ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಡಿ ಸಂಘರ್ಷದ ನಡುವೆಯೂ ಪ್ರಧಾನಿ ಮೋದಿಯನ್ನು ಹೊಗಳಿತೇ ಚೀನಾ?

|
Google Oneindia Kannada News

ನವದೆಹಲಿ, ಜೂನ್ 22: ಭಾರತ-ಚೀನಾ ಗಡಿಭಾಗದ ಲಡಾಖ್ ಪೂರ್ವ ಭಾಗದಲ್ಲಿರುವ ಗಾಲ್ವಾನ್ ನದಿ ಕಣಿವೆಯಲ್ಲಿ ನಡೆದ ಸಂಘರ್ಷದ ವಿಚಾರದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಪ್ರಧಾನಿ ಮೋದಿ ವಿರುದ್ದ ಮತ್ತೆ ಕಿಡಿಕಾರಿದ್ದಾರೆ.

Recommended Video

ಗ್ರಹಣದ ದಿನ ಕಾವೇರಿ ನದಿಯಲ್ಲಿ ಮಿಂದು ತಂದೆಯನ್ನು ಸ್ಮರಿಸಿದ ಡಿಕೆಶಿ | DK ShivaKumar | Oneindia Kannada

ಕೆಲವು ದಿನಗಳ ಹಿಂದೆ 'ಸರೆಂಡರ್ ಮೋದಿ' ಎಂದು ಲೇವಡಿ ಮಾಡಿದ್ದ ರಾಹುಲ್ ಗಾಂಧಿ, "ಎರಡು ದೇಶಗಳ ನಡುವಿನ ಗಡಿ ಸಂಘರ್ಷದ ನಡುವೆಯೂ ಚೀನಾ, ಪ್ರಧಾನಿ ಮೋದಿಯವನ್ನು ಹೊಗಳುತ್ತಿರುವುದು ಏಕೆ" ಎನ್ನುವ ಪ್ರಶ್ನೆಯನ್ನು ಎಸೆದಿದ್ದಾರೆ.

ಭಾರತದಲ್ಲಿನ 'ಆ' ಗಡಿ ಪ್ರದೇಶವನ್ನು ಆಕ್ರಮಿಸಿಕೊಂಡಿತಾ ಚೀನಾ?ಭಾರತದಲ್ಲಿನ 'ಆ' ಗಡಿ ಪ್ರದೇಶವನ್ನು ಆಕ್ರಮಿಸಿಕೊಂಡಿತಾ ಚೀನಾ?

ಗಡಿರೇಖೆಯ ವಿಚಾರದಲ್ಲಿ ಎರಡು ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿಯಿದ್ದರೂ, ಚೀನಾ, ಮೋದಿಯನ್ನು ಹೊಗಳುತ್ತಿರುವ ಹಿಂದಿನ ಕಾರಣವೇನು"ಎಂದು ಪ್ರಶ್ನಿಸಿದ್ದಾರೆ.

Rahul Gandhi asks why is China praising PM Modi amid border conflict

ಮಾಧ್ಯಮಗಳಲ್ಲಿ ಬಂದ ವರದಿಯನ್ನು ಶೇರ್ ಮಾಡಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, "ಚೀನಾ ನಮ್ಮ ಯೋಧರನ್ನು ಸಾಯಿಸಿತು, ಚೀನಾ ನಮ್ಮ ಪ್ರದೇಶವನ್ನು ಆಕ್ರಮಿಸಿತು. ಆದರೂ, ಇಂತಹ ಸಮಯದಲ್ಲಿ ಮೋದಿಯನ್ನು ಚೀನಾ ಹೊಗಳುತ್ತಿರುವುದು ಏಕೆ"ಎಂದು ಟ್ವೀಟ್ ಮಾಡಿದ್ದಾರೆ.

ಶುಕ್ರವಾರ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಪ್ರಧಾನಿ ಮೋದಿ ನೀಡಿದ ಹೇಳಿಕೆಯನ್ನು ಚೀನಾದ ಮಾಧ್ಯಮಗಳು ಸ್ವಾಗತಿಸಿವೆ. ಎರಡು ದೇಶಗಳ ನಡುವೆ ಮತ್ತೆ ಅಶಾಂತಿ ಮೂಡದೇ ಇರಲು ಇದು ಸಹಕಾರಿಯಾಗಲಿದೆ ಎಂದು ಅಲ್ಲಿನ ಮಾಧ್ಯಮ ವರದಿ ಮಾಡಿದೆ ಎನ್ನುವ ಲೇಖನವನ್ನು ಶೇರ್ ಮಾಡಿ, ರಾಹುಲ್ ಟ್ವೀಟ್ ಮಾಡಿದ್ದಾರೆ.

"ನಮ್ಮ ಗಡಿಯೊಳಗೆ ಯಾರೂ ಪ್ರವೇಶಿಸಿಲ್ಲ. ನಮ್ಮ ಭಾಗಗಳನ್ನು ಯಾರೂ ಆಕ್ರಮಿಸಿಕೊಂಡಿಲ್ಲ" ಎಂದು ಪ್ರಧಾನಿ ಮೋದಿ ಹೇಳಿಕೆ ನೀಡಿದ್ದಾರೆ ಎಂದು ಕಮ್ಯೂನಿಸ್ಟ್ ಪಾರ್ಟಿ ಒಡೆತನದ ಗ್ಲೋಬಲ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ ಎಂದು ಲೇಖನದಲ್ಲಿ ಬರೆಯಲಾಗಿದೆ.

English summary
Rahul Gandhi, why is China praising PM Modi amid border conflict
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X