• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲಡಾಖ್ ಪರ್ವತಗಳಲ್ಲಿ ರಾತ್ರಿ ವೇಳೆ ಅಭ್ಯಾಸ ಹಾರಾಟ ನಡೆಸಿದ ರಫೇಲ್

|
Google Oneindia Kannada News

ಲಡಾಖ್, ಆಗಸ್ಟ್ 11: ಇತ್ತೀಚೆಗಷ್ಟೇ ಫ್ರಾನ್ಸ್‌ನಿಂದ ಭಾರತಕ್ಕೆ ಬಂದಿರುವ ಐದು ಹೊಸ ರಫೇಲ್ ಯುದ್ಧ ವಿಮಾನಗಳು ಹಿಮಾಚಲ ಪ್ರದೇಶದ ಬೆಟ್ಟ ಪ್ರದೇಶಗಳಲ್ಲಿ ರಾತ್ರಿ ವೇಳೆ ಅಭ್ಯಾಸ ಹಾರಾಟ ನಡೆಸಿವೆ. ಚೀನಾದೊಂದಿಗಿನ ಗಡಿ ಭಾಗದ ಉದ್ವಿಗ್ನತೆ ನಡುವೆಯೇ ಭಾರತೀಯ ವಾಯುಪಡೆ ಈ ಪ್ರದೇಶದಲ್ಲಿ ಅಭ್ಯಾಸ ನಡೆಸಿದೆ.

   Donald Trump Exits briefing after shooting near White House | Oneindia Kannada

   ಚೀನಾದೊಂದಿಗಿನ ಸನ್ನಿವೇಶ ಮತ್ತಷ್ಟು ಹದಗೆಟ್ಟು, ಯಾವುದೇ ತುರ್ತು ಸನ್ನಿವೇಶದ ಎದುರಾದರೆ ಲಡಾಖ್ ವಲಯದಲ್ಲಿನ ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) 1,597 ಕಿ.ಮೀ ಉದ್ದಕ್ಕೂ ರಫೇಲ್‌ನ ಯುದ್ಧ ವಿಮಾನಗಳು ಯಾವ ರೀತಿ ಕಾರ್ಯ ನಿರ್ವಹಿಸಬಹುದು ಎಂಬುದನ್ನು ಪರೀಕ್ಷಿಸಲು ಈ ಅಭ್ಯಾಸ ಹಾರಾಟ ನಡೆಸಲಾಗಿದೆ.

   ರಫೇಲ್‌ಗೆ ಬೆಂಗಾವಲಾಗಿದ್ದ ಯುದ್ಧ ವಿಮಾನಗಳ ಬಗ್ಗೆ ಗೊತ್ತಾ?ರಫೇಲ್‌ಗೆ ಬೆಂಗಾವಲಾಗಿದ್ದ ಯುದ್ಧ ವಿಮಾನಗಳ ಬಗ್ಗೆ ಗೊತ್ತಾ?

   ರಫೇಲ್ ಫೈಟರ್ಸ್‌ನ ಮೊದಲ ಬ್ಯಾಚ್‌ನ ಐದು ವಿಮಾನಗಳು ಜುಲೈ 29ರಂದು ಅಂಬಾಲಾದಲ್ಲಿನ ಭಾರತೀಯ ವಾಯು ಪಡೆಯ ಏರ್ ಬೇಸ್‌ಗೆ ಬಂದಿಳಿದಿದ್ದವು. ಈ ಎಲ್ಲ ವಿಮಾನಗಳೂ ಸಂಪೂರ್ಣ ಕಾರ್ಯಾಚರಣೆಗೆ ಸಿದ್ಧವಾಗಿವೆ. ಮೊದಲ ಹಂತದ ಎಲ್ಲ 18 ಯುದ್ಧ ವಿಮಾನಗಳು ಅಂಬಾಲಾಕ್ಕೆ ಬಂದಿಳಿಯಲಿದ್ದು, ಉಳಿದ 18 ರಫೇಲ್ ವಿಮಾನಗಳು ಭೂತಾನ ಗಡಿ ಭಾಗದ ಹಸಿಮಾರಾ ವಾಯುನೆಲೆಗೆ ಬರಲಿವೆ. ಡಸಾಲ್ಟ್ ಏವಿಯೇಷನ್ ಸಂಸ್ಥೆಯಿಂದ 36 ರಫೇಲ್ ಯುದ್ಧ ವಿಮಾನಗಳ ಖರೀದಿಗೆ ಭಾರತ ಒಪ್ಪಂದ ಮಾಡಿಕೊಂಡಿದೆ. ಮುಂದೆ ಓದಿ...

   ತರಬೇತಿಗೂ ಬಳಸಬಹುದು

   ತರಬೇತಿಗೂ ಬಳಸಬಹುದು

   ರಫೇಲ್ ಯುದ್ಧ ವಿಮಾನಗಳು ಪ್ರೋಗ್ರಾಮಬಲ್ ಸಿಗ್ನಲ್ ಪ್ರೊಸೆಸರ್ಸ್ (ಪಿಎಸ್‌ಪಿ) ಹೊಂದಿರುವುದರಿಂದ ಮತ್ತು ಯುದ್ಧದ ಸನ್ನಿವೇಶದಲ್ಲಿ ತನ್ನ ಸಿಗ್ನಲ್ ಫ್ರೀಕ್ವೆನ್ಸಿಗಳನ್ನು ಬದಲಿಸುವ ಸಾಮರ್ಥ್ಯ ಹೊಂದಿರುವುದರಿಂದ ಲಡಾಖ್ ವಲಯದಲ್ಲಿ ಅವುಗಳನ್ನು ತರಬೇತಿಗೂ ಬಳಸಿಕೊಳ್ಳಬಹುದಾಗಿದೆ.

   ಚೀನೀ ರೇಡಾರ್‌ಗೆ ಸಿಗದ ರಫೇಲ್

   ಚೀನೀ ರೇಡಾರ್‌ಗೆ ಸಿಗದ ರಫೇಲ್

   ಚೀನೀ ಪಡೆಗಳು ಆಕ್ರಮಿಸಿಕೊಂಡಿರುವ ಅಕ್ಸೈ ಚಿನ್ ಪ್ರದೇಶದ ಬೆಟ್ಟದ ತುದಿಗಳಲ್ಲಿ ಚೀನೀ ಪಿಎಲ್‌ಎ ವಿದ್ಯುನ್ಮಾನ ಗುಪ್ತಚರ ರೇಡಾರ್‌ಗಳನ್ನು ಅಳವಡಿಸಿದ್ದರೂ ರಫೇಲ್ ಜೆಟ್‌ಗಳ ಯುದ್ಧ ಕಾಲದ ಸಂಕೇತಗಳು ಅಭ್ಯಾಸ ಸ್ಥಿತಿಯ ಸಂಕೇತಗಳಿಗಿಂತ ವಿಭಿನ್ನ. ಹೀಗಾಗಿ ಅವುಗಳ ಕಣ್ಣಿಗೆ ಗೋಚರಿಸುವುದಿಲ್ಲ. ಪಿಎಲ್‌ಎ ಯುದ್ಧ ವಿಮಾನ ಪತ್ತೆ ರೇಡಾರ್‌ಗಳು ಅಮೆರಿಕದ ಯುದ್ಧ ವಿಮಾನಗಳನ್ನು ಗಮನದಲ್ಲಿಟ್ಟುಕೊಂಡು ತಯಾರಿಸಿರುವಂತಹವು. ಹೀಗಾಗಿ ಫ್ರಾನ್ಸ್ ತಯಾರಿಸಿದ ಈ ರಫೇಲ್‌ಗಳನ್ನು ಅವು ಗ್ರಹಿಸಲಾರವು.

   ಅಂಬಾಲಾ ವಾಯುನೆಲೆಗೆ ಸುರಕ್ಷಿತವಾಗಿ ಬಂದಿಳಿದ ರಫೇಲ್: ಸೇನೆಯಿಂದ ವಾಟರ್ ಸೆಲ್ಯೂಟ್ಅಂಬಾಲಾ ವಾಯುನೆಲೆಗೆ ಸುರಕ್ಷಿತವಾಗಿ ಬಂದಿಳಿದ ರಫೇಲ್: ಸೇನೆಯಿಂದ ವಾಟರ್ ಸೆಲ್ಯೂಟ್

   ವಿವಿಧ ಕ್ಷಿಪಣಿಗಳು

   ವಿವಿಧ ಕ್ಷಿಪಣಿಗಳು

   ಅಭ್ಯಾಸ ಹಾರಾಟ ನಡೆಸಿದ ರಫೇಲ್ ಯುದ್ಧ ವಿಮಾನಗಳು ಗಾಳಿಯಿಂದ ಗಾಳಿಗೆ ಹಾರುವ ಸಾಮರ್ಥ್ಯದ ಮಿಟಿಯೊರ್ ಕ್ಷಿಪಣಿಗಳು, ಎಂಐಸಿಎ ಮಲ್ಟಿಮಿಷನ್ ಕ್ಷಿಪಣಿಗಳು ಮತ್ತು ಸ್ಕಾಲ್ಪ್ ಡೀಪ್ ಸ್ಟ್ರೈಕ್ ಕ್ರೂಸ್ ಕ್ಷಿಪಣಿಗಳನ್ನು ತನ್ನೊಂದಿಗೆ ಕೊಂಡೊಯ್ದಿದ್ದವು. ಈ ಶಸ್ತ್ರಾಸ್ತ್ರಗಳು ಒಂದು ನಿರ್ದಿಷ್ಟ ಅಂತರಗಳಲ್ಲಿ ವಾಯು ಪ್ರದೇಶದಲ್ಲಿ ಮತ್ತು ಭೂಮಿಯ ಗುರಿಗಳ ಮೇಲೆ ದಾಳಿ ನಡೆಸಲು ಪೈಲಟ್‌ಗಳಿಗೆ ಅನುವು ಮಾಡಿಕೊಡುತ್ತವೆ.

   ಇತರೆ ಪ್ರದೇಶಗಳಲ್ಲಿ ನಿಗಾ

   ಇತರೆ ಪ್ರದೇಶಗಳಲ್ಲಿ ನಿಗಾ

   ಪೂರ್ವ ಲಡಾಖ್‌ನಲ್ಲಿ ಬೀಡುಬಿಟ್ಟಿದ್ದ ಉಭಯ ದೇಶಗಳ ಪಡೆಗಳನ್ನು ಹಿಂದಕ್ಕೆ ಕರೆಯಿಸಿಕೊಳ್ಳುವ ಸಂಬಂಧ ಭಾರತ ಹಾಗೂ ಚೀನಾದ ರಾಜತಾಂತ್ರಿಕ ಮತ್ತು ಸೇನಾ ಮುಖ್ಯಸ್ಥರು ನಿರಂತರ ಮಾತುಕತೆಗಳನ್ನು ನಡೆಸುತ್ತಿದ್ದರೂ, ಪೂರ್ವ ಭಾಗ ಮಾತ್ರವಲ್ಲದೆ, ಎಲ್‌ಎಸಿಯ ಉಳಿದ ಭಾಗಗಳು ಹಾಗೂ ಸಮುದ್ರ ಪ್ರದೇಶಗಳ ಮೇಲೆಯೂ ಭಾರತೀಯ ಸೇನೆಯ ಮೂರೂ ವಿಭಾಗಗಳು ಹದ್ದಿನ ಕಣ್ಣು ಇರಿಸಿವೆ.

   ರಫೇಲ್ ಯುದ್ಧವಿಮಾನ ಖರೀದಿ: ಕೇಂದ್ರದ ಮುಂದೆ ರಾಹುಲ್ ಗಾಂಧಿಯ 3 ಪ್ರಶ್ನೆಗಳುರಫೇಲ್ ಯುದ್ಧವಿಮಾನ ಖರೀದಿ: ಕೇಂದ್ರದ ಮುಂದೆ ರಾಹುಲ್ ಗಾಂಧಿಯ 3 ಪ್ರಶ್ನೆಗಳು

   ನೌಕಾ ಪಡೆಗೆ ಸೂಚನೆ

   ನೌಕಾ ಪಡೆಗೆ ಸೂಚನೆ

   ಎಲ್‌ಎಸಿಯ ಯಾವುದೇ ಭಾಗದಲ್ಲಿ ಚೀನೀ ಪಡೆಗಳ ಚಟುವಟಿಕೆ ಕಂಡುಬಂದರೆ ಅಚ್ಚರಿಪಡಬೇಕಿಲ್ಲ. ಹೀಗಾಗಿ ನಮ್ಮ ಸೇನಾ ಪಡೆಗಳು ಎಲ್ಲ ರೀತಿಯಲ್ಲಿ ಸನ್ನದ್ಧವಾಗಿರುವಂತೆ ಕಳೆದವಾರ ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಣೆ ಹೇಳಿದ್ದರು. ಅರಬ್ಬಿ ಸಮುದ್ರ, ಬಂಗಾಳ ಕೊಲ್ಲಿ ಮತ್ತು ಹಿಂದೂ ಮಹಾಸಾಗರಗಳಲ್ಲಿ ನಿಗಾ ಇರಿಸುವಂತೆ ನೌಕಾ ಪಡೆಗೆ ಸೂಚನೆ ನೀಡಲಾಗಿದೆ.

   English summary
   Rafale fighter jets are practising night flying in the mountains of Ladakh in Himachal Pradesh.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X