ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿಗೂ ದೇಶಭ್ರಷ್ಟ ನೀರವ್ ಗೂ ಹೋಲಿಸಿ ರಾಹುಲ್ ಟ್ವೀಟ್

|
Google Oneindia Kannada News

ಬೆಂಗಳೂರು, ಮಾರ್ಚ್ 09 : ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ದೇಶಭ್ರಷ್ಟನಾಗಿರುವ ವಂಚಕ ನೀರವ್ ಮೋದಿಯವರಿಗೆ ಹೋಲಿಸಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಾಡಿರುವ ಟ್ವೀಟ್ ಭಾರೀ ಟೀಕೆಗೆ ಮತ್ತು ಚರ್ಚೆಗೆ ಗ್ರಾಸವಾಗಿದೆ.

"ಲಂಡನ್ ನಲ್ಲಿ ತಲೆಮರೆಸಿಕೊಂಡಿರುವ ವಜ್ರದ ವ್ಯಾಪಾರಿ ನೀರವ್ ಮೋದಿ ಅವರ ವಿಡಿಯೋ ನೋಡಿದರೆ, ಅವರಿಗೂ ಮತ್ತು ಅವರ ಭಾಯ್ ನರೇಂದ್ರ ಮೋದಿಯವರಿಗೂ ವಿಶಿಷ್ಟವಾದ ಹೋಲಿಕೆಯಿದೆ. ಇಬ್ಬರೂ ದೇಶವನ್ನು ಲೂಟಿ ಮಾಡಿದ್ದಾರೆ, ಅವರಿಬ್ಬರ ಹೆಸರು ಮೋದಿ. ಇಬ್ಬರು ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸುತ್ತಾರೆ. ಇಬ್ಬರೂ ಕಾನೂನಿಗಿಂತ ಮೇಲಿದ್ದೇನೆ ಎಂದು ಭಾವಿಸುತ್ತಾರೆ. ಇಬ್ಬರೂ ಕಾನೂನು ಎದುರಿಸಲಿದ್ದಾರೆ."

ಲಂಡನ್ನಿನಲ್ಲಿ 'ಸಿಕ್ಕಿಬಿದ್ದ' ಡೈಮಂಡ್ ವ್ಯಾಪಾರಿ ನೀರವ್ ಮೋದಿ!ಲಂಡನ್ನಿನಲ್ಲಿ 'ಸಿಕ್ಕಿಬಿದ್ದ' ಡೈಮಂಡ್ ವ್ಯಾಪಾರಿ ನೀರವ್ ಮೋದಿ!

ಹಾವೇರಿಯಲ್ಲಿ ಕಾವೇರಿದ ಭಾಷಣ ಮಾಡಿದ ನಂತರ ಹೀಗೆಂದು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ಅವರು, ಟ್ವಿಟ್ಟರ್ ನಲ್ಲಿ ಭಾರೀ ಆಕ್ರೋಶವನ್ನೂ ಎದುರಿಸುತ್ತಿದ್ದಾರೆ. ಆ ಟ್ವೀಟ್ ಗೆ ಭಾರೀ ಪ್ರಮಾಣದಲ್ಲಿ ಪ್ರತಿಕ್ರಿಯೆಗಳು ಹರಿದುಬರುತ್ತಿದ್ದು, ಹಲವರು ಮೋದಿಯವರನ್ನೂ ಟೀಕಿಸಿದವರಿದ್ದಾರೆ. ಕಡೆಗೆ ದೇಶವನ್ನು ನರೇಂದ್ರ ಮೋದಿ ಅಥವಾ ರಾಹುಲ್ ಗಾಂಧಿ ಯಾರು ಆಳಲಿದ್ದಾರೆ ಎಂಬುದನ್ನು ದೇಶದ ಜನತೆ ನಿರ್ಧರಿಸಲಿದ್ದಾರೆ.

ಲೂಟಿಕೋರರನ್ನು ಜೈಲಿಗಟ್ಟುತ್ತೇವೆ, ಹಾವೇರಿಯಲ್ಲಿ ರಾಹುಲ್ ಕಾವೇರಿದ ಭಾಷಣಲೂಟಿಕೋರರನ್ನು ಜೈಲಿಗಟ್ಟುತ್ತೇವೆ, ಹಾವೇರಿಯಲ್ಲಿ ರಾಹುಲ್ ಕಾವೇರಿದ ಭಾಷಣ

ದಿ ಟೆಲಿಗ್ರಾಫ್ ಪತ್ರಿಕೆಗೆ ಅಚಾನಕ್ಕಾಗಿ ಲಂಡನ್ನಿನಲ್ಲಿ ಸಿಕ್ಕಿದ್ದ ನೀರವ್ ಮೋದಿ, ಪತ್ರಿಕೆಯ ವರದಿಗಾರ ಕೇಳಿದ ಯಾವ ಪ್ರಶ್ನೆಗೂ 'ಸಾರಿ, ನೋ ಕಾಮೆಂಟ್ಸ್' ಅಂತನೇ ಮುಗುಳ್ನಗುತ್ತಲೇ ಉತ್ತರಿಸಿದ್ದಾರೆ. ಈ ವಿಡಿಯೋ ಟ್ವಿಟ್ಟರ್ ನಲ್ಲಿ ಭಾರೀ ಧೂಳೆಬ್ಬಿಸಿದ್ದು, ಜಾರಿ ನಿರ್ದೇಶನಾಲಯ ಪ್ರತಿಕ್ರಿಯಿಸಿ, ನೀರವ್ ಮೋದಿಯ ಹಸ್ತಾಂತರಕ್ಕೆ ಈಗಾಗಲೆ ಅರ್ಜಿ ಸಲ್ಲಿಸಿದ್ದಾಗಿ ಟ್ವೀಟ್ ಮಾಡಿದೆ.

Rahul Gandhi compares Nirav Modi and Narendra Modi in a tweet

ರಾಹುಲ್ ಅವರು ಮಾಡಿರುವ ಟ್ವೀಟ್ ನಲ್ಲಿ ನೀರವ್ ಮೋದಿಗೂ ಮತ್ತು ನರೇಂದ್ರ ಮೋದಿಗೂ ಹೋಲಿಕೆಯಿದೆ ಎಂದು ಹೇಳಿದ್ದರೆ, ಹೋಲಿಕೆಯಿರುವುದು ನೀರವ್ ಮತ್ತು ನರೇಂದ್ರ ಅವರ ನಡುವೆಯಲ್ಲ, ಹೋಲಿಕೆಯಿರುವುದು ನೀರವ್ ಮೋದಿ ಮತ್ತು ರಾಹುಲ್ ಗಾಂಧಿ ಅವರ ಭಾವ ರಾಬರ್ಟ್ ವಾದ್ರಾ ಅವರಿಗೆ ಎಂದು ಅವರಿಬ್ಬರ ಫೋಟೋವನ್ನು ಟ್ವೀಟ್ ಮಾಡಿದ್ದಾರೆ ಕಾರ್ತಿಕ್ ಎಂಬುವವರು.

English summary
Congress President Rahul Gandhi has compared Nirav Modi and Narendra Modi in a tweet, which has been criticized by many followers of Modi. Nirav was traced in London by The Telegraph.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X