚ್ಚು ಜನ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.

ಸಾವಿಗೆ ಪ್ರಮುಖವಾಗಿ ಸಾಲ ಬಾಧೆ ಕಾರಣ

ಸಾವಿಗೆ ಪ್ರಮುಖವಾಗಿ ಸಾಲ ಬಾಧೆ ಕಾರಣ

ರೈತರ ಸಾವಿಗೆ ಪ್ರಮುಖವಾಗಿ ಸಾಲ ಬಾಧೆ ಕಾರಣ ಎಂದು ಹೇಳಲಾಗುತ್ತಿದೆ. ಸರ್ಕಾರ ಸಾಲ ಮನ್ನಾ ಸೇರಿದಂತೆ ಸಾಧ್ಯವಿರುವ ಎಲ್ಲಾ ಕ್ರಮಕೈಗೊಂಡು ರೈತರಲ್ಲಿ ಆತ್ಮಸ್ಥೈರ್ಯ ಮೂಡಿಸುವ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.

ಎಸ್.ಎಂ.ಕೃಷ್ಣ ಅವರಿಗೆ ಶ್ಲಾಘನೆ

ಎಸ್.ಎಂ.ಕೃಷ್ಣ ಅವರಿಗೆ ಶ್ಲಾಘನೆ

ಮಾಜಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರು ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ಭೇಟಿ ನೀಡಿರುವುದನ್ನು ರಾಹುಲ್‌ಗಾಂಧಿ ಶ್ಲಾಘಿಸಿದ್ದಾರೆ. ಜವಾಬ್ದಾರಿಯುತ ಸರ್ಕಾರವಾಗಿ ಸಚಿವರು ಮತ್ತು ಮುಖ್ಯಮಂತ್ರಿ ಆರಂಭದಲ್ಲೇ ಈ ಕೆಲಸ ಮಾಡಬೇಕಿತ್ತು. ರೈತರ ಆತ್ಮಹತ್ಯೆ ಪ್ರಕರಣಗಳನ್ನು ನಿರ್ಲಕ್ಷಿಸಬಾರದು ಎಂದರು

ಕರ್ನಾಟಕದಲ್ಲಿ ಎರಡು ದಿನಗಳ ಪ್ರವಾಸ

ಕರ್ನಾಟಕದಲ್ಲಿ ಎರಡು ದಿನಗಳ ಪ್ರವಾಸ

ರ್ನಾಟಕದಲ್ಲಿ ಎರಡು ದಿನಗಳ ಪ್ರವಾಸ ಹಮ್ಮಿಕೊಳ್ಳಲು ನಿರ್ಧರಿಸಿದ್ದು, ಸೂಕ್ತ ದಿನಾಂಕವನ್ನು ನಿಗದಿಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೂಚನೆ ನೀಡಿದ್ದಾರೆ.ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗಳಿಗೆ ನಾನೇ ಖುದ್ಧಾಗಿ ಭೇಟಿ ನೀಡುತ್ತೇನೆ. ತಮಿಳುನಾಡು, ಆಂಧ್ರಪ್ರದೇಶ ಪ್ರವಾಸ ಮುಗಿದ ನಂತರ ಕರ್ನಾಟಕದಲ್ಲಿ ರೈತರನ್ನು ಭೇಟಿ ಮಾಡಲು ಸಮಯ ಹೊಂದಿಸಿಕೊಳ್ಳುತ್ತೇನೆ ಎಂದರು.

English summary
Congress Vice President Rahul Gandhi on Friday began his 10 km-long ‘padyatra’ from a village in the district to highlight the issues faced by farmers and women Self-Help Groups.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X