ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜರಂಗ ದಳ ನಿಷೇಧ: ಫೇಸ್‌ಬುಕ್ ಸುಳ್ಳು ಹೇಳುತ್ತಿದೆಯೇ ಎಂದು ರಾಹುಲ್ ಗಾಂಧಿ ಪ್ರಶ್ನೆ

|
Google Oneindia Kannada News

ನವದೆಹಲಿ, ಡಿಸೆಂಬರ್ 18: ಬಲಪಂಥೀಯ ಸಂಘಟನೆ ಬಜರಂಗದಳದ ಮೇಲೆ ಸಾಮಾಜಿಕ ಜಾಲತಾಣದಲ್ಲಿ ನಿಷೇಧ ಹೇರಲು ಅಗತ್ಯವಾದ ಯಾವುದೇ ಪುರಾವೆಗಳು ಕಂಡುಬಂದಿಲ್ಲ ಎಂದು ಸಂಸದೀಯ ಸಮಿತಿಗೆ ಫೇಸ್‌ಬುಕ್ ಇಂಡಿಯಾ ಹೇಳಿಕೆ ನೀಡಿದೆ. ಇದಕ್ಕೆ ಪ್ರತಿಯಾಗಿ, ಸಾಮಾಜಿಕ ಮಾಧ್ಯಮ ದಿಗ್ಗಜ ಸಂಸ್ಥೆಯ ಸುರಕ್ಷತಾ ತಂಡವು ಮಾಡಿರುವ ಶಿಫಾರಸಿನ ಕುರಿತಾದ ಅಮೆರಿಕದ ಮಾಧ್ಯಮ ವರದಿಯೊಂದನ್ನು ಉಲ್ಲೇಖಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಭಾರತ ಮತ್ತು ಅದರ ಸಂಸತ್‌ಗೆ ಫೇಸ್‌ಬುಕ್ ಸುಳ್ಳು ಹೇಳುತ್ತಿದೆಯೇ? ಎಂದು ಪ್ರಶ್ನಿಸಿದ್ದಾರೆ.

ಬುಧವಾರ ಸಂಸದೀಯ ಸಮಿತಿ ಮುಂದೆ ಹೇಳಿಕೆ ನೀಡಿದ್ದ ಫೇಸ್‌ಬುಕ್ ಇಂಡಿಯಾದ ಮುಖ್ಯಸ್ಥ ಅಜಿತ್ ಮೋಹನ್, ಬಜರಂಗ ದಳವನ್ನು ಸಾಮಾಜಿಕ ಜಾಲತಾಣದಲ್ಲಿ ನಿಷೇಧಿಸುವ ಸಂಬಂಧ ಅಗತ್ಯವಾದ ಯಾವುದೇ ಅಂಶಗಳು ಫೇಸ್‌ಬುಕ್ ಸತ್ಯಪರಿಶೋಧನಾ ತಂಡಕ್ಕೆ ಕಂಡುಬಂದಿಲ್ಲ ಎಂದು ಹೇಳಿದ್ದರು.

ಗೂಗಲ್ ನಂತರ ಫೇಸ್‌ಬುಕ್‌ಗೆ ಎದುರಾಯ್ತು ಗಂಡಾಂತರಗೂಗಲ್ ನಂತರ ಫೇಸ್‌ಬುಕ್‌ಗೆ ಎದುರಾಯ್ತು ಗಂಡಾಂತರ

ಕಾಂಗ್ರೆಸ್ ಮುಖಂಡ ಶಶಿ ತರೂರ್ ಅಧ್ಯಕ್ಷತೆಯ ಮಾಹಿತಿ ತಂತ್ರಜ್ಞಾನ ಸಂಸದೀಯ ಸ್ಥಾಯಿ ಸಮಿತಿ ಮುಂದೆ ಅಜಿತ್ ಮೋಹನ್ ಹಾಜರಾಗಿದ್ದರು. ನಾಗರಿಕರ ದತ್ತಾಂಶ ಸುರಕ್ಷತೆ ವಿಚಾರವಾಗಿ ಸಮಿತಿಯು ಅವರನ್ನು ಕರೆಸಿತ್ತು.

Rahul Gandhi Asks If Facebook India is Lying To Parliament Over Ban On Bajrang Dal

ದಾಖಲೆಯ ಸಂಖ್ಯೆಯಲ್ಲಿ ಫೇಸ್‌ಬುಕ್ ಬಳಕೆದಾರರ ಡೇಟಾ ಕೇಳಿದ ಭಾರತ ಸರ್ಕಾರದಾಖಲೆಯ ಸಂಖ್ಯೆಯಲ್ಲಿ ಫೇಸ್‌ಬುಕ್ ಬಳಕೆದಾರರ ಡೇಟಾ ಕೇಳಿದ ಭಾರತ ಸರ್ಕಾರ

ಬಜರಂಗ ದಳವನ್ನು ತನ್ನ ವೇದಿಕೆಯಿಂದ ನಿಷೇಧಿಸಬೇಕು ಎಂಬ ಫೇಸ್‌ಬುಕ್ ಸುರಕ್ಷತಾ ತಂಡದ ಅಭಿಪ್ರಾಯವನ್ನು ಒಳಗೊಂಡಿದ್ದ ವಾಲ್ ಸ್ಟ್ರೀಟ್ ಜರ್ನಲ್ ಪತ್ರಿಕೆಯ ವರದಿಯನ್ನು ಹಂಚಿಕೊಂಡಿರುವ ರಾಹುಲ್ ಗಾಂಧಿ, 'ಬಜರಂಗ ದಳದ ಪೋಸ್ಟ್‌ಗಳಲ್ಲಿನ ಅಂಶಗಳು ಆಕ್ರಮಣಕಾರಿಯಾಗಿದ್ದು, ಅದನ್ನು ನಿಷೇಧಿಸಬೇಕು ಎಂದು ಅಮೆರಿಕ ಫೇಸ್‌ಬುಕ್ ಹೇಳುತ್ತದೆ. ಬಜರಂಗ ದಳದ ಪೋಸ್ಟ್‌ಗಳು ಆಕ್ರಮಣಕಾರಿಯಾಗಿಲ್ಲ ಎಂದು ನಮ್ಮ ಸಂಸದೀಯ ಸಮಿತಿಗೆ ಫೇಸ್‌ಬುಕ್ ಇಂಡಿಯಾ ಹೇಳುತ್ತದೆ. ಭಾರತ ಮತ್ತು ಅದರ ಸಂಸತ್ತಿಗೆ ಫೇಸ್‌ಬುಕ್ ಸುಳ್ಳು ಹೇಳುತ್ತಿದೆಯೇ?' ಎಂದು ಪ್ರಶ್ನಿಸಿದ್ದಾರೆ.

English summary
Congress leader Rahul Gandhi asked if Facebook India was lying to India and its Parliament over the ban on Bajrang Dal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X