ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರೆಸ್ಸೆಸ್‌ಗೆ ಸತ್ಯ ಗೊತ್ತಿದೆ, ಆದರೆ ಹೇಳಲು ಭಯ: ರಾಹುಲ್ ಗಾಂಧಿ ಟೀಕೆ

|
Google Oneindia Kannada News

ನವದೆಹಲಿ, ಅಕ್ಟೋಬರ್ 26: ನಾಗಪುರದಲ್ಲಿ ನಡೆದ ವಿಜಯದಶಮಿ ಉತ್ಸವದ ವೇಳೆ ಚೀನಾ ಕುರಿತು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ನೀಡಿದ ಹೇಳಿಕೆಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.

'ಒಳಭಾಗದಲ್ಲಿ ಭಾಗವತ್ ಅವರಿಗೆ ಸತ್ಯ ಏನೆಂಬುದು ತಿಳಿದಿದೆ. ಆದರೆ ಅದನ್ನು ಎದುರಿಸಲು ಅವರು ಹೆದರಿದ್ದಾರೆ. ಸತ್ಯವೇನೆಂದರೆ ಚೀನಾವು ನಮ್ಮ ಭೂಮಿಯನ್ನು ವಶಪಡಿಸಿಕೊಂಡಿದೆ ಮತ್ತು ಸರ್ಕಾರ ಹಾಗೂ ಆರೆಸ್ಸೆಸ್ ಅದಕ್ಕೆ ಅವಕಾಶ ನೀಡಿದೆ' ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಶಕ್ತಿ, ವ್ಯಾಪ್ತಿಯಲ್ಲಿ ಚೀನಾ ಮೀರಿಸಿ ಭಾರತ ಬೆಳೆಯಲಿ: ಭಾಗ್ವತ್ ಶಕ್ತಿ, ವ್ಯಾಪ್ತಿಯಲ್ಲಿ ಚೀನಾ ಮೀರಿಸಿ ಭಾರತ ಬೆಳೆಯಲಿ: ಭಾಗ್ವತ್

'ಸೇನಾ ಸಿದ್ಧತೆಗಳ ವಿಚಾರದಲ್ಲಿ ಭಾರತವು ಚೀನಾವನ್ನು ಮೀರಿ ಬೆಳೆಯಬೇಕಿದೆ. ಚೀನಾದ ವಿಸ್ತರಣಾ ನೀತಿಗಳ ಬಗ್ಗೆ ಜಗತ್ತಿಗೆ ಅರಿವಿದೆ. ಚೀನಾದ ವಿಸ್ತರಣಾ ಆಕ್ರಮಣಗಳಿಗೆ ತೈವಾನ್ ಮತ್ತು ವಿಯೆಟ್ನಾಂ ಉದಾಹರಣೆ. ಅನೇಕ ದೇಶಗಳು ಈಗ ಚೀನಾ ವಿರುದ್ಧ ಸಿಡಿದೆದ್ದಿವೆ' ಎಂದು ಮೋಹನ್ ಭಾಗವತ್ ಹೇಳಿದ್ದರು.

Rahul Gandhi Jibe At RSS Chief Mohan Bhagwat For His Comment On China

'ನಮ್ಮ ರಕ್ಷಣಾ ಪಡೆಗಳು, ಸರ್ಕಾರ ಮತ್ತು ಜನರು ನಮ್ಮ ಪ್ರದೇಶಗಳನ್ನು ಅತಿಕ್ರಮಣ ಮಾಡುವ ಚೀನಾದ ಪ್ರಯತ್ನಗಳಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ತನ್ನ ನುಸುಳುವಿಕೆಯ ಪ್ರಯತ್ನಕ್ಕೆ ಭಾರತದ ಪ್ರತಿಕ್ರಿಯೆ ಕಂಡು ಚೀನಾ ದಂಗಾಗಿದೆ' ಎಂದು ಶ್ಲಾಘಿಸಿದ್ದರು.

ಮುಸ್ಲಿಮರ ಬಗ್ಗೆ ಮೋಹನ್ ಭಾಗ್ವತ್ ಹೇಳಿಕೆಗೆ ಓವೈಸಿ ತಿರುಗೇಟು ಮುಸ್ಲಿಮರ ಬಗ್ಗೆ ಮೋಹನ್ ಭಾಗ್ವತ್ ಹೇಳಿಕೆಗೆ ಓವೈಸಿ ತಿರುಗೇಟು

'ಅದು ಹೇಗೆ ಪ್ರತಿಕ್ರಿಯಿಸುತ್ತದೆ ಎನ್ನುವುದು ನಮಗೆ ಗೊತ್ತಿಲ್ಲ. ಹೀಗಾಗಿ ನಮ್ಮ ಮುಂದೆ ಇರುವ ಗುರಿ ಎಚ್ಚರಿಕೆಯಿಂದ ಇರುವುದು ಮತ್ತು ಸಿದ್ಧರಾಗಿರುವುದು. ಚೀನಾ ವಿರುದ್ಧ ನಾವು ಸೇನಾ ಸಿದ್ಧತೆ, ಆರ್ಥಿಕ ಸನ್ನಿವೇಶ, ಅಂತಾರಾಷ್ಟ್ರೀಯ ಸಂಬಂಧಗಳು ಮತ್ತು ನೆರೆಯ ದೇಶಗಳೊಂದಿಗಿನ ಸಂಬಂಧಗಳ ವಿಚಾರಗಳಲ್ಲಿ ಹೆಚ್ಚು ಶಕ್ತಿಶಾಲಿಯಾಗಬೇಕು' ಎಂದಿದ್ದರು.

English summary
Congress leader Rahul Gandhi jibe at RSS chief Mohan Bhagwat, he knows the truth is China has taken our land, but he scared of it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X