ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳವಾರ ಮೊದಲ ರಫೇಲ್ ವಿಮಾನ ಭಾರತಕ್ಕೆ: ವಿಶೇಷತೆಗಳೇನು?

|
Google Oneindia Kannada News

ನವದೆಹಲಿ, ಅಕ್ಟೋಬರ್ 07: ರಫೇಲ್ ಯುದ್ಧ ವಿಮಾನ ಮಂಗಳವಾರ ಭಾರತದ ಕೈ ಸೇರಲಿದೆ. ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಅವರು ಮೊದಲ ರಫೇಲ್ ವಿಮಾನವನ್ನು ಸ್ವೀಕರಿಸಿ, ಪರಿಕ್ಷಾರ್ಥ ಹಾರಾಟವೂ ನಡೆಸಲಿದ್ದಾರೆ.

ಹಲವು ಕಾರಣಗಳಿಗಾಗಿ ರಫೇಲ್ ಯುದ್ಧ ವಿಮಾನ ಭಾರತದಾದ್ಯಂತ ಚರ್ಚೆಗೆ ಕಾರಣವಾಗಿತ್ತು. ಆದರೆ ಅಂತಿಮವಾಗಿ ಮೊದಲ ರಫೇಲ್ ಯುದ್ಧ ವಿಮಾನ ನಾಳೆ ಭಾರತದ ಕೈಸೇರಲಿದ್ದು, ವಾಯುಪಡೆಯ ಶಕ್ತಿ ದ್ವಿಗುಣಗೊಳಿಸಲಿದೆ.

ಭಾರಿ ಚರ್ಚೆಗೆ ಕಾರಣವಾಗಿದ್ದ ರಫೇಲ್‌ ನಲ್ಲಿ ಅಂತಹಾ ವಿಶೇಷತೆ ಏನಿದೆ ಎಂಬುದು ಹಲವರ ಪ್ರಶ್ನೆ. ರಫೇಲ್‌ಗೆ ಇರುವ ಶಕ್ತಿಯೇ ಇದರ ಹೆಚ್ಚಿನ ಬೆಲೆಗೆ ಕಾರಣ ಎಂದು ಆಗಿನ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು. ಹಾಗಿದ್ದರೆ ಆ ಶಕ್ತಿ ಏನು? ಇಲ್ಲಿದೆ ಮಾಹಿತಿ.

60,000 ಅಡಿ ಮೇಲಕ್ಕೆ ಹಾರುವ ಸಾಮರ್ಥ್ಯ

60,000 ಅಡಿ ಮೇಲಕ್ಕೆ ಹಾರುವ ಸಾಮರ್ಥ್ಯ

ಅತ್ಯಂತ ವೇಗದ ವಿಮಾನವಾದ ರಫೇಲ್, ನಿಮಿಷದಲ್ಲೇ 60,೦೦೦ ಅಡಿ ಮೇಲಕ್ಕೆ ಏರಿಬಿಡಲ್ಲದು. ಖಾಲಿ ಇದ್ದಾಗ ಇದರ ತೂಕ 24,600 ಕೆ.ಜಿ ತೂಕವಷ್ಟೆ. ಒಟ್ಟು ಸುಮಾರು 9545 ಕೆ.ಜಿ ತೂಕವನ್ನು ಹೊತ್ತೊಯ್ಯಬಲ್ಲದು.

ಗಂಟೆಗೆ ಗರಿಷ್ಟ ವೇಗ 1389 ಕಿ.ಮೀ

ಗಂಟೆಗೆ ಗರಿಷ್ಟ ವೇಗ 1389 ಕಿ.ಮೀ

ತೀವ್ರ ವೇಗದಲ್ಲಿ ನುಗ್ಗುವ ಸಾಮರ್ಥ್ಯ ಹೊಂದಿರುವ ರಫೇಲ್ ವಿಮಾನದ ಗರಿಷ್ಟ ವೇಗ ಗಂಟೆಗೆ 1389 ಕಿ.ಮೀ. ರಫೇಲ್ ಯುದ್ಧವಿಮಾನವು ಒಂದು ಗಂಟೆಯಲ್ಲಿ 1389 ಕಿ.ಮೀಗಳನ್ನು ಕ್ರಮಿಸಬಲ್ಲದು. ರಫೇಲ್‌ನ ಒಟ್ಟು ಉದ್ದ 15.30 ಮೀಟರ್. ಎತ್ತರ 5.10 ಮೀಟರ್.

ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ರಫೇಲ್ ವಿಮಾನ

ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ರಫೇಲ್ ವಿಮಾನ

ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುವ ರಫೇಲ್ ಯುದ್ಧವಿಮಾನ, ವೇಗವಾಗಿ ದಾಳಿ ಮಾಡಬಲ್ಲದು, ದೂರದ ಗುರಿಗಳನ್ನು ಹೊಡೆದು ಉರುಳಿಸಬಲ್ಲದು. ಅತ್ಯಾಧುನಿಕ ತಂತ್ರಜ್ಞಾನದಿಂದ ವೈರಿಯ ಚಲನವಲನಗಳನ್ನು ಸುಲಭವಾಗಿ ಗುರುತಿಸಿ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿದೆ.

300 ಕಿ.ಮೀ ದೂರದ ಗುರಿಯ ಮೇಲೆ ದಾಳಿ ಮಾಡಬಲ್ಲದು

300 ಕಿ.ಮೀ ದೂರದ ಗುರಿಯ ಮೇಲೆ ದಾಳಿ ಮಾಡಬಲ್ಲದು

ಒಂದೇ ಜಿಗಿತದಲ್ಲಿ 2000 ನಾಟಿಕಲ್ ಮೈಲು ದೂರ ಹಾರುವ ಸಾಮರ್ಥ್ಯ ರಫೇಲ್‌ಗೆ ಇದೆ. ಗರಿಷ್ಠ ಸ್ಥಿರ ಎತ್ತರ 50,000 ಅಡಿ. ಹಾರಾಟ ನಡೆಸುವಾಗಲೇ 300 ಕಿ.ಮೀ ದೂರದ ಗುರಿಯನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ.

English summary
First Rafale jet is deleviring to India on Tuesday (October 08) Rafale fighter jet specifications and strengths.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X