ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಫೇಲ್ ಒಪ್ಪಂದ: ಸುಪ್ರೀಂಕೋರ್ಟ್‌ನಲ್ಲಿ ಕೇಂದ್ರ ಸರ್ಕಾರಕ್ಕೆ ಹಿನ್ನಡೆ

|
Google Oneindia Kannada News

ನವದೆಹಲಿ, ಏಪ್ರಿಲ್ 10: ರಫೇಲ್ ಒಪ್ಪಂದ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ಕೇಂದ್ರ ಸರ್ಕಾರಕ್ಕೆ ಬುಧವಾರ ಹಿನ್ನಡೆ ಉಂಟಾಗಿದೆ.

'ಕಳುವಾದ' ದಾಖಲೆಗಳನ್ನು ಪರಾಮರ್ಶೆಗಾಗಿ ಬಳಸಿಕೊಳ್ಳಬಹುದು ಎಂದು ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ಇದರಿಂದ ಸೋರಿಕೆಯಾದ ದಾಖಲೆಗಳನ್ನು ತೀರ್ಪು ಮರುಪರಿಶೀಲನೆಗೆ ಬಳಸಿಕೊಳ್ಳುವಂತೆ ಸಲ್ಲಿಸಲಾಗಿದ್ದ ಅರ್ಜಿಗಳಿಗೆ ಪ್ರಾಥಮಿಕ ಆಕ್ಷೇಪ ವ್ಯಕ್ತಪಡಿಸಿದ್ದ ಕೇಂದ್ರ ಸರ್ಕಾರದ ವಾದಕ್ಕೆ ಕೋರ್ಟ್ ಮಾನ್ಯತೆ ನೀಡಿಲ್ಲ.

'ಸೂಕ್ಷ್ಮ ಮಾಹಿತಿ ಬಹಿರಂಗ ಕಳವಿಗೆ ಸಮ, ರಾಷ್ಟ್ರೀಯ ಭದ್ರತೆ ಅಪಾಯದಲ್ಲಿ''ಸೂಕ್ಷ್ಮ ಮಾಹಿತಿ ಬಹಿರಂಗ ಕಳವಿಗೆ ಸಮ, ರಾಷ್ಟ್ರೀಯ ಭದ್ರತೆ ಅಪಾಯದಲ್ಲಿ'

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಸುಪ್ರೀಂಕೋರ್ಟ್ ನ್ಯಾಯಪೀಠವು 2018ರ ಡಿಸೆಂಬರ್‌ನಲ್ಲಿ ಕೇಂದ್ರ ಸರ್ಕಾರಕ್ಕೆ ಕ್ಲೀನ್ ಚಿಟ್ ನೀಡಿದ್ದ ತೀರ್ಪಿನ ವಿರುದ್ಧ ಸಲ್ಲಿಸಲಾಗಿದ್ದ ಪರಾಮರ್ಶನಾ ಅರ್ಜಿಗೆ ಕೇಂದ್ರದ ಆಕ್ಷೇಪವನ್ನು ತಿರಸ್ಕರಿಸಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ರಫೇಲ್ ಜೆಟ್‌ಗಳ ದರ ಮತ್ತು ಡಸಾಲ್ಟ್‌ನ ಆಫ್‌ಸೆಟ್ ಪಾಲುದಾರನಾಗಿ ಅನಿಲ್ ಅಂಬಾನಿ ಒಡೆತನದ ಕಂಪೆನಿಯನ್ನು ನೇಮಿಸಿರುವುದರ ವಿರುದ್ಧದ ಅರ್ಜಿಗಳು ಸೇರಿದಂತೆ ತೀರ್ಪು ಮರುಪರಿಶೀಲನೆಗಾಗಿ ಸಲ್ಲಿಸಲಾದ ಅರ್ಜಿಗಳ ವಿವರವಾದ ವಿಚಾರಣೆಗೆ ದಿನಾಂಕ ನಿಗದಿಪಡಿಸಲಾಗುವುದು ಎಂದು ನ್ಯಾಯಪೀಠ ಹೇಳಿದೆ.

ಅಂಬಾನಿಗೆ ಸಂಕಷ್ಟ?

ಅಂಬಾನಿಗೆ ಸಂಕಷ್ಟ?

ಈ ಮರುಪರಿಶೀಲನಾ ಅರ್ಜಿಗಳ ವಿವರವಾದ ವಿಚಾರಣೆಗೆ ದಿನ ನಿಗದಿಪಡಿಸುವುದಾಗಿ ಕೋರ್ಟ್ ಹೇಳಿದೆ. ಇದರಿಂದ ನ್ಯಾಯಾಲಯವು ಅನಿಲ್ ಅಂಬಾನಿ ಪಾಲುದಾರಿಕೆ ವಿವಾದ ಸೇರಿದಂತೆ ಒಪ್ಪಂದದ ವಿವಿಧ ಕೋನಗಳನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.

ಅರ್ಜಿದಾರರ ಆಕ್ಷೇಪ ಏನು?

ಅರ್ಜಿದಾರರ ಆಕ್ಷೇಪ ಏನು?

ಡಿಸೆಂಬರ್‌ನಲ್ಲಿ ನೀಡಿದ್ದ ತೀರ್ಪನ್ನು ಮರುಪರಿಶೀಲನೆ ಮಾಡುವಂತೆ ಅರ್ಜಿದಾರರು ಹೊಸದಾಗಿ ದಾಖಲೆಗಳನ್ನು ಸಲ್ಲಿಸಿದ ಬಳಿಕ ಕೇಂದ್ರ ಸರ್ಕಾರ ಆಕ್ಷೇಪಣೆ ಸಲ್ಲಿಸಿತ್ತು. ವಿಚಾರಣೆ ವೇಳೆ ಅರ್ಜಿದಾರರು ಡಸಾಲ್ಟ್‌ನ ಆಫ್‌ಸೆಟ್ ಪಾಲುದಾರರಾಗಿ ಅನಿಲ್ ಅಂಬಾನಿ ಮಾಲಿಕತ್ವದ ಕಂಪೆನಿಯನ್ನು ಆಯ್ಕೆ ಮಾಡಿಕೊಂಡಿದ್ದನ್ನು ಪ್ರಶ್ನಿಸಿದ್ದರು.

ರಫೇಲ್ ಡೀಲ್ ಪುಸ್ತಕವನ್ನು ಮುಟ್ಟುಗೋಲು ಹಾಕಿದ್ದು ಯಾರು?ರಫೇಲ್ ಡೀಲ್ ಪುಸ್ತಕವನ್ನು ಮುಟ್ಟುಗೋಲು ಹಾಕಿದ್ದು ಯಾರು?

ದಾಖಲೆಗಳ ಕಳವು

ದಾಖಲೆಗಳ ಕಳವು

ವಕೀಲ ಪ್ರಶಾಂತ್ ಭೂಷಣ್, ಬಿಜೆಪಿಯ ಮಾಜಿ ಮುಖಂಡರಾದ ಅರುಣ್ ಶೌರಿ ಮತ್ತು ಯಶವಂತ್ ಸಿನ್ಹಾ ಅವರು ಸಲ್ಲಿಸಲಾಗಿದ್ದ ಅರ್ಜಿಯಲ್ಲಿ ರಕ್ಷಣಾ ಇಲಾಖೆಯಲ್ಲಿದ್ದ ಕಡತಗಳ ನಕಲನ್ನು ಅಡಕ ಮಾಡಲಾಗಿದೆ. ರಫೇಲ್ ದಾಖಲೆಗಳನ್ನು ಕಳವು ಮಾಡಲಾಗಿದ್ದು, ಅವುಗಳನ್ನು ಅರ್ಜಿಯಲ್ಲಿ ಸೇರಿಸಲಾಗಿದೆ ಎಂದು ಕೇಂದ್ರ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿತ್ತು.

ರಫೇಲ್ ವಿವಾದದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಆರು ಸಂಗತಿಗಳುರಫೇಲ್ ವಿವಾದದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಆರು ಸಂಗತಿಗಳು

Array

ಅರುಣ್ ಶೌರಿ ಸಂತಸ

ದಾಖಲೆಗಳು ರಕ್ಷಣೆಗೆ ಸಂಬಂಧಿಸಿರುವುದರಿಂದ ಕೋರ್ಟ್ ಅವುಗಳನ್ನು ಪರಿಶೀಲನೆ ನಡೆಸಬೇಕು ಎನ್ನುವುದು ನಮ್ಮ ವಾದವಾಗಿತ್ತು. ಈ ಸಾಕ್ಷ್ಯಗಳಿಗಾಗಿ ಅವರು ಕೇಳಿದ್ದರು ಮತ್ತು ನಾವು ಅವುಗಳನ್ನು ಒದಗಿಸಿದ್ದೇವೆ. ಆದ್ದರಿಂದ ಸುಪ್ರೀಂಕೋರ್ಟ್ ನಮ್ಮ ಅರ್ಜಿಯನ್ನು ಸ್ವೀಕರಿಸಿದೆ ಮತ್ತು ಸರ್ಕಾರದ ವಾದವನ್ನು ತಿರಸ್ಕರಿಸಿದೆ ಎಂದು ಅರುಣ್ ಶೌರಿ ಹೇಳಿದ್ದಾರೆ.

ಸರ್ಕಾರವು ಸುಪ್ರೀಂಕೋರ್ಟ್‌ಅನ್ನು ತಪ್ಪುದಾರಿಗೆ ಎಳೆದಿತ್ತು. ಅದನ್ನು ತೋರಿಸಲು ಈ ದಾಖಲೆಗಳು ನೆರವು ನೀಡಲಿವೆ. ಮೋದಿ ಅವರು ದೇಶಕ್ಕೆ ಸುಳ್ಳು ಹೇಳಿದ್ದಾರೆ. ಮತ್ತು ನಾವೀಗ ವಾಸ್ತವವನ್ನು ಮುಂದಿಡಲಿದ್ದೇವೆ ಎಂದು ಶೌರಿ ಹೇಳಿದ್ದಾರೆ.

58 ಸಾವಿರ ಕೋಟಿಯ ರಫೇಲ್ ಡೀಲ್ ಎಂದರೇನು? ಏನಿದು ವಿವಾದ?58 ಸಾವಿರ ಕೋಟಿಯ ರಫೇಲ್ ಡೀಲ್ ಎಂದರೇನು? ಏನಿದು ವಿವಾದ?

English summary
In a major setback for centre in Supreme Court as it rejected preliminary objections against review petitions on Rafale deal case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X