• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿತ್ರಗಳು: ಒಂದು ಅಪ್ಪುಗೆ, ಪ್ರವಾಹದಂತಾ ಮಳೆ, ರೈತರ ಪ್ರತಿಭಟನೆ

By Nayana
|

ಬೆಂಗಳೂರು, ಜು.21: ಅವಿಶ್ವಾಸ ನಿರ್ಣಯದ ಚರ್ಚೆ ವೇಳೆ ರಾಹುಲ್‌ ಗಾಂಧಿ ಪ್ರಧಾನಿ ಮೋದಿಯನ್ನು ಅಪ್ಪಿಕೊಂಡಿದ್ದು ಇದೀಗ ಹಾಸ್ಯಕ್ಕೆ ಗುರಿಯಾಗಿದೆ, ಅವರ ಗಾಂಭೀರ್ಯತೆಯಲ್ಲಿದ್ದ ತೂಕ ಈ ರೀತಿ ನಡೆದುಕೊಂಡು ಕಡಿಮೆ ಮಾಡಿಬಿಟ್ಟಿತೇನೋ ಎನ್ನುವ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ನಿರ್ಣಯದ ಮೇಲೆ ಮಾತನಾಡಿದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ಗಾಂಧಿ ಚರ್ವಿತ ಚರ್ವಣ ವಿಚಾರಣವನ್ನೇ ಪ್ರಸ್ತಾಪಿಸಿದರು. ಅಷ್ಟು ಸಾಲದ್ದಕ್ಕೆ ಶಿಷ್ಟಾಚಾರ ಮೀರಿ ಪ್ರಧಾನಿಯನ್ನು ಆಲಂಗಿಸಿದರು. ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಟೀಕೆಗೆ ಗುರಿಯಾಗಿದೆ.

ರಾಹುಲ್ ಅಪ್ಪುಗೆಯ ಮೌಲ್ಯವನ್ನು ಕಳೆದು ಹಾಕಿದ ಕಣ್ಮಿಟುಕು

ಸಭಾಧ್ಯಕ್ಷರಾದ ಸುಮಿತ್ರಾ ಮಹಾಜನ್‌ ಕೂಡ ಈ ವಿಚಾರದ ಕುರಿತು ಮಾತನಾಡಿದ್ದು ಇದು ಸದನದ ಗಾಂಭೀರ್ಯತೆ ತಕ್ಕುದ್ದಲ್ಲ ಎಂದಿದ್ದರು. ಆಡಳಿತ ಪಕ್ಷದ ನಡೆ, ಯೋಜನೆಗಳು ಎಲ್ಲವನ್ನೂ ಟೀಕಿಸುವುದಕ್ಕೆ ಕಾಂಗ್ರೆಸ್‌ಗೆ ಸಂಪೂರ್ಣ ಅಧಿಕಾರ ಇದೆ ಆದರೆ ಆ ಅವಕಾಶವನ್ನು ಸರಿಯಾಗಿ ಬಳಸಿಕೊಂಡಿಲ್ಲ ಎನ್ನುವ ಮಾತುಗಳು ಕೇಳಿಬಂದವು.

ಇನ್ನು ಶಿಮ್ಲಾ, ಅಹಮದಾಬಾದ್‌ ಸೇರಿದಂತೆ ಹಲವೆಡೆ ವರುಣನ ಆರ್ಭಟ ಮುಂದುವರೆದಿದ್ದು, ಪ್ರವಾಹದಂತಾ ಮಳೆಯನ್ನು ಅಲ್ಲಿನ ಜನ ಕಂಡಿದ್ದಾರೆ, ಶುಕ್ರವಾರ ಸುರಿದ ಭಾರಿ ಮಳೆಗೆ ಅಹಮದಾಬಾದ್‌ನಲ್ಲಿ ರಸ್ತೆ, ಮನೆಗಳೆಲ್ಲವೂ ಜಲಾವೃತವಾಗಿದ್ದು, ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಇನ್ನು ಶಿಮ್ಲಾದಲ್ಲಿ ಅಲ್ಲಲ್ಲಿ ಗುಡ್ಡಗಳು ಕುಸಿದು ವಾಹನಗಳು ಕೂಡ ಜಖಂಗೊಂಡಿರುವ ದೃಶ್ಯವನ್ನು ನೀವು ಚಿತ್ರದಲ್ಲಿ ವೀಕ್ಷಿಸಬಹುದಾಗಿದೆ.

ಅದು ಯಾವ ಆತ್ಮವಿಶ್ವಾಸದಿಂದ ಮೋದಿ ಸಂಸತ್ತಿನಲ್ಲಿ ಈ ಮಾತನ್ನು ಹೇಳಿದ್ರು

ಭಾರತದ ಹಲವು ರಾಜ್ಯ, ಹಲವು ಪ್ರದೇಶಗಳಲ್ಲಿ ಮಳೆಯಾದರೂ ಗುವಾಹಟಿಯಲ್ಲಿ ಬಿಸಿಲು ಮುಂದುವರೆದಿದೆ, ಈ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಕೋತಿಗಳು ಏನು ಮಾಡಿದವು ಎನ್ನುವುದನ್ನು ಚಿತ್ರ ಸಮೇತ ವೀಕ್ಷಿಸಬಹುದಾಗಿದೆ. ಭಾರಿ ಮಳೆಯಿಂದಾಗಿ ನವದೆಹಲಿಯ ಸಂಸತ್‌ ಭವನ ಸುತ್ತಲೂ ನದಿಯಂತೆ ನೀರು ತುಂಬಿಕೊಂಡಿತ್ತು. ಇನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ತಲಕಾವೇರಿಗೆ ತೆರಳಿ ಬಾಗಿನ ಸಮರ್ಪಿಸಿದರು.

ಅವಿಶ್ವಾಸ ನಿರ್ಣಯ ಚರ್ಚೆ: ರಾಹುಲ್‌ನಿಂದ ಮೋದಿಗೆ ಬಿಗ್ ಹಗ್‌

ಅವಿಶ್ವಾಸ ನಿರ್ಣಯ ಚರ್ಚೆ: ರಾಹುಲ್‌ನಿಂದ ಮೋದಿಗೆ ಬಿಗ್ ಹಗ್‌

ಅವಿಶ್ವಾಸ ನಿರ್ಣಯ ಚರ್ಚೆವೇಳೆ ಮೋದಿಯನ್ನು ಅಪ್ಪಿಕೊಂಡ ರಾಹುಲ್‌ ಕುರಿತು ಭಾರಿ ಚರ್ಚೆಗಳು ನಡೆಯುತ್ತಿವೆ, ಇದು ಸಭೆಯ ಮರ್ಯಾದೆಯಲ್ಲ, ಸದನದ ಗಾಂಭೀರ್ಯತೆಯನ್ನು ಕಾಪಾಡಬೇಕಾದವರು ಈ ರೀತಿಯಾಗಿ ನಡೆದುಕೊಂಡಿದ್ದು ಸರಿಯಲ್ಲ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿದೆ.

ಅಹಮದಾಬಾದ್‌ನಲ್ಲಿ ಪ್ರವಾಹದಂತಾ ಮಳೆ

ಅಹಮದಾಬಾದ್‌ನಲ್ಲಿ ಪ್ರವಾಹದಂತಾ ಮಳೆ

ಅಹಮದಾಬಾದ್‌ನಲ್ಲಿ ಕಳೆದ ಎರಡು ದಿನಗಳಿಂದ ವಿಪರೀತ ಮಳೆಯಾಗುತ್ತಿದೆ, ಇದು ಪ್ರವಾಹನದ ಮುನ್ಸೂಚನೆಯಂತಿದೆ, ನೀರು ಹೋಗಲು ಎಲ್ಲೂ ಜಾಗವಿಲ್ಲದ ಕಾರಣ ರಸ್ತೆ, ಮನೆಗಳೆಲ್ಲಾ ಸಂಪೂರ್ಣ ಜಲಾವೃತವಾಗಿದ್ದು, ಆಸ್ತಪಾಸ್ತಿ ಗೆ ನಷ್ಟುಂಟಾಗಿದೆ. ಈ ನೀರಿನ್ನೂ ಬೇದಿಸಿ ವಾಹನಗಳು ಸಂಚರಿಸುತ್ತಿವೆ.

ಶಿಮ್ಲಾದಲ್ಲಿ ಗುಡ್ಡ ಕುಸಿತ, ಕಾರುಗಳು ಜಖಂ

ಶಿಮ್ಲಾದಲ್ಲಿ ಗುಡ್ಡ ಕುಸಿತ, ಕಾರುಗಳು ಜಖಂ

ಶಿಮ್ಲಾದಲ್ಲಿ ಭಾರಿ ಮಳೆಯಿಂದಾಗಿ, ಅಲ್ಲಲ್ಲಿ ಮರಗಳು ಧರೆಗುರುಳಿದ್ದು, ಗುಡ್ಡವೂ ಕುಸಿದಿದ್ದು ಕಾರುಗಳು ಜಖಂಗೊಂಡಿದೆ, ಮಣ್ಣನ್ನು ತೆರವುಗೊಳಿಸಲು ಸಾರ್ವಜನಿಕರು ಹರಸಾಹಸ ಪಡಬೇಕಾಗಿದೆ.

ತುಂಬಾ ಬಿಸಿಲಿದೆ ಬಾ ನೀರಿನೊಂದಿಗೆ ಆಡೋಣ

ತುಂಬಾ ಬಿಸಿಲಿದೆ ಬಾ ನೀರಿನೊಂದಿಗೆ ಆಡೋಣ

ದೇಶದೆಲ್ಲೆಡೆ ಮಳೆಯಾದರೂ ಗುವಾಹಟಿಯಲ್ಲಿ ಕಡಿಮೆ ಪ್ರಮಾಣದಲ್ಲಾಗಿದೆ, ಇದುವರೆಗೂ ಬಿಸಿಲ ಧಗೆ ಮುಂದುವರೆದಿದೆ, ಮನುಷ್ಯರಿಗಷ್ಟೇ ಅಲ್ಲದೆ ಪ್ರಾಣಿಗಳಿಗೂ ಬಿಸಿಲಿನಲ್ಲಿರಲು ಕಷ್ಟವಾಗುತ್ತಿದೆ ಹಾಗಾಗಿ ಎರಡು ಕಪಿಗಳು ಬಸಿಸ್ತಾ ನದಿಯಲ್ಲಿ ಈಜಾಡುತ್ತಿರುವುದು.

ಆಷಾಢ ಏಕಾದಶಿ ಹಬ್ಬಕ್ಕೆ ಮಕ್ಕಳ ತಯಾರಿ ನೋಡಿ

ಆಷಾಢ ಏಕಾದಶಿ ಹಬ್ಬಕ್ಕೆ ಮಕ್ಕಳ ತಯಾರಿ ನೋಡಿ

ಥಾನೆಯಲ್ಲಿ ಶುಕ್ರವಾರ ನಡೆದ ಆಷಾಢ ಏಕಾದಶಿ ಕಾರ್ಯಕ್ರಮದಲ್ಲಿ ಮಕ್ಕಳು ಭಾರತೀಯ ಸಂಸ್ಕೃತಿಯನ್ನು ಸಾರುವ ಉಡುಗೆಯನ್ನು ತೊಟ್ಟು ಜಾಥಾದಲ್ಲಿ ಪಾಲ್ಗೊಂಡಿದ್ದರು.

ನವದೆಹಲಿಯಲ್ಲಿ ಎನ್‌ಡಿಎ ಸರ್ಕಾರದ ವಿರುದ್ಧ ರೈತರ ಪ್ರತಿಭಟನೆ

ನವದೆಹಲಿಯಲ್ಲಿ ಎನ್‌ಡಿಎ ಸರ್ಕಾರದ ವಿರುದ್ಧ ರೈತರ ಪ್ರತಿಭಟನೆ

ತಾವು ಬೆಳೆದ ಬೆಳಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಪಡಿಸುವಂತೆ ಒತ್ತಾಯಿಸಿ ನವದೆಹಲಿಯಲ್ಲಿ ಎನ್‌ಡಿ ಸರ್ಕಾರದ ವಿರುದ್ಧ ರೈತರು ಶುಕ್ರವಾರ ಪ್ರತಿಭಟನೆ ನಡೆಸಿದರು. ಆ ವೇಳೆ ಮಳೆಯಿಂದ ಬಚಾವ್‌ ಆಗಲು ಬ್ಯಾನರ್‌ನ ಆಶ್ರಯ ಪಡೆದರು.

ಎಚ್‌ಡಿ ಕುಮಾರಸ್ವಾಮಿ ದಂಪತಿಯಿಂದ ತಲಕಾವೇರಿಗೆ ಬಾಗಿನ

ಎಚ್‌ಡಿ ಕುಮಾರಸ್ವಾಮಿ ದಂಪತಿಯಿಂದ ತಲಕಾವೇರಿಗೆ ಬಾಗಿನ

ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ದಂಪತಿಯಿಂದ ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿಯಲ್ಲಿ ಬಾಗಿನ ಸಮರ್ಪಿಸಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
hundering speeches are the norm in Parliament. But a hug and a wink? not really, on Friay. when he crossed over to the treasury benches and gave Narendra modi a surprise hug.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more