ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಚುನಾವಣೆ ಸಿದ್ಧಾಂತಗಳ ನಡುವಿನ ಯುದ್ಧ: ರಾಹುಲ್ ಗಾಂಧಿ

|
Google Oneindia Kannada News

ಅಸ್ಸಾಂ, ಏಪ್ರಿಲ್ 03: "ನಾವು ಏನು ಹೇಳುತ್ತೇವೋ, ಅದನ್ನೇ ಮಾಡುತ್ತೇವೆ. ನಾವು ಸುಳ್ಳು ಹೇಳಲ್ಲ. ಈ ಚುನಾವಣೆ ಸಿದ್ಧಾಂತಗಳ ನಡುವಿನ ಯುದ್ಧ" ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಅಸ್ಸಾಮಿನ ಗೊಲಾಘಾಟ್ ನಲ್ಲಿ ಸಮಾವೇಶವೊಂದನ್ನು ಉದ್ದೇಶಿಸಿ ರಾಹುಲ್ ಗಾಂಧಿಮಾತನಾಡುತ್ತಿದ್ದರು. ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ದಿನ ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ಈಶಾನ್ಯ ರಾಜ್ಯಗಳಲ್ಲಿ ಇಂದು ರಾಹುಲ್ ಗಾಂಧಿ ಮತ್ತು ಪ್ರಧಾನಿ ನರೇಂದ್ರ ಮೋದಿ ಇಬ್ಬರೂ ಪ್ರಚಾರ ನಡೆಸಿದ್ದು ವಿಶೇಷವಾಗಿತ್ತು.

ಕಾಂಗ್ರೆಸ್ ಪ್ರಣಾಳಿಕೆ : ಕಾಮ್, ದಾಮ್, ಶಾನ್, ಸುಶಾಸನ್, ಸ್ವಾಭಿಮಾನ್ ಮತ್ತು ಸಮ್ಮಾನ್!ಕಾಂಗ್ರೆಸ್ ಪ್ರಣಾಳಿಕೆ : ಕಾಮ್, ದಾಮ್, ಶಾನ್, ಸುಶಾಸನ್, ಸ್ವಾಭಿಮಾನ್ ಮತ್ತು ಸಮ್ಮಾನ್!

ರಾಹುಲ್ ಗಾಂಧಿಯವರ ಇಂದಿನ ಭಾಷಣದಲ್ಲಿ ಕಾಂಗ್ರೆಸ್ ಮಂಗಳವಾರ ಬಿಡುಗಡೆ ಮಾಡಿದ ಪ್ರಣಾಳಿಕೆಯ ಅಂಶಗಳೇ ಹೆಚ್ಚಿದ್ದವು. ನ್ಯಾಯ್ ಯೋಜನೆ, ಸ್ಟಾರ್ಟ್ ಅಪ್ ಗಳಿಗೆ ಕೊಡುಗೆ ಮುಂತಾದ ಯೋಜನೆಗಳ ಬಗ್ಗೆ ಅವರು ತಮ್ಮ ಭಾಷಣದಲ್ಲಿ ಮಾತನಾಡಿದರು. ರಾಹುಲ್ ಗಾಂಧಿ ಭಾಷಣದ ಮುಖ್ಯಾಂಶಗಳು ಇಲ್ಲಿವೆ.

ಬಡತನ ನಿರ್ಮೂಲನೆಯತ್ತ ಹೆಜ್ಜೆ

ಬಡತನ ನಿರ್ಮೂಲನೆಯತ್ತ ಹೆಜ್ಜೆ

ಕಾಂಗ್ರೆಸ್ ಭಾರತದ ಕಡುಬಡವರಿಗೆ ಐದು ವರ್ಷಗಳಲ್ಲಿ 360000 ರೂ.ಗಳನ್ನು ನೀಡಲಿದೆ. ತಿಂಗಳಿಗೆ 6000 ರೂ.ನಂತೆ ಬಡವರಿಗೆ ಹಣ ನೀಡುವ ಕನಿಷ್ಠ ಆದಾಯ ಖಾತ್ರಿ ಯೋಜನೆ(ನ್ಯಾಯ್) ಅನ್ನು ಕಾಂಗ್ರೆಸ್ ಜಾರಿಗೆ ತರಲಿದೆ. ಈ ಮೂಲಕ ಬಡತನ ನಿರ್ಮೂಲನೆಗೆ ಕಾಂಗ್ರೆಸ್ ಮುನ್ನುಡಿ ಬರೆಯಲಿದೆ- ರಾಹುಲ್ ಗಾಂಧಿ

3 ಲಕ್ಷ 60 ಸಾವಿರ ಕೋಟಿ ರುಪಾಯಿಯನ್ನು ರಾಹುಲ್ ಎಲ್ಲಿಂದ ತರುತ್ತಾರೆ?3 ಲಕ್ಷ 60 ಸಾವಿರ ಕೋಟಿ ರುಪಾಯಿಯನ್ನು ರಾಹುಲ್ ಎಲ್ಲಿಂದ ತರುತ್ತಾರೆ?

'ಚೋರ' ರ ಜೇಬಿಂದ ಹಣ!

'ಚೋರ' ರ ಜೇಬಿಂದ ಹಣ!

ನ್ಯಾಯ್ ಯೋಜನೆಗೆ ಕಳ್ಳ ಉದ್ಯಮಿಗಳ ಜೇಬಿನಿಂದ ಹಣ ಪಡೆಯುತ್ತೇವೆ. ಚೌಕಿದಾರ ಮೋದಿಯವರಿಗೆ ಬೆಂಬಲವಾಗಿ ನಿಂತ ಚೋರ ಉದ್ಯಮಿಗಳ ಜೇಬಿಂದ ಹಣ ತೆಗೆದುಕೊಂಡು ಬಡವರಿಗೆ ನೀಡುತ್ತೇವೆ:; ರಾಹುಲ್ ಗಾಂಧಿ

ಉದ್ಯಮಿಗಳಿಗೆ ಉತ್ತೇಜನ

ಉದ್ಯಮಿಗಳಿಗೆ ಉತ್ತೇಜನ

ಸಣ್ಣ ಉದ್ಯಮ ಆರಂಭಿಸಲು ಮೂರು ವರ್ಷಗಳ ಅನುಮತಿ ಪಡೆವ ಅಗತ್ಯವಿಲ್ಲ. ಮೋದಿ ಸರ್ಕಾರ ಒಬ್ಬನೇ ಉದ್ಯಮಿಗೆ 30000 ಕೋಟಿ ರೂ.ಗಳನ್ನು ನೀಡಿದೆ. ಆದರೆ ಒಬ್ಬ ವ್ಯಕ್ತಿಗೆ ಉದ್ಯಮ ಆರಂಭಿಸಲು ಮನಸ್ಸಾದರೆ ಲಂಚ ನೀಡಬೇಕಾದ ಪರಿಸ್ಥಿತಿ ಇದೆ. ಅಂಥ ಸ್ಥಿತಿಯನ್ನು ಹೋಗಲಾಡಿಸಿ, ಉದ್ಯಮ ಆರಂಭಿಸುವವರಿಗೆ ಮೊದಲ ಮೂರು ವರ್ಷ ಅನುಮತಿಯ ಅಗತ್ಯವಿಲ್ಲದಂಥ ಯೋಜನೆ ಜಾರಿಗೆ ತರುತ್ತೇವೆ: ರಾಹುಲ್ ಗಾಂಧಿ

ರಾಹುಲ್ ಅವರ 'ನ್ಯಾಯ್' ಬಳಸಿ ಜೀವನಾಂಶ ನೀಡುವೆ: ನಿರುದ್ಯೋಗಿ ಪತಿರಾಹುಲ್ ಅವರ 'ನ್ಯಾಯ್' ಬಳಸಿ ಜೀವನಾಂಶ ನೀಡುವೆ: ನಿರುದ್ಯೋಗಿ ಪತಿ

ನಾಗರಿಕತ್ವ ತಿದ್ದುಪಡಿ ಕಾಯ್ದೆ

ನಾಗರಿಕತ್ವ ತಿದ್ದುಪಡಿ ಕಾಯ್ದೆ

ನಾಗರಿಕತ್ವ ತಿದ್ದುಪಡಿ ಮಸೂದೆ ಯಾವುದೇ ಕಾರಣಕ್ಕೂ ಜಾರಿಯಾಗದಂತೆ ನೋಡಿಕೊಳ್ಳುತ್ತೇವೆ. ಈಶಾನ್ಯ ರಾಜ್ಯಗಳಿಗೆ ವಿಶೇಷ ಸ್ಥಾನಮಾನ ಉಳಿಯುವಂತೆ ನೋಡಿಕೊಳ್ಳುತ್ತೇವೆ. ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ನಾವು ಹೇಳಿದಂತೇ ನಡೆಯುತ್ತೇವೆ. ಸುಳ್ಳು ಹೇಳುವುದಿಲ್ಲ. ನಮ್ಮ ಹೋರಾಟವೇನಿದ್ದರೂ ಬಿಜೆಪಿ-ಆರೆಸ್ಸೆಸ್ ನ ಸಿದ್ಧಾಂತದ ಮೇಲೆ. ಈ ದೇಶವನ್ನು ವಿಭಜಿಸುವ ಸಿದ್ಧಾಂತದ ವಿರುದ್ಧ ಇದು ಯುದ್ಧ- ರಾಃಉಲ್ ಗಾಂಧಿ

ಅಧಿಕಾರಕ್ಕೆ ಬಂದರೆ ನೀತಿ ಆಯೋಗ ರದ್ದು : ರಾಹುಲ್ ಘೋಷಣೆಅಧಿಕಾರಕ್ಕೆ ಬಂದರೆ ನೀತಿ ಆಯೋಗ ರದ್ದು : ರಾಹುಲ್ ಘೋಷಣೆ

English summary
Rahul Gandhi addresses 3 back to back election rallies in Assam on Wednesday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X