ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರಪತಿಗಳ ಭಾಷಣದ ವೇಳೆ ಮೊಬೈಲ್‌ನಲ್ಲಿ ಮುಳುಗಿದ್ದ ರಾಹುಲ್‌!

|
Google Oneindia Kannada News

ನವದೆಹಲಿ, ಜೂನ್ 20: ಇಂದು ಲೋಕಸಭೆಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಜಂಟಿ ಸದನ ಉದ್ದೇಶಿಸಿ ಮಾತನಾಡುವ ವೇಳೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮೊಬೈಲ್‌ನಲ್ಲಿ ಬ್ಯುಸಿ ಆಗಿದ್ದರು!

ಹೌದು, ರಾಷ್ಟ್ರಪತಿಗಳು ಜಂಟಿ ಸದನ ಉದ್ದೇಶಿಸಿ ಅತ್ಯಂತ ಮಹತ್ವದ ಭಾಷಣ ಮಾಡಬೇಕಾದರೆ, ರಾಷ್ಟ್ರೀಯ ಪಕ್ಷವೊಂದರ ಅಧ್ಯಕ್ಷ ಹೀಗೆ ಮೊಬೈಲ್ ನೋಡುತ್ತಾ ಕೂತಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ಟೀಕೆಗೆ ಕಾರಣವಾಗಿದೆ.

ಮುಂಗಾರು ಅಧಿವೇಶನ LIVE: ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿಗಳ ಭಾಷಣ ಮುಂಗಾರು ಅಧಿವೇಶನ LIVE: ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿಗಳ ಭಾಷಣ

ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಜಂಟಿ ಸದನ ಉದ್ದೇಶಿಸಿ ಒಂದು ಗಂಟೆಗೂ ಹೆಚ್ಚು ಕಾಲ ಮಾತನಾಡಿದರು. ಆದರೆ ರಾಹುಲ್ ಅವರು ಅಂದಾಜು 20 ನಿಮಿಷ ಫೋನಿನಲ್ಲಿಯೇ ಮುಳುಗಿದ್ದರು. ಅವರ ಪಕ್ಕವೇ ಕೂತಿದ್ದ ಅವರ ತಾಯಿ ಸೋನಿಯಾ ಗಾಂಧಿ ಅವರು ರಾಷ್ಟ್ರಪತಿಗಳ ಭಾಷಣ ಕೇಳಿದ್ದಲ್ಲದೆ, ಮುಖ್ಯ ವಿಷಯಗಳ ಪ್ರಸ್ತಾಪವಾದಾಗ ಮೇಜು ಕುಟ್ಟಿ ಸ್ವಾಗತಿಸಿದರು.

ಉರಿದಾಳಿ ಬಗ್ಗೆ ಉಲ್ಲೇಖವಾದಾಗಲೂ ಪ್ರತಿಕ್ರಿಯಸಲಿಲ್ಲ

ಉರಿದಾಳಿ ಬಗ್ಗೆ ಉಲ್ಲೇಖವಾದಾಗಲೂ ಪ್ರತಿಕ್ರಿಯಸಲಿಲ್ಲ

ಉರಿ ದಾಳಿ ಹಾಗೂ ಅದರ ಪ್ರತೀಕಾರದ ಬಗ್ಗೆ ರಮಾನಾಥ ಕೋವಿಂದ್ ಅವರು ಮಾತನಾಡಿದಾಗ ಇಡೀಯ ಸದನವೇ ಮೇಜು ಕುಟ್ಟಿ ಸ್ವಾಗತಿಸಿತು, ಆದರೆ ಆಗಲೂ ಸಹ ರಾಹುಲ್ ಅವರು ಮೊಬೈಲ್‌ನಲ್ಲಿಯೇ ಬ್ಯುಸಿಯಾಗಿದ್ದರು.

ರಾಹುಲ್ ಗಾಂಧಿ ಕಾಲೆಳೆದು ಸದನದಲ್ಲಿ ನಗೆಯುಕ್ಕಿಸಿದ ಸಚಿವ ಅಠವಲೆ ರಾಹುಲ್ ಗಾಂಧಿ ಕಾಲೆಳೆದು ಸದನದಲ್ಲಿ ನಗೆಯುಕ್ಕಿಸಿದ ಸಚಿವ ಅಠವಲೆ

ಸುಮ್ಮನೆ ಸಮಯ ಕಳೆದ ರಾಹುಲ್‌

ಸುಮ್ಮನೆ ಸಮಯ ಕಳೆದ ರಾಹುಲ್‌

ಪಾರ್ಲಿಮೆಂಟ್‌ನ ಫೊಟೊಗಳನ್ನು ತೆಗೆದ ರಾಹುಲ್ ಅವರು, ಆ ನಂತರ ಕೆಲ ಸಮಯ ತಮ್ಮ ತಾಯಿಯ ಜೊತೆ ಮಾತನಾಡುತ್ತಾ ಸಮಯ ಕಳೆದರು. ರಾಷ್ಟ್ರಪತಿಗಳ ಅತ್ಯಂತ ಮಹತ್ವದ ಭಾಷಣದ ಕಡೆ ಅವರ ಗಮನವೇ ಹೋಗಲಿಲ್ಲ.

ಸಂಸತ್‌ನಲ್ಲಿ ಹಿಂದೆಯೂ ಹೀಗೆ ಮಾಡಿದ್ದಾರೆ

ಸಂಸತ್‌ನಲ್ಲಿ ಹಿಂದೆಯೂ ಹೀಗೆ ಮಾಡಿದ್ದಾರೆ

ಈ ಹಿಂದೆಯೂ ಹಲವು ಬಾರಿ ರಾಹುಲ್ ಗಾಂಧಿ ಅವರು ಸಂಸತ್‌ನಲ್ಲಿ ಹೀಗೆ ಅಜವಾಬ್ದಾರಿಯುತ ನಡವಳಿಕೆಯಿಂದ ಟೀಕೆಗೆ ಕಾರಣರಾಗಿದ್ದಾರೆ. ಸದನ ನಡೆಯುವ ವೇಳೆ ಮೋದಿ ಅವರನ್ನು ತಬ್ಬಿಕೊಂಡು ಸಹ ಒಮ್ಮೆ ಭಾರಿ ಸುದ್ದಿಯೇ ಆಗಿದ್ದರು. ಆ ನಂತರ ಅವರು ಕಣ್ಣು ಮಿಟುಕಿಸಿದ್ದೂ ಸಹ ಸುದ್ದಿಯಾಗಿತ್ತು.

ಓಂ ಬಿರ್ಲಾಗೆ ವಿಪಕ್ಷ ನಾಯಕ ರಂಜನ್ ಅಭಿನಂದಿಸಿದ ರೀತಿ ವಾಹ್! ಓಂ ಬಿರ್ಲಾಗೆ ವಿಪಕ್ಷ ನಾಯಕ ರಂಜನ್ ಅಭಿನಂದಿಸಿದ ರೀತಿ ವಾಹ್!

ಜಂಟಿ ಸದನ ಉದ್ದೇಶಿಸಿ ರಾಷ್ಟ್ರಪತಿ ಭಾಷಣ

ಜಂಟಿ ಸದನ ಉದ್ದೇಶಿಸಿ ರಾಷ್ಟ್ರಪತಿ ಭಾಷಣ

ರಾಷ್ಟ್ರಪತಿಗಳಾದ ರಾಮನಾಥ ಕೋವಿಂದ್ ಅವರು, ಇಂದು ಜಂಟಿ ಸದನ ಉದ್ದೇಶಿಸಿ ಮಾತನಾಡಿ, ಸರ್ಕಾರದ ಸಾಧನೆಗಳು, ಗುರಿಗಳು, ಭಾರತದ ಮುಂದಿರುವ ಸವಾಲುಗಳು ಹೀಗೆ ಹಲವು ವಿಷಯಗಳ ಬಗ್ಗೆ ಮಾತನಾಡಿದರು.

English summary
AICC president Rahul Gandhi is busy with mobile while president Ram Nath Kovind addressing joint session today in parliament.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X