ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಮೇಲೆ ರಾಹುಲ್ 'ರಫೇಲ್' ಅಟ್ಯಾಕ್! ಟ್ವೀಟ್ ಏಟು!

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 22: ರಫೇಲ್ ಖರೀದಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಶುಕ್ರವಾರ ಫ್ರೆಂಚ್ ಮಾಜಿ ಅಧ್ಯಕ್ಷರು ನೀಡಿದ ಸ್ಪೋಟಕ ಹೇಳಿಕೆಯ ನಂತರ ಕಾಂಗ್ರೆಸ್ ಮೈಕೊಡವಿಕೊಂಡು ಎದ್ದು ನಿಂತಿದೆ.

ರಫೇಲ್ ಡೀಲ್: ರಿಲಯನ್ಸ್ ಹೆಸರನ್ನು ನಾನು ಸೂಚಿಸಿಲ್ಲ ಎಂದ ಫ್ರಾನ್ಸ್ ರಫೇಲ್ ಡೀಲ್: ರಿಲಯನ್ಸ್ ಹೆಸರನ್ನು ನಾನು ಸೂಚಿಸಿಲ್ಲ ಎಂದ ಫ್ರಾನ್ಸ್

ಪ್ರಧಾನಿ ನರೇಂದ್ರ ಮೊದಿಯವರ ವಿರುದ್ಧ ರಫೆಲ್ ಡೀಲ್ ಅನ್ನೇ ಪ್ರಬಲ ಅಸ್ತ್ರವನ್ನಾಗಿರಿಸಿಕೊಂಡ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಟ್ವೀಟ್ ನಲ್ಲಿ ಮೋದಿ ಅವರ ಮೇಲೆ ದಾಳಿ ನಡೆಸಿದ್ದಾರೆ.

Rahul Gandhi attacks PM Narendra Modi over Rafale deal

ಶುಕ್ರವಾರವಷ್ಟೇ ಈ ಕುರಿತು ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ, ಇಂದು ಮತ್ತೊಮ್ಮೆ ಟ್ವಿಟ್ಟರ್ ದಾಳಿ ನಡೆಸಿದ್ದಾರೆ. "ಪ್ರಧಾನಿ ಮತ್ತು ಅನಿಲ್ ಅಂಬಾನಿ ಇಬ್ಬರೂ ಸೇರಿ ಭಾರತೀಯ ರಕ್ಷಣಾ ದಳದ ಮೇಲೆ 130 ಕೋಟಿ ರೂ. ಮೌಲ್ಯದ ಸರ್ಜಿಕಲ್ ಸ್ಟ್ರೈಕ್ ಅನ್ನು ನೆರವೇರಿಸಿದ್ದಾರೆ. ಮೋದಿಯವರೇ, ನೀವು ನಮ್ಮ ಹುತಾತ್ಮ ಸೈನಿಕರಿಗೆ ಅಗೌರವ ನೀಡಿದ್ದೀರಿ. ನೀವು ಭಾರತೀ ಆತ್ಮಗಳಿಗೆ ವಂಚನೆ ಮಾಡಿದ್ದೀರಿ. ನಿಮಗೆ ನಾಚಿಕೆಯಾಗಬೇಕು ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ರಫೇಲ್ ಡೀಲ್ ಬಗ್ಗೆ ಫ್ರಾನ್ಸ್ ಅಧ್ಯಕ್ಷ ಹೇಳಿದ ಸ್ಫೋಟಕ ಸಂಗತಿ ರಫೇಲ್ ಡೀಲ್ ಬಗ್ಗೆ ಫ್ರಾನ್ಸ್ ಅಧ್ಯಕ್ಷ ಹೇಳಿದ ಸ್ಫೋಟಕ ಸಂಗತಿ

ರಫೇಲ್ ಯುದ್ಧ ವಿಮಾನಕ್ಕೆ ಬಿಡಿಭಾಗಗಳ ತಯಾರಿಕೆಗೆ ಅನಿಲ್ ಅಂಬಾನಿ ಅವರ ರಿಲಯನ್ಸ್ ಡಿಫೆನ್ಸ್ ಇಂಡಸ್ಟ್ರೀಸ್ ಹೆಸರನ್ನು ಸೂಚಿಸುವಂತೆ ಫ್ರೆಂಚ್ ಸರ್ಕಾರವನ್ನು ಭಾರತ ಸರ್ಕಾರವೇ ಕೋರಿತ್ತು ಎಂಬ ಫ್ರಾನ್ಸ್ ನ ಮಾಜಿ ಅಧ್ಯಕ್ಷ ಫ್ರಾಂಕೋ ಒಲಾಂಡ್ ಹೇಳಿಕೆ ಸಾಕಷ್ಟು ವಿವಾದ ಸೃಷ್ಟಿಸಿದ ಹಿನ್ನೆಲೆಯಲ್ಲಿ ಕೇಂದ್ರ ಎನ್ ಡಿಎ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಸೇರಿದಂತೆ ವಿಪಕ್ಷದ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೈನಿಕರ ರಕ್ತಕ್ಕೆ ಅಗೌರವ ತೋರಿದ ಪ್ರಧಾನಿ: ರಾಹುಲ್ ಗಾಂಧಿ ವಾಗ್ದಾಳಿಸೈನಿಕರ ರಕ್ತಕ್ಕೆ ಅಗೌರವ ತೋರಿದ ಪ್ರಧಾನಿ: ರಾಹುಲ್ ಗಾಂಧಿ ವಾಗ್ದಾಳಿ

ರಿಲಯನ್ಸ್ ಡಿಫೆನ್ಸ್ ಇಂಡಸ್ಟ್ರೀಸ್ ಅನ್ನು ರಫೇಲ್ ಯುದ್ಧ ವಿಮಾನ ಬಿಡಿ ಭಾಗಗಳ ತಯಾರಿಕೆಗಾಗಿ ಭಾರತ ಆಯ್ಕೆ ಮಾಡಿಕೊಂಡಿದ್ದರಲ್ಲಿ ತನ್ನ ಪಾತ್ರವೇನೂ ಇಲ್ಲ ಎಂದು ಈಗಾಗಲೇ ಫ್ರಾನ್ಸ್ ಸ್ಪಷ್ಟನೆ ನೀಡಿದೆ.

English summary
Congress President Rahul Gandhi attacks PM Narendra Modi over Rafale deal. In his latest tweet he states, "The PM and Anil Ambani jointly carried out a One Hundred & Thirty Thousand Crore, SURGICAL STRIKE on the Indian Defence forces. Modi Ji you dishonoured the blood of our martyred soldiers. Shame on you. You betrayed India's soul
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X