• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಾಯುಪಡೆಗೆ ರಫೇಲ್ ಸೇರ್ಪಡೆ; ಭಾರತಕ್ಕೆ ಬಂದ ಫ್ರಾನ್ಸ್ ಸಚಿವೆ

|

ನವದೆಹಲಿ, ಸೆಪ್ಟೆಂಬರ್ 10: ರಫೇಲ್ ಯುದ್ಧ ವಿಮಾನಗಳು ಇಂದು ಅಧಿಕೃತವಾಗಿ ಭಾರತದ ವಾಯುಪಡೆಗೆ ಸೇರ್ಪಡೆಗೊಳ್ಳಲಿವೆ. ಫ್ರಾನ್ಸ್ ರಕ್ಷಣಾ ಸಚಿವೆ ಫ್ಲಾರೆನ್ಸ್ ಪಾರ್ಲೆ ಈ ಕಾರ್ಯಕ್ರಮಕ್ಕಾಗಿ ನವದೆಹಲಿಗೆ ಆಗಮಿಸಿದ್ದಾರೆ.

ಅಂಬಾಲ ವಾಯುನೆಲೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ 5 ರಫೇಲ್ ಯುದ್ಧ ವಿಮಾನಗಳನ್ನು ವಾಯುಪಡೆಗೆ ಸೇರಿಸಿಕೊಳ್ಳಲಾಗುತ್ತದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕಾರ್ಯಕ್ರಮಲ್ಲಿ ಪಾಲ್ಗೊಳ್ಳಲಿದ್ದಾರೆ.

ಭಾರತೀಯ ವಾಯುಪಡೆಗೆ ಸೆ.10ರಂದು ರಫೇಲ್ ಜೆಟ್ ಸೇರ್ಪಡೆ

ಭಾರತ ಫ್ರಾನ್ಸ್‌ನಿಂದ 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿ ಮಾಡಲಿದೆ. ಇವುಗಳಲ್ಲಿ 10 ವಿಮಾನಗಳನ್ನು ಡಾಸೋ ಏವಿಯೇಷನ್ ಕಂಪನಿ ಭಾರತಕ್ಕೆ ನೀಡಿದೆ. ಇವುಗಳಲ್ಲಿ 5 ವಿಮಾನಗಳು ಜುಲೈ 29ರಂದು ಭಾರತಕ್ಕೆ ಬಂದಿವೆ.

ರಫೇಲ್ ಯುದ್ಧವಿಮಾನ ಖರೀದಿ: ಕೇಂದ್ರದ ಮುಂದೆ ರಾಹುಲ್ ಗಾಂಧಿಯ 3 ಪ್ರಶ್ನೆಗಳು

ಸರ್ವಧರ್ಮ ಪೂಜೆ : ಅಂಬಾಲ ವಾಯುನೆಲೆಯಲ್ಲಿ ರಫೇಲ್ ವಾಯುಪಡೆ ಸೇರ್ಪಡೆ ಕಾರ್ಯಕ್ರಮದಲ್ಲಿ ಸರ್ವಧರ್ಮ ಪೂಜೆಯನ್ನು ಮಾಡಲಾಗುತ್ತದೆ. ಫ್ರಾನ್ಸ್ ಅಧಿಕಾರಿಗಳ ಜೊತೆ ಬಂದಿರುವ ರಕ್ಷಣಾ ಸಚಿವೆ ಫ್ಲಾರೆನ್ಸ್ ಪಾರ್ಲೆ ವಾಯುನೆಲೆಗೆ ಬರುತ್ತಿದ್ದಂತೆ ಗೌರವ ವಂದನೆ ಸಲ್ಲಿಸಲಾಗುತ್ತದೆ.

ಲಡಾಖ್ ಪರ್ವತಗಳಲ್ಲಿ ರಾತ್ರಿ ವೇಳೆ ಅಭ್ಯಾಸ ಹಾರಾಟ ನಡೆಸಿದ ರಫೇಲ್

ಈಗ ಆಗಿರುವ ಒಪ್ಪಂದದ ಜೊತೆಗೆ ಇನ್ನೂ 36 ರಫೇಲ್ ಯುದ್ಧ ವಿಮಾನಗಳನ್ನು ಭಾರತ ಫ್ರಾನ್ಸ್‌ನಿಂದ ಖರೀದಿ ಮಾಡುವ ನಿರೀಕ್ಷೆ ಇದೆ. ಈ ಕುರಿತ ಮಾತುಕತೆ ಇಂದು ವಿಮಾನಗಳ ಸೇರ್ಪಡೆ ಕಾರ್ಯಕ್ರಮದ ಬಳಿಕ ನಡೆಯಲಿದೆ.

ಭಾರತಕ್ಕೆ ಈಗಾಗಲೇ 5 ರಫೇಲ್ ಯುದ್ಧ ವಿಮಾನಗಳು ಆಗಮಿಸಿವೆ. ನವೆಂಬರ್‌ ತಿಂಗಳಿನಲ್ಲಿ 5 ರಿಂದ 10 ವಿಮಾನಗಳು ಭಾರತಕ್ಕೆ ಆಗಮಿಸುವ ನಿರೀಕ್ಷೆ ಇದೆ. 5 ವಿಮಾನಗಳನ್ನು ಫ್ರಾನ್ಸ್‌ನಲ್ಲಿ ಭಾರತೀಯ ವಾಯುಪಡೆ ಪೈಲೆಟ್‌ಗಳ ತರಬೇತಿಗಾಗಿ ಇಟ್ಟುಕೊಳ್ಳಲಾಗಿದೆ.

English summary
Rafale jets to be formally inducted into Indian Air Force. Minister of armed forces of France Florence Parly in New Delhi. She is the chief guest for Rafale induction ceremony at Air Force Station, Ambala.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X