ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ವಿಟ್ಟರ್ ಹಕ್ಕಿ ಹಿಂದೆ ಬಿದ್ದ ರಾಹುಲ್ ಗಾಂಧಿ

By Mahesh
|
Google Oneindia Kannada News

ನವದೆಹಲಿ, ಮೇ.7: ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲ ತಾಣಗಳನ್ನು ಬಳಸಿಕೊಂಡು ಜನರಿಗೆ ಹತ್ತಿರವಾಗುತ್ತಿರುವುದು ಎಲ್ಲರಿಗೂ ತಿಳಿದಿದೆ. ಈಗ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ಹಕ್ಕಿಯ ಹಿಂದೆ ಬಿದ್ದಿದ್ದಾರೆ.

ಬುಧವಾರ ರಾತ್ರಿಯೇ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಕಚೇರಿ ಹೆಸರಿನಲ್ಲಿ ಟ್ವಿಟ್ಟರ್ ಐಡಿ ಆರಂಭಗೊಂಡಿತ್ತು. ಈಗ ಇದು ಅಧಿಕೃತ ಐಡಿ ಎಂದು ಮುದ್ರೆ ಬಿದ್ದಿದೆ. ರಾಹುಲ್ ಗಾಂಧಿ ಆಫೀಸ್ ಐಡಿ (@OfficeofRG) ಗುರುವಾರ ಅಪ್ಡೇಟ್ಸ್ ಶುರು ಮಾಡಿದೆ.

Rahul Gandhi debuts on Twitter

ನಂ,12, ತುಘಲಕ್ ಲೇನ್, ನವದೆಹಲಿ, ಅಡ್ರೆಸ್ ಹೊಂದಿರುವ ಈ ಖಾತೆ ಅಮೇಥಿ ಸಂಸದ ರಾಹುಲ್ ಗಾಂಧಿ ಅವರದ್ದೇ ಎಂದು ಸ್ಪಷ್ಟವಾಗಿದೆ. ಈ ಸಮಯದ ತನಕ ಮೂರು ಟ್ವೀಟ್ ಗಳು ಮೂರು ಜನರನ್ನು ಫಾಲೋ ಮಾಡುತ್ತಿರುವ ಈ ಐಡಿಗೆ 29.1K ಹಿಂಬಾಲಕರು ಸಿಕ್ಕಿದ್ದಾರೆ. ಬುಧವಾರ ರಾತ್ರಿ ಐಡಿ ಆರಂಭವಾದಾಗ 2,200 ಹಿಂಬಾಲಕರನ್ನು ಹೊಂದಿತ್ತು.

ಗುರುವಾರ ಸಂಸತ್ತಿನಲ್ಲಿ ಅಮೇಥಿಯ ಫುಡ್ ಪಾರ್ಕ್ ಬಗ್ಗೆ ರಾಹುಲ್ ಮಾಡಿದ ಭಾಷಣದ ವಿಡಿಯೋ ಟ್ವೀಟ್ ಮಾಡಲಾಗಿದೆ.

ಈ ಐಡಿ ಫಾಲೋ ಮಾಡಿ ರಾಹುಲ್ ಗಾಂಧಿ ಅವರ ಚಟುವಟಿಕೆಗಳ ಅಪ್ಡೇಟ್ಸ್ ಪಡೆಯಿರಿ ಎಂದು ಟ್ವೀಟ್ ಮಾಡಲಾಗಿದೆ.

ವಿಶ್ವದ ಜನಪ್ರಿಯ ಟ್ವೀಟ್ ಖಾತೆಗಳ ಪೈಕಿ ಬರಾಕ್ ಒಬಾಮಾ, ಪೋಪ್ ನಂತರ ಭಾರತದ ಪ್ರಧಾನಿ ನರೇಂದ್ರ ಮೋದಿ(12.1 ಮಿಲಿಯನ್ ಹಿಂಬಾಲಕರು) ಇದ್ದಾರೆ. ಲೋಕಸಭೆ ಚುನಾವಣೆ 2014 ಸಂದರ್ಭದಲ್ಲಿ ಸಾಮಾಜಿಕ ಜಾಲ ತಾಣಗಳನ್ನು ಸೂಕ್ತವಾಗಿ ಬಳಕೆ ಮಾಡಿಕೊಂಡ ಮೋದಿ ಜನಮನ್ನಣೆ ಜೊತೆಗೆ ಬಿಜೆಪಿ ಗೆಲುವಿಗೂ ಕಾರಣರಾದರು.(ಒನ್ ಇಂಡಿಯಾ ಸುದ್ದಿ)

English summary
Congress vice-president Rahul Gandhi finally joined the Twitter.The leader joined the microblogging site on Wednesday and his handle is called @OfficeofRG.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X