ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತ್ಯ ಎಷ್ಟು ಸುಂದರವಾಗಿ ಹೊರಬರುತ್ತದೆ: ರಾಹುಲ್ ಗಾಂಧಿ ಲೇವಡಿ

|
Google Oneindia Kannada News

ನವದೆಹಲಿ, ಫೆಬ್ರವರಿ 24: ಅಹಮದಾಬಾದ್‌ನ ಸರ್ದಾರ್ ಪಟೇಲ್ ಕ್ರೀಡಾಂಗಣಕ್ಕೆ ನರೇಂದ್ರ ಮೋದಿ ಕ್ರೀಡಾಂಗಣ ಎಂದು ಮರುನಾಮಕರಣ ಮಾಡಿದ್ದಕ್ಕಾಗಿ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಜಗತ್ತಿನ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂಗೆ ಪ್ರಧಾನಿ ಮೋದಿ ಹೆಸರುಜಗತ್ತಿನ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂಗೆ ಪ್ರಧಾನಿ ಮೋದಿ ಹೆಸರು

ಸತ್ಯ ತಾನಾಗಿಯೇ ಹೇಗೆ ಎಷ್ಟು ಸುಂದರವಾಗಿ ಬಹಿರಂಗವಾಗುತ್ತದೆ ನೋಡಿ ಎಂದಿರುವ ರಾಹುಲ್ ಗಾಂಧಿ, ಮೋದಿ ಸರ್ಕಾರವು ಕೆಲವು ಕೈಗಾರಿಕೋದ್ಯಮಿಗಳ ಹಿತಾಸಕ್ತಿಗಾಗಿ ಕೆಲಸ ಮಾಡುತ್ತದೆ ಎಂಬ ಆರೋಪವನ್ನು ಪರೋಕ್ಷವಾಗಿ ಪುನರುಚ್ಚರಿಸಿದ್ದಾರೆ.

'ಸತ್ಯ ತಾನಾಗಿಯೇ ಎಷ್ಟು ಸುಂದರವಾಗಿ ಬಹಿರಂಗವಾಗುತ್ತದೆ. ನರೇಂದ್ರ ಮೋದಿ ಕ್ರೀಡಾಂಗಣ. -ಅದಾನಿ ಎಂಡ್, -ರಿಲಯನ್ಸ್ ಎಂಡ್. ಜತೆಗೆ ಜೇ ಶಾ ಅಧ್ಯಕ್ಷತೆ' ಎಂದು ಬುಧವಾರ ಅಹಮದಾಬಾದ್‌ನ ಮೊಟೆರಾದಲ್ಲಿ ನಡೆದ ಕ್ರೀಡಾಂಗಣದ ಉದ್ಘಾಟನೆ ಬಳಿಕ ಟ್ವೀಟ್ ಮಾಡಿದ್ದಾರೆ. ಜತೆಗೆ 'ನಾವಿಬ್ಬರು, ನಮಗಿಬ್ಬರು' ಎಂಬ ತಮ್ಮ ಹಳೆಯ ಟೀಕೆಯನ್ನು ಹ್ಯಾಶ್‌ಟ್ಯಾಗ್ ರೂಪದಲ್ಲಿ ಬಳಸಿದ್ದಾರೆ.

Rahul Gandhi Hits Out At BJP Over Renaming Sardar Patel Stadium With Narendra Modis Name

'ಬಹುಶಃ ಬಿಜೆಪಿಯವರಿಗೆ ತಮ್ಮ ಪೋಷಕ ಸಂಸ್ಥೆ (ಆರೆಸ್ಸೆಸ್) ಅನ್ನು ನಿಷೇಧಿಸಿದ ಗೃಹಸಚಿವರ (ಸರ್ದಾರ್ ಪಟೇಲ್) ಹೆಸರು ಈ ಕ್ರೀಡಾಂಗಣಕ್ಕೆ ಇಡಲಾಗಿತ್ತು ಎನ್ನುವುದು ಈಗಷ್ಟೇ ಅರ್ಥವಾಗಿರಬೇಕು' ಎಂದು ಕಾಂಗ್ರೆಸ್ ಸಂಸದ ಶಸಿ ತರೂರ್ ವ್ಯಂಗ್ಯವಾಡಿದ್ದಾರೆ.

ಸರ್ದಾರ್‌ ಪಟೇಲ್‌ಗೆ ಅವಮಾನ; ಸ್ಟೇಡಿಯಂಗೆ ಮೋದಿ ಹೆಸರು ನಾಮಕರಣಕ್ಕೆ ಕಾಂಗ್ರೆಸ್ ವಿರೋಧಸರ್ದಾರ್‌ ಪಟೇಲ್‌ಗೆ ಅವಮಾನ; ಸ್ಟೇಡಿಯಂಗೆ ಮೋದಿ ಹೆಸರು ನಾಮಕರಣಕ್ಕೆ ಕಾಂಗ್ರೆಸ್ ವಿರೋಧ

'ನರೇಂದ್ರ ಮೋದಿ ಸ್ಟೇಡಿಯಂ' ಎಂಬ ಹೊಸ ಹೆಸರು ಪಡೆದಿರುವ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಮೂರನೇ ಕ್ರಿಕೆಟ್ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಇದು ಹಗಲು-ರಾತ್ರಿ ಪಂದ್ಯವಾಗಿದೆ. ಈ ಮೈದಾನದ ಒಂದು ಬೌಲಿಂಗ್ ತುದಿ 'ರಿಲಯನ್ಸ್ ಎಂಡ್' ಎಂದಿದ್ದರೆ ಇನ್ನೊಂದು ತುದಿ 'ಅದಾನಿ ಎಂಡ್' ಎಂದಿದೆ. ಇದು ವಿರೋಧಪಕ್ಷಗಳ ಟೀಕೆಗೆ ಗುರಿಯಾಗಿದೆ.

English summary
Congress leader Rahul Gandhi hits out at BJP and PM Narendra Modi over renaming Sardar Patel stadium in Ahmedabad with Narendra Modi's name.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X