ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ವಾಯುಪಡೆಗೆ ಸೆ.10ರಂದು ರಫೇಲ್ ಜೆಟ್ ಸೇರ್ಪಡೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 09 : ಭಾರತ ಫ್ರಾನ್ಸ್‌ನಿಂದ ಖರೀದಿ ಮಾಡಿರುವ ರಫೇಲ್ ಯುದ್ಧ ವಿಮಾನಗಳು ಸೆಪ್ಟೆಂಬರ್ 10ರಂದು ಅಧಿಕೃತವಾಗಿ ಭಾರತೀಯ ವಾಯುಪಡೆಗೆ ಸೇರ್ಪಡೆಗೊಳ್ಳಲಿವೆ. 5 ರಫೇಲ್ ಯುದ್ಧ ವಿಮಾನ ಈಗಾಗಲೇ ಆಗಮಿಸಿವೆ.

ಅಂಬಾಲ ವಾಯುನೆಲೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರಫೇಲ್ ಯುದ್ಧ ವಿಮಾನ ವಾಯುಪಡೆಗೆ ಸೇರಲಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಫ್ರಾನ್ಸ್ ರಕ್ಷಣಾ ಸಚಿವ ಫ್ಲೋರೆನ್ಸ್ ಪಾರ್ಲೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಲಡಾಖ್ ಪರ್ವತಗಳಲ್ಲಿ ರಾತ್ರಿ ವೇಳೆ ಅಭ್ಯಾಸ ಹಾರಾಟ ನಡೆಸಿದ ರಫೇಲ್ ಲಡಾಖ್ ಪರ್ವತಗಳಲ್ಲಿ ರಾತ್ರಿ ವೇಳೆ ಅಭ್ಯಾಸ ಹಾರಾಟ ನಡೆಸಿದ ರಫೇಲ್

ಜುಲೈನಲ್ಲಿ 29ರಂದು 5 ರಫೇಲ್ ಯುದ್ಧ ವಿಮಾನಗಳು ಫ್ರಾನ್ಸ್‌ನಿಂದ ಭಾರಕ್ಕೆ ಬಂದಿದ್ದವು. ಅಂಬಾಲ ವಾಯುನೆಲೆಯಲ್ಲಿ ವಿಮಾನಗಳಿಗೆ ಅದ್ದೂರಿ ಸ್ವಾಗತ ನೀಡಲಾಗಿತ್ತು. ಅಧಿಕೃತವಾಗಿ ಅವುಗಳನ್ನು ವಾಯುಪಡೆಗೆ ಸೇರಿಸಿಕೊಳ್ಳಲಾಗುತ್ತದೆ.

ರಫೇಲ್ ಯುದ್ಧವಿಮಾನ ಖರೀದಿ: ಕೇಂದ್ರದ ಮುಂದೆ ರಾಹುಲ್ ಗಾಂಧಿಯ 3 ಪ್ರಶ್ನೆಗಳು ರಫೇಲ್ ಯುದ್ಧವಿಮಾನ ಖರೀದಿ: ಕೇಂದ್ರದ ಮುಂದೆ ರಾಹುಲ್ ಗಾಂಧಿಯ 3 ಪ್ರಶ್ನೆಗಳು

ಈ ಕಾರ್ಯಕ್ರಮದ ಬಳಿಕ ಸಚಿವ ರಾಜನಾಥ್ ಸಿಂಗ್ ಮತ್ತು ಫ್ರಾನ್ಸ್ ರಕ್ಷಣಾ ಸಚಿವ ಫ್ಲೋರೆನ್ಸ್ ಪಾರ್ಲೆ ಸಭೆಯನ್ನು ನಡೆಸಲಿದ್ದಾರೆ. ಉಭಯ ದೇಶಗಳ ನಡುವಿನ ರಕ್ಷಣಾ ಇಲಾಖೆಗೆ ದ್ವಿಪಕ್ಷೀಯ ಸಂಬಂಧದ ಬಗ್ಗೆ ಚರ್ಚೆ ನಡೆಸಲಿದ್ದಾರೆ.

 ಅಂಬಾಲಾ ವಾಯುನೆಲೆಗೆ ಸುರಕ್ಷಿತವಾಗಿ ಬಂದಿಳಿದ ರಫೇಲ್: ಸೇನೆಯಿಂದ ವಾಟರ್ ಸೆಲ್ಯೂಟ್ ಅಂಬಾಲಾ ವಾಯುನೆಲೆಗೆ ಸುರಕ್ಷಿತವಾಗಿ ಬಂದಿಳಿದ ರಫೇಲ್: ಸೇನೆಯಿಂದ ವಾಟರ್ ಸೆಲ್ಯೂಟ್

ಭಾರತಕ್ಕೆ ಬಂದಿರುವ 5 ವಿಮಾನ

ಭಾರತಕ್ಕೆ ಬಂದಿರುವ 5 ವಿಮಾನ

ಭಾರತ ಮತ್ತು ಫ್ರಾನ್ಸ್ ನಡುವೆ ರಫೇಲ್ ಯುದ್ಧ ವಿಮಾನ ಖರೀದಿ ಒಪ್ಫಂದ ನಡೆದಿದೆ. ಸುಮಾರು 59,000 ಕೋಟಿ ರೂ. ಒಪ್ಪಂದವಿದು. ಫ್ರಾನ್ಸ್‌ ಭಾರತಕ್ಕೆ 36 ರಫೇಲ್ ಯುದ್ಧ ವಿಮಾನಗಳನ್ನು ಪೂರೈಕೆ ಮಾಡಲಿದೆ. ಈ ಪೈಕಿ ಡಾಸೋ ಏವಿಯೇಷನ್ ಕಂಪನಿ 10 ವಿಮಾನ ಹಸ್ತಾಂತರ ಮಾಡಿದೆ.

ಭಾರತೀಯರಿಗೆ ತರಬೇತಿ

ಭಾರತೀಯರಿಗೆ ತರಬೇತಿ

5 ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಬಂದಿದ್ದು, ಸೆ.10ರಂದು ಅಧಿಕೃತವಾಗಿ ವಾಯುಪಡೆ ಸೇರಲಿವೆ. ಇನ್ನೂ 5 ವಿಮಾನ ಫ್ರಾನ್ಸ್‌ನಲ್ಲಿಯೇ ಇದ್ದು, ಭಾರತೀಯ ವಾಯಪಡೆ ಪೈಲೆಟ್‌ಗಳ ತರಬೇತಿಗಾಗಿ ಬಳಕೆ ಮಾಡಲಾಗುತ್ತಿದೆ.

ಜುಲೈ 29ರಂದು ಆಗಮನ

ಜುಲೈ 29ರಂದು ಆಗಮನ

5 ವಿಮಾನಗಳು ಜುಲೈ 29ರಂದು ಭಾರತಕ್ಕೆ ಬಂದಿವೆ.ಈಗ ಆಗಿರುವ ಒಪ್ಪಂದದ ಜೊತೆ ಭಾರತ ಇನ್ನೂ 36 ರಫೇಲ್ ಯುದ್ಧ ವಿಮಾನಗಳನ್ನು ಫ್ರಾನ್ಸ್‌ನಿಂದ ಖರೀದಿ ಮಾಡುವ ಸಾಧ್ಯತೆ ಇದೆ. ಇದಕ್ಕಾಗಿ ಗುರುವಾರ ಪ್ರಾಥಮಿಕ ಹಂತದ ಮಾತುಕತೆಗಳು ನಡೆಯಲಿವೆ.

ನವೆಂಬರ್‌ನಲ್ಲಿ ಮತ್ತೆ ಆಗಮನ

ನವೆಂಬರ್‌ನಲ್ಲಿ ಮತ್ತೆ ಆಗಮನ

ಡಾಸೋ ಏವಿಯೇಷನ್ ಕಂಪನಿ ಈಗಾಗಲೇ 10 ರಫೇಲ್ ಯುದ್ಧ ವಿಮಾನ ಹಸ್ತಾಂತರ ಮಾಡಿದೆ. ನವೆಂಬರ್‌ನಲ್ಲಿ 4 ರಿಂದ 5 ವಿಮಾನ ಭಾರತಕ್ಕೆ ಬರಲಿದೆ ಎಂದು ಅಂದಾಜಿಸಲಾಗಿದೆ. 2021ರೊಳಗೆ ಎಲ್ಲಾ 36 ವಿಮಾನ ಭಾರತದ ವಾಯುಪಡೆ ಸೇರಲಿದೆ.

English summary
Rafale jets to be formally inducted into Indian Air Force on September 10, 2020 at Ambala Air Force station. Union Defence minister Rajnath Singh and French defence minister to attend function.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X