ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೇಟ್ಲಿ ಮಗಳ ಖಾತೆಗೆ ಚೋಕ್ಸಿ ಹಣ ಹಾಕಿದ್ದಾರೆ: ರಾಹುಲ್ ಗಂಭೀರ ಆರೋಪ

|
Google Oneindia Kannada News

ನವದೆಹಲಿ, ಅಕ್ಟೋಬರ್ 22: ಭಾರತದ ಬ್ಯಾಂಕುಗಳಿಗೆ ಸಾವಿರಾರು ಕೋಟಿ ಹಣ ವಂಚಿಸಿ ಪರಾರಿ ಆಗಿರುವ ಮೆಹುಲ್ ಚೋಕ್ಸಿ ಕೇಂದ್ರದ ಹಣಕಾಸು ಮಂತ್ರಿ ಅರುಣ್ ಜೇಟ್ಲಿ ಅವರ ಮಗಳ ಖಾತೆಗೆ ಹಣ ಹಾಕಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.

ಅರುಣ್ ಜೇಟ್ಲಿ ಅವರ ಮಗಳ ಖಾತೆಗೆ ಯಾವ ಖಾತೆಯಿಂದ ಹಣ ವರ್ಗಾವಣೆ ಆಗಿದೆ ಎಂಬ ಬಗ್ಗೆ ಮಾಹಿತಿ ಸಹ ನೀಡಿರುವ ರಾಹುಲ್ ಗಾಂಧಿ ಐಸಿಐಸಿ ಬ್ಯಾಂಕ್‌ನ ಖಾತೆ ಸಂಖ್ಯೆಯೊಂದನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿ ಇದೇ ಖಾತೆಯಿಂದ ಜೇಟ್ಲಿ ಅವರ ಮಗಳಿಗೆ ಹಣ ಬಂದಿದೆ ಎಂದೂ ಸಹ ಹೇಳಿದ್ದಾರೆ.

Rahul Gandhi accused that Choksi deposited money to Jaitleys daughter account

ಜೇಟ್ಲಿ ಮಗಳಿಗೆ ಚೋಕ್ಸಿ ಸಾಲ ಮರುಪಾವತಿ ಮಾಡಬೇಕಿತ್ತು. ಆದರೆ ಅವರ ತಂದೆ ಚೋಕ್ಸಿ ಅವರಿಗೆ ಸಹಾಯ ಮಾಡಿ ಆತ ದೇಶ ಬಿಟ್ಟು ಓಡಿ ಹೋಗಲು ಸಹಾಯ ಮಾಡಿದರು ಆದರೆ ಆ ನಂತರ ಚೋಕ್ಸಿ, ಜೇಟ್ಲಿ ಮಗಳ ಖಾತೆಗೆ ಹಣ ಹಾಕಿದ್ದಾರೆ ಎಂದು ಐಸಿಐಸಿ ಬ್ಯಾಂಕ್‌ ಖಾತೆ ಸಂಖ್ಯೆಯನ್ನು ರಾಹುಲ್ ನೀಡಿದ್ದಾರೆ.

ಚೌಕಿದಾರ ಮೋದಿ ಹೃದಯದಲ್ಲಿ ಬಡವರಿಗೆ ಜಾಗವಿಲ್ಲ: ರಾಹುಲ್ ಗಾಂಧಿ ಚೌಕಿದಾರ ಮೋದಿ ಹೃದಯದಲ್ಲಿ ಬಡವರಿಗೆ ಜಾಗವಿಲ್ಲ: ರಾಹುಲ್ ಗಾಂಧಿ

ಅರುಣ್ ಜೇಟ್ಲಿ ಅವರ ಮಗಳು ಸೊನಾಲಿ ಜೇಟ್ಲಿ ಹಾಗೂ ಅಳಿಯ ಜಯೇಶ್ ಬಕ್ಷಿ ಅವರ ಖಾತೆಗೆ ಚೋಕ್ಸಿ ಮಾಲೀಕತ್ವದ ಗೀತಾಂಜಲಿ ಜೆಮ್ಸ್‌ ಲಿಮಿಟೆಡ್‌ನಿಂದ ಹಣ ವರ್ಗಾವಣೆ ಆಗಿತ್ತು. ಈ ಹಣ ಕಳೆದ ಡಿಸೆಂಬರ್‌ನಲ್ಲಿ ಆಗಿತ್ತು. ತನಗೆ ಸಹಾಯ ಮಾಡಲೆಂದು ಲಂಚದ ರೂಪವಾಗಿ ಈ ಹಣವನ್ನು ಚೋಕ್ಸಿ ಕೊಟ್ಟಿದ್ದ ಎಂದು ಕಾಂಗ್ರೆಸ್‌ ಆರೋಪ ಮಾಡಿದೆ.

ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುವುದಿಲ್ಲ: ಚಿದಂಬರಂ ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುವುದಿಲ್ಲ: ಚಿದಂಬರಂ

ಮೆಹುಲ್‌ ಚೋಕ್ಸಿ ದೇಶ ಬಿಟ್ಟು ಪರಾರಿಯಾದ ನಂತರ ಫೆಬ್ರವರಿ 20 ನೇ ತಾರೀಖಿನಂದು ಜೇಟ್ಲಿ ಅವರ ಮಗಳು ಚೋಕ್ಸಿ ಖಾತೆಗೆ ಹಣ ವರ್ಗಾವಣೆ ಮಾಡಿದ್ದಾರೆ ಎಂದು ರಾಜಸ್ಥಾನದ ಕಾಂಗ್ರೆಸ್‌ ಹಿರಿಯ ಮುಖಂಡ ಸಚಿನ್ ಪೈಲೆಟ್ ಆರೋಪಿಸಿದ್ದಾರೆ.

ಕಾಂಗ್ರೆಸ್ ಪಕ್ಷವು ರಫೆಲ್ ಹಗರಣ ಹಾಗೂ ಸಾಲ ಮಾಡಿ ಓಡಿ ಹೋಗುತ್ತಿರುವ ದ್ರೋಹಿಗಳ ವಿಷಯವಾಗಿ ಕೇಂದ್ರವನ್ನು ಬಹುವಾಗಿ ಕಾಡುತ್ತಿದೆ. ಚೋಕ್ಸಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅರುಣ್‌ಜೇಟ್ಲಿ ರಾಜೀನಾಮೆ ನೀಡುವಂತೆ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ಪಕ್ಷ ಒತ್ತಾಯಿಸಿದೆ.

English summary
AICC president Rahul Gandhi and congress accused that fugitive Mehul Choksi deposited money to Arun Jaitley's daughter Sonali Jaitley. Rahul Gandhi mentioned a account number in his tweet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X