ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇದಾರನಾಥದತ್ತ 'ಆಮ್ ಆದ್ಮಿ'ಯಂತೆ ಹೊರಟ ರಾಹುಲ್

By Mahesh
|
Google Oneindia Kannada News

ಡೆಹ್ರಾಡೂನ್, ಏ.,23: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಹಿಂದೂಗಳ ಪವಿತ್ರ ಯಾತ್ರಾ ಸ್ಥಳ ಕೇದರಾನಾಥ ಯಾತ್ರೆ ಕೈಗೊಂಡಿದ್ದಾರೆ. 'ಆಮ್ ಆದ್ಮಿ' ಅವತಾರದಲ್ಲಿ ರಾಹುಲ್ ಗಾಂಧಿ ಅವರು ಗೌರಿಕುಂಡದಿಂದ ಪಾದಯಾತ್ರೆ ಅಥವಾ ಅವರ ಭಾಷೆಯಲ್ಲಿ ಟ್ರೆಕ್ಕಿಂಗ್ ಕೈಗೊಂಡಿದ್ದಾರೆ.

55-56 ದಿನಗಳ ಕಾಲ ಭಾರತದಿಂದ ಕಣ್ಮರೆಯಾಗಿದ್ದ ರಾಹುಲ್ ಗಾಂಧಿ ಅವರು ಭಾರತಕ್ಕೆ ಬಂದ ಮೇಲೆ ರೈತರ ಸಮಾವೇಶ, ಲೋಕಸಭೆ ಅಧಿವೇಶನದಲ್ಲಿ ಪಾಲ್ಗೊಂಡು ಭಾಷಣ ಮಾಡಿ ಮೋದಿ ಸರ್ಕಾರವನ್ನು ಕಾಡಿದ್ದರು. ಈಗ ಹಿಮಾಲಯದತ್ತ ಮುಖ ಮಾಡಿರುವುದು ಎಲ್ಲರ ಹುಬ್ಬೇರಿಸಿದೆ.[ಕೇದಾರನಾಥ ದೇಗುಲ ಅಚ್ಚಳಿಯದೆ ಉಳಿದಿದ್ದು ಹೇಗೆ?]

ಯಾತ್ರಾರ್ಥಿ ರಾಹುಲ್‌ ಗಾಂಧಿ ಅವರಿಗೆ ಕಾಂಗ್ರೆಸ್‌ನ ಹಿರಿಯ ನಾಯಕರಾದ ಅಂಬಿಕಾ ಸೋನಿ, ಉತ್ತರಾಖಂಡ ಸಿಎಂ ಹರೀಶ್‌ ರಾವತ್‌ ಸೇರಿದಂತೆ ಹಲವು ನಾಯಕರು ಸಾಥ್‌ ನೀಡಲಿದ್ದಾರೆ ಎಂದು ಉತ್ತರಾಖಂಡ್ ಸಿಎಂ ಅವರ ಮಾಧ್ಯಮ ವಕ್ತಾರ ಸುರೇಂದ್ರ ಕುಮಾರ್ ಹೇಳಿದ್ದಾರೆ. [ಕೇದಾರನಾಥ ಸೃಷ್ಟಿ ಹೇಗಾಯ್ತು?]

ರಾಹುಲ್ ಗಾಂಧಿ ಯಾತ್ರೆ ವಿವರ

ರಾಹುಲ್ ಗಾಂಧಿ ಯಾತ್ರೆ ವಿವರ

* ಗುರುವಾರ ಮುಂಜಾನೆ ಗೌರಿಕುಂಡ ಮತ್ತು ಕೇದಾರನಾಥ ನಡುವಿನ 16 ಕಿ.ಮೀ ದೂರವನ್ನು ಹೆಲಿಕಾಪ್ಟರ್ ಬಳಸದೆ, ಪಾದಯಾತ್ರೆ ಮೂಲಕ ಕ್ರಮಿಸುವುದಾಗಿ ತಿಳಿಸಿದರು.
* ಗುರುವಾರ 5 ಕಿ.ಮೀ ದೂರವನ್ನು ಕ್ರಮಿಸಿ ರಾತ್ರಿ ಲಿಂಚೋಲಿಯಲ್ಲಿ ತಂಗಲಿದ್ದಾರೆ.
* ಶುಕ್ರವಾರ ಮುಂಜಾನೆ ಪಾದಯಾತ್ರೆ ಆರಂಭಿಸಿ ಬೆಳಗ್ಗೆ 8.30ರ ವೇಳೆಗೆ ಕೇದಾರನಾಥ ದೇಗುಲ ತಲುಪುವ ನಿರೀಕ್ಷೆಯಿದೆ.

ಆಮ್ ಆದ್ಮಿಯಂತೆ ಹೊರಟ ರಾಹುಲ್

ರಾಹುಲ್ ಗಾಂಧಿ ಅವರ ಜೊತೆ ಉತ್ತರಾಖಂಡ್ ಸಿಎಂ ಹರೀಶ್ ರಾವತ್, ಅಂಬಿಕಾ ಸೋನಿ ಸೇರಿದಂತೆ ಇತರರು ಸಾಥ್ ನೀಡಿದ್ದಾರೆ.

ಗೌರಿಕುಂಡಕ್ಕೆ ಆಗಮಿಸಿದ ರಾಹುಲ್ ಗಾಂಧಿ

ಗುರುವಾರ ಮುಂಜಾನೆ ಗೌರಿಕುಂಡಕ್ಕೆ ಆಗಮಿಸಿದ ರಾಹುಲ್ ಗಾಂಧಿ.

ರಾಹುಲ್ ಪಾದಯಾತ್ರೆಗೆ ಪ್ರತ್ಯೇಕ ಹ್ಯಾಶ್ ಟ್ಯಾಗ್

ರಾಹುಲ್ ಪಾದಯಾತ್ರೆಗೆ ಪ್ರತ್ಯೇಕ ಹ್ಯಾಶ್ ಟ್ಯಾಗ್ #RGInKedarnath ಆರಂಭಿಸಿದ ಕಾಂಗ್ರೆಸ್ .. ಕಾಲಕಾಲಕ್ಕೆ ಅಪ್ಡೇಟ್ಸ್ ನೀಡುತ್ತಿದೆ.

English summary
Congress vice-president Rahul Gandhi will arrive here on Thursday and trek to the Kedarnath shrine on Friday, officials said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X