ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ನೆರೆರಾಷ್ಟ್ರಗಳ ಜತೆ ಬೆಳೆಸಿದ ಸಖ್ಯವನ್ನು ಮೋದಿ ಹಾಳು ಮಾಡುತ್ತಿದ್ದಾರೆ: ರಾಹುಲ್

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 23:ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ನೆರೆ ರಾಷ್ಟ್ರಗಳೊಂದಿಗೆ ಬೆಳೆಸಿಕೊಂಡಿದ್ದ ಸಂಬಂಧವನ್ನು ನರೇಂದ್ರ ಮೋದಿ ಹಾಳು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ದ ಎಕನಾಮಿಸ್ಟ್ ವೆಬ್​ಸೈಟ್​ನಲ್ಲಿ ಪ್ರಕಟವಾದ ವರದಿಯ ಇಮೇಜ್ ಅನ್ನು ಟ್ಯಾಗ್ ಮಾಡಿದ ರಾಹುಲ್ ಗಾಂಧಿ, ನೆರೆಹೊರೆಯಲ್ಲಿ ಸ್ನೇಹಿತರಿಲ್ಲದೇ ಬದುಕುಸಾಗಿಸುವುದು ಅಪಾಯಕಾರಿ ಎಂದು ಟ್ವೀಟ್ ಮಾಡಿದ್ದಾರೆ.

ಜನರು ಇನ್ನೆಷ್ಟು ದಿನ ನಿರುದ್ಯೋಗಿಗಳಾಗಿರಬೇಕು: ಕೇಂದ್ರಕ್ಕೆ ರಾಹುಲ್ ಪ್ರಶ್ನೆಜನರು ಇನ್ನೆಷ್ಟು ದಿನ ನಿರುದ್ಯೋಗಿಗಳಾಗಿರಬೇಕು: ಕೇಂದ್ರಕ್ಕೆ ರಾಹುಲ್ ಪ್ರಶ್ನೆ

ಭಾರತದ ಜತೆಗಿನ ಸಂಬಂಧವನ್ನು ಬಾಂಗ್ಲಾದೇಶ ಕಡಿಮೆ ಮಾಡಿದ್ದು, ಚೀನಾದೊಂದಿಗಿನ ಸಂಬಂಧ ದೃಢವಾಗುತ್ತಿದೆ ಎಂಬ ದ ಎಕನಾಮಿಸ್ಟ್ ವರದಿಯ ಶೀರ್ಷಿಕೆ ಅದರಲ್ಲಿದೆ. ಅನೇಕ ದಶಕಗಳ ಪ್ರಯತ್ನದ ಫಲವಾಗಿ ರೂಪುಗೊಂಡ ಸಂಬಂಧವಾಗಿತ್ತು ಅದು. ಬಹಳ ಅಪಾಯಕಾರಿ ಬೆಳವಣಿಗೆ ನಡೆಯುತ್ತಿದೆ ಎಂದು ದೂರಿದ್ದಾರೆ.

ಕಷ್ಟ ಕಾಲದಲ್ಲಿ ಲಾಭ ಮಾಡಿಕೊಳ್ಳುವ ಹುನ್ನಾರ: ರಾಹುಲ್ ಗಾಂಧಿ ವಾಗ್ದಾಳಿಕಷ್ಟ ಕಾಲದಲ್ಲಿ ಲಾಭ ಮಾಡಿಕೊಳ್ಳುವ ಹುನ್ನಾರ: ರಾಹುಲ್ ಗಾಂಧಿ ವಾಗ್ದಾಳಿ

ಬಾಂಗ್ಲಾದೇಶ ಒಂದು ಕಾಲದಲ್ಲಿ ಭಾರತದ ಆಪ್ತ ರಾಷ್ಟ್ರವಾಗಿತ್ತು. ಆದರೆ ಈಗ ಈ ಸ್ನೇಹ ಸಂಬಂಧ ಸಡಿಲಗೊಳ್ಳುತ್ತ ಸಾಗಿದ್ದು, ಚೀನಾದ ಜತೆಗಿನ ಸಂಬಂಧ ಗಟ್ಟಿಯಾಗುತ್ತಿದೆ ಎಂಬರ್ಥದ ಲೇಖನ ಎಕನಾಮಿಸ್ಟ್ ಪ್ರಕಟಿಸಿದೆ. ಇದನ್ನು ಇಟ್ಟುಕೊಂಡು ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಿನ ಸಂದರ್ಭ ನೆನಪಿಸಿಕೊಂಡು ಮೇಲಿನಂತೆ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಜನರು ಇನ್ನೆಷ್ಟು ದಿನ ನಿರುದ್ಯೋಗಿಳಾಗಿರಬೇಕು

ಜನರು ಇನ್ನೆಷ್ಟು ದಿನ ನಿರುದ್ಯೋಗಿಳಾಗಿರಬೇಕು

ದೇಶದ ಜನರು ಉದ್ಯೋಗವಿಲ್ಲದೆ ಇನ್ನೆಷ್ಟು ದಿನ ಇರಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಚೀನಾ ಗಡಿಯಲ್ಲಿರುವ ಭಾರತದ 'ಟಿಬೆಟ್' ಸೇನೆ ಬಗ್ಗೆ ನಿಮಗೆಷ್ಟು ಗೊತ್ತು? ಮೊದಲು ನರೇಂದ್ರ ಮೋದಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿರುವ ರಾಹುಲ್ ಬಳಿಕ ತರಾಟೆಗೆ ತೆಗೆದುಕೊಂಡಿದ್ದಾರೆ. ನಿರುದ್ಯೋಗ ಪ್ರಮಾಣ ಹೆಚ್ಚಳ ಕುರಿತಂತೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಉದ್ಯೋಗ ಘನತೆಯಾಗಿದ್ದು, ಸರ್ಕಾರ ಜನರಿಗೆ ಇನ್ನು ಎಷ್ಟು ದಿನಗಳವರೆಗೆ ಉದ್ಯೋಗವನ್ನು ನಿರಾಕರಿಸುತ್ತದೆ ಎಂದು ಪ್ರಶ್ನಿಸಿದ್ದಾರೆ.

ಸಂಕಷ್ಟದ ಸಮಯದಲ್ಲಿ ಲಾಭ ಮಾಡಿಕೊಳ್ಳುತ್ತಿದೆ

ಸಂಕಷ್ಟದ ಸಮಯದಲ್ಲಿ ಲಾಭ ಮಾಡಿಕೊಳ್ಳುತ್ತಿದೆ

ಕೊರೊನಾ ಬಿಕ್ಕಟ್ಟಿನಲ್ಲಿ ಲಾಭ ಮಾಡಿಕೊಳ್ಳುವ ಹುನ್ನಾವರವನ್ನು ಕೇಂದ್ರ ಮಾಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಕೊವಿಡ್ -19 ಬಿಕ್ಕಟ್ಟಿನ ಹಂತದಲ್ಲಿ ನೀಡಿದ ಭರವಸೆಗಳು ಎಲ್ಲವೂ ಹುಸಿಯಾಗಿದೆ ಎಂದು ಆರೋಪಿಸಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬುಧವಾರ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ನೀವು ಲೆಕ್ಕ ಮಾಡಿಲ್ಲ ಅಂದರೆ ಯಾವ ಕಾರ್ಮಿಕನೂ ಸತ್ತಿಲ್ಲವೇ: ರಾಹುಲ್ ಗರಂ 21 ದಿನಗಳಲ್ಲಿ ಕೊರೊನಾವನ್ನು ನಿರ್ನಾಮ ಮಾಡುವ ಬಗ್ಗೆ ಗಾಳಿಯಲ್ಲಿ ಕೋಟೆಗಳನ್ನು ಕಟ್ಟುವುದು, ಜನರ ರಕ್ಷಣೆಗಾಗಿ ಆರೋಗ್ಯ ಸೇತು ಅಪ್ಲಿಕೇಶನ್, 20 ಲಕ್ಷ ಕೋಟಿ ಪ್ಯಾಕೇಜ್, ಯಾರೂ ನಮ್ಮ ಗಡಿಗಳನ್ನು ಅತಿಕ್ರಮಿಸಿಲ್ಲ, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಷ್ಟೆಲ್ಲಾಸುಳ್ಳು ಹೇಳಿದ್ದೀರಿ ಎಂದು.. ಕೇಂದ್ರದ ವಿರುದ್ಧ ತೀವ್ರ ಟೀಕಾಪ್ರಹಾರ ನಡೆಸಿದ್ದಾರೆ.

ಮೋದಿ ದೇಶದ ದಾರಿ ತಪ್ಪಿಸುತ್ತಿದ್ದಾರೆ

ಮೋದಿ ದೇಶದ ದಾರಿ ತಪ್ಪಿಸುತ್ತಿದ್ದಾರೆ

ಭಾರತ-ಚೀನಾ ಗಡಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ದಾರಿ ತಪ್ಪಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಗ ಭಾರತ ಮೇಲೆ ಚೀನಾ ಅತಿಕ್ರಮಣ ಮಾಡಿದೆ ಎಂಬ ವಿಷಯದ ಕುರಿತು ಪ್ರಧಾನಿ ನರೇಂದ್ರ ಮೋದಿ ದೇಶದ ದಾರಿ ತಪ್ಪಿಸಿರುವುದು ರಕ್ಷಣಾ ಸಚಿವರ ಹೇಳಿಕೆಯಿಂದ ಸ್ಪಷ್ಟವಾಗಿದೆ ಎಂದು ರಾಹುಲ್ ಟೀಕಿಸಿದ್ದಾರೆ.

ಅಮೆರಿಕದಿಂದ ಸೋನಿಯಾ, ರಾಹುಲ್ ವಾಪಸ್

ಅಮೆರಿಕದಿಂದ ಸೋನಿಯಾ, ರಾಹುಲ್ ವಾಪಸ್

ಕೇಂದ್ರ ಸರ್ಕಾರವು ಜಾರಿಗೊಳಿಸಲು ಹೊರಟಿರುವ ಕೃಷಿ ಸಂಬಂಧಿತ ಕಾಯ್ದೆಗಳು ಸಂಸತ್ ಉಭಯ ಸದನದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದರ ನಡುವೆ ಆರೋಗ್ಯ ತಪಾಸಣೆಗಾಗಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾಗೆ ತೆರಳಿದ್ದ ಎಐಸಿಸಿ ಆಂತರಿಕ ಅಧ್ಯಕ್ಷೆ ಸೋನಿಯಾ ಗಾಂಧಿ ಭಾರತಕ್ಕೆ ವಾಪಸ್ಸಾಗಿದ್ದಾರೆ. ಕಳೆದ ಸಪ್ಟೆಂಬರ್.12ರಂದು ಸೋನಿಯಾ ಗಾಂಧಿಯವರು ಆರೋಗ್ಯ ತಪಾಸಣೆಗಾಗಿ ಅಮೆರಿಕಾಗೆ ಪ್ರಯಾಣ ಬೆಳೆಸಿದ್ದರು. ಸಪ್ಟೆಂಬರ್.14 ರಿಂದ ಆರಂಭಗೊಂಡ ಸಂಸತ್ ಕಲಾಪದಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಕೂಡಾ ಗೈರು ಹಾಜರಾಗಿದ್ದರು.

English summary
Living in a neighbourhood with no friends is dangerous,” tweeted senior Congress leader Rahul Gandhi on Wednesday as he attacked Prime Minister Narendra Modi for destroying India’s ties with neighbouring countries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X