ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಫೇಲ್ ಡೀಲ್ : ಮೋದಿ ವಿರುದ್ಧ ದೂರು ನೀಡಿದ ಯಶವಂತ್ ಸಿನ್ಹಾ

|
Google Oneindia Kannada News

ನವದೆಹಲಿ, ಅಕ್ಟೋಬರ್ 05: ಸರಿ ಸುಮಾರು 60 ಸಾವಿರ ಕೋಟಿ ಮೌಲ್ಯದ ರಫೇಲ್ ಯುದ್ಧ ವಿಮಾನ ಖರೀದಿ ವಿವಾದಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ. ಬಿಜೆಪಿಯ ಮಾಜಿ ಮುಖಂಡ ಯಶವಂತ್ ಸಿನ್ಹಾ ಹಾಗೂ ತಂಡದವರು, ಮೋದಿ ಸೇರಿದಂತೆ ಪ್ರಮುಖರ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರೆಸಿ, ಸಿಬಿಐಗೆ ದೂರು ಸಲ್ಲಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ರಿಲಯನ್ಸ್ ಸಮೂಹ ಸಂಸ್ಥೆ ಮುಖ್ಯಸ್ಥ ಅನಿಲ್ ಅಂಬಾನಿ, ಡಸಾಲ್ಟ್ ಏವಿಯೇಷನ್ ಮುಖ್ಯಸ್ಥ ಎರಿಕ್ ಟ್ರಾಪಿಯರ್, ಮಾಜಿ ರಕ್ಷಣಾ ಸಚಿವ ಮನೋಹರ್ ಪರಿಕ್ಕಾರ್ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿಯಲ್ಲಿ ದೂರು ದಾಖಲಾಗಿದೆ.

Rafale Deal : Yashwant Sinha moves to CBI complaint against Modi

ಪ್ರಧಾನಿ ಮೋದಿ ವಿರುದ್ಧ ಸ್ವಜನಪಕ್ಷಪಾತ, ಅಧಿಕಾರ ದುರ್ಬಳಕೆ ಆರೋಪ ಹೊರೆಸಲಾಗಿದ್ದು, ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಸೆಕ್ಷನ್ 7 ಎ, ಬಿ,ಸಿ ಹಾಗೂ ಸೆಕ್ಷನ್ 13 (1) ಡಿ ಅಡಿಯಲ್ಲಿ ದೂರು ದಾಖಲಿಸಿ, ಎಫ್ ಐಆರ್ ಹಾಕಲು ಕೋರಲಾಗಿದೆ.

36 ಯುದ್ಧ ವಿಮಾನಗಳ ಕುರಿತಂತೆ ವಿವಾದ ಉಂಟಾಗಿದ್ದು, ಈ ಯುದ್ಧ ವಿಮಾನಗಳ ಖರೀದಿ ಡೀಲ್ ಫ್ರಾನ್ಸಿನ ಡಸಾಲ್ಟ್ ಸಂಸ್ಥೆಗೆ ನೀಡಬೇಕಾದರೆ, ಅನಿಲ್ ಅಂಬಾನಿ ಅವರ ಸಂಸ್ಥೆಗೆ ಗುತ್ತಿಗೆ ನೀಡಬೇಕು ಎಂದು ಪ್ರಧಾನಿ ಮೋದಿ ಅವರು ತಾಕೀತು ಮಾಡಿದ್ದರು ಎಂದು ಮಾಜಿ ಕೇಂದ್ರ ಸಚಿವ ಯಶವಂತ ಸಿನ್ಹಾ, ಅರುಣ್ ಶೌರಿ, ಪ್ರಶಾಂತ್ ಭೂಷಣ್ ಅವರು ಆರೋಪಿಸಿದ್ದಾರೆ.

English summary
Former BJP Union ministers Yashwant Sinha and Arun Shourie, and eminent advocate Prashant Bhushan, on Thursday formally moved the Central Bureau of Investigation with a complaint against Prime Minister Narendra Modi with the charge: abuse of authority, under the Prevention of Corruption Act.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X