ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್‌ಡೌನ್‌ನಿಂದ ನಿರುದ್ಯೋಗ ದುಪ್ಪಟ್ಟಾಗಿದೆ; ರಾಹುಲ್ ಟೀಕೆ

|
Google Oneindia Kannada News

ನವದೆಹಲಿ, ಮೇ 31: ದೇಶದಲ್ಲಿ ಕೊರೊನಾ ಎರಡನೇ ಅಲೆಯಲ್ಲಿ ಸೋಂಕಿನ ಪ್ರಕರಣಗಳನ್ನು ನಿಯಂತ್ರಿಸಲು ಕೇಂದ್ರ ತೆಗೆದುಕೊಂಡಿರುವ ಲಾಕ್‌ಡೌನ್‌ನಂಥ ಕ್ರಮಗಳು ನಿರುದ್ಯೋಗ ಸಮಸ್ಯೆಯನ್ನು ದುಪ್ಪಟ್ಟು ಮಾಡಿವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕೆ ಮಾಡಿದ್ದಾರೆ.

ಭಾನುವಾರವಷ್ಟೇ ಮೋದಿ ಮನ್ ಕೀ ಬಾತ್ ಬಗ್ಗೆ ವ್ಯಂಗ್ಯ ಮಾಡಿದ್ದ ರಾಹುಲ್ ಗಾಂಧಿ, ಇದು ನಿರರ್ಥಕ ಮಾತುಕತೆಯಷ್ಟೇ ಎಂದು ಹೇಳಿದ್ದರು.

ಕೇಂದ್ರಕ್ಕೆ ಕೋವಿಡ್ 19 ಅರ್ಥವೇ ಆಗಿಲ್ಲ, ಈ ಪರಿಸ್ಥಿತಿಗೆ ಸರ್ಕಾರವೇ ಹೊಣೆ: ರಾಹುಲ್ ಗಾಂಧಿಕೇಂದ್ರಕ್ಕೆ ಕೋವಿಡ್ 19 ಅರ್ಥವೇ ಆಗಿಲ್ಲ, ಈ ಪರಿಸ್ಥಿತಿಗೆ ಸರ್ಕಾರವೇ ಹೊಣೆ: ರಾಹುಲ್ ಗಾಂಧಿ

ಸೋಮವಾರ ಟ್ವೀಟ್ ಮಾಡಿರುವ ಅವರು, 'One man and his arrogance+One virus and its mutants ಎಂದು ಮೋದಿ ವಿರುದ್ಧ ಪರೋಕ್ಷವಾಗಿ ಟ್ವೀಟ್ ಮಾಡಿದ್ದಾರೆ.

Rahul Gandhi Dig At Centre Over Increasing Unemployment

ಕೊರೊನಾ ಎರಡನೇ ಅಲೆಯಲ್ಲಿ ಸೋಂಕು ತಡೆಗೆ ಕೆಲವು ರಾಜ್ಯಗಳಲ್ಲಿ ಲಾಕ್‌ಡೌನ್ ಹೇರಲಾಗಿದೆ. ಈ ಮೇ ತಿಂಗಳಿನಲ್ಲೇ ಲಾಕ್‌ಡೌನ್‌ನಿಂದಾಗಿ ನಿರುದ್ಯೋಗದ ಮಟ್ಟ ದುಪ್ಪಟ್ಟಾಗಿದೆ. ಭಾರತದ ಆರ್ಥಿಕತೆ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಮತ್ತೊಮ್ಮೆ ಆರ್ಥಿಕತೆ ಚೇತರಿಕೆಯಾಗಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.

ಕೊರೊನಾ ಬಂದ ನಂತರ 97% ಭಾರತೀಯರು ಬಡತನ ಅನುಭವಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

English summary
Congress leader Rahul gandhi dig at centre over increasing unemployment in covid time
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X