ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ಸ್ಥಾನಕ್ಕೆ ರಾಹುಲ್ ದ್ರಾವಿಡ್ ಅತ್ಯಂತ ಸೂಕ್ತ ವ್ಯಕ್ತಿ!

|
Google Oneindia Kannada News

Recommended Video

ರಾಹುಲ್ ದ್ರಾವಿಡ್ ಮುಂದಿನ ಪ್ರಧಾನಿಯಾಗಬೇಕು, ಅಂತಿದ್ದಾರೆ ಫ್ಯಾನ್ಸ್ | Oneindia Kannada

ಇತ್ತೀಚೆ ಭಾರತದ ಅಂಡರ್ 19 ತಂಡ ವಿಶ್ವಕಪ್ ಗೆಲ್ಲುವ ಮೂಲಕ ಸಾಧನೆ ಮೆರೆದಿತ್ತು. ಸತತ ನಾಲ್ಕನೇ ಬಾರಿ ವಿಶ್ವಕಪ್ ಕ್ರಿಕೆಟ್ ಕಿರೀಟ ಧರಿಸುವ ಮೂಲಕ ದಾಖಲೆ ಬರೆದ ಭಾರತ ತಂಡಕ್ಕೆ ಕೋಚ್ ಆಗಿರುವ ಕನ್ನಡಿಗ ರಾಹುಲ್ ದ್ರಾವಿಡ್ ಅವರಿಗೆ ಈ ಸಮಯದಲ್ಲಿ ಸಿಕ್ಕಾಬಟ್ಟೆ ಮೆಚ್ಚುಗೆ ಹರಿದುಬಂದಿತ್ತು. ತಂಡದ ಗೆಲುವಿನ ಹಿಂದಿರುವುದು 'ಗೋಡೆ' ದ್ರಾವಿಡ್ ಅವರ ನಿರಂತರ ಪರಿಶ್ರಮ ಎಂದು ಹಾಡಿಹೊಗಳಲಾಗಿತ್ತು.

ಯಾವತ್ತಿಗೂ ತಮ್ಮ ಸರಳ ನಡೆ, ಆದರ್ಶ ವ್ಯಕ್ತಿತ್ವದ ಮೂಲಕ ಇಷ್ಟವಾಗುವ, ನಿರಂಹಕಾರಿ ದ್ರಾವಿಡ್ ಈಗ ಮತ್ತೊಂದು ಆದರ್ಶದ ನಡೆಯ ಮೂಲಕ ಸುದ್ದಿಯಾಗಿದ್ದಾರೆ.

ಅಂಡರ್ 19 ತಂಡದ ಯಶಸ್ಸಿನ ಹಿಂದೆ ಕೋಚ್ ರಾಹುಲ್ ದ್ರಾವಿಡ್

ಅಂಡರ್ 19 ವಿಶ್ವಕಪ್ ನಲ್ಲಿ ಗೆಲುವು ಸಾಧಿಸಿದ ಭಾರತ ತಂಡಕ್ಕೆ ಬಿಸಿಸಿಐ(ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ) ನಗದು ಬಹುಮಾನ ಘೋಷಿಸಿತ್ತು. ಇದರ ಪ್ರಕಾರ ರಾಹುಲ್ ದ್ರಾವಿಡ್ ಅವರಿಗೆ 50 ಲಕ್ಷ ರೂ. ಮತ್ತು ತಂಡದ ಆಟಗಾರರಿಗೆ ತಲಾ 30 ಲಕ್ಷ ರೂ. ಮತ್ತು ಉಳಿದ ಶಾಯಕ ಸಿಬ್ಬಂದಿಗಳಿಗೆ 20 ಲಕ್ಷ ರೂ. ಮೊತ್ತ ಘೋಷಿಸಲಾಗಿತ್ತು. ಆದರೆ ಈ ಕ್ರಮವನ್ನು ವಿರೋಧಿಸಿದ ದ್ರಾವಿಡ್, ಗೆಲುವಿನಲ್ಲಿ ಎಲ್ಲರದೂ ಸಮಾನ ಪರಿಶ್ರಮವಿದೆ.

ಕೊಡುವುದಾದರೆ ಎಲ್ಲರಿಗೂ ಸಮಾನ ಹಣ ನೀಡಿ, ನನಗೊಬ್ಬನಿಗೇ ಜಾಸ್ತಿ ಹಣ ನೀಡುವುದು ಬೇಡ ಎಂದು ಕೇವಲ 25 ಲಕ್ಷ ರೂ.ಗಳನ್ನಷ್ಟೇ ಇಟ್ಟುಕೊಂಡರು. ಅವರ ಈ ಆದರ್ಶ ನಡೆಯನ್ನು ಕಂಡು ಅವರ ಅಭಿಮಾನಿಗಳೆಲ್ಲ, ಭಾರತಕ್ಕೆ ಇಂಥದೇ ಪ್ರಧಾನಿ ಬೇಕು ಎಂದು ಟ್ವೀಟ್ ಮಾಡಿದ್ದಾರೆ.

ಅಬಿನಾಶ್

ಭಾರತವನ್ನು ಮತ್ತೆ ಮಹಾನ್ ದೇಶವನ್ನಾಗಿ ಮಾಡುವವರು ಅವರು ಮಾತ್ರ! ಅವರೇ ಭಾರತದ ಪ್ರಧಾನಿಯಾಗಲಿ ಎಂದು ಹಾರೈಸಿದ್ದಾರೆ ಅಬಿನಾಶ್.

ಕಾರ್ತಿಕ್ ರಾಜಾರಾಮ್

ನಮಗೆ ರಾಹುಲ್ ದ್ರಾವಿಡ್ ರಂಥವರು ಬೇಕು. ದುರಾಸೆ ಇಲ್ಲದ, ನಿಸ್ವಾರ್ಥ ವ್ಯಕ್ತಿಗಳು ಬೇಕು ಎಂದಿದ್ದಾರೆ ಕಾರ್ತಿಕ ರಾಜಾರಾಮ್.

ಉದಯ್ ಶಿಂದೆ

ಪ್ರಧಾನಿ ಮೋದಿಯವರನ್ನು ಸೋಲಿಸುವುದಕ್ಕೆ ಸಾಧ್ಯವಿರುವುದು ರಾಹುಲ್ ಗೆ ಮಾತ್ರ... ತಡೆಯಿರಿ... ನಾನು ಹೇಳಿದ್ದು ರಾಹುಲ್ ದ್ರಾವಿಡ್ ಬಗ್ಗೆ, ರಾಹುಲ್ ಗಾಂಧಿ ಬಗ್ಗೆ ಅಲ್ಲ ಎಂದಿದ್ದಾರೆ ಉದಯ್ ಶಿಂದೆ.

Array

ರಾಹುಲ್

ರಾಹುಲ್ದ್ರಾವಿಡ್ ರನ್ನು ಪ್ರಧಾನಿಯನ್ನಾಗಿ ಮಾಡುತ್ತೇವೆ ಎಂದು ಯಾವುದೇ ಪಕ್ಷ ಹೇಳಿದರೂ ಆ ಪಕ್ಷಕ್ಕೇ ಮತ ಹಾಕುತ್ತೇನೆ ಎಂದಿದ್ದಾರೆ ರಾಹುಲ್ ವಿ.ಯು.

ಗೌರವ ಡಾಕ್ಟರೇಟ್ ನಿರಾಕರಿಸಿದ ರಾಹುಲ್ ದ್ರಾವಿಡ್ ಗೌರವ ಡಾಕ್ಟರೇಟ್ ನಿರಾಕರಿಸಿದ ರಾಹುಲ್ ದ್ರಾವಿಡ್

ದ್ರಾವಿಡ್ ಸಾಧನೆ ಪಠ್ಯ ಪುಸ್ತಕ ರೂಪದಲ್ಲಿ ಲಭ್ಯ ದ್ರಾವಿಡ್ ಸಾಧನೆ ಪಠ್ಯ ಪುಸ್ತಕ ರೂಪದಲ್ಲಿ ಲಭ್ಯ

English summary
Former captain of Indian cricket team, Rahul Dravid's decision of equally distributing cash award from BCCI for the success of ICC Under 19 world cup has increased his popularity even more. Many twitterians say Rahul Dravid should be our PM!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X