• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಫೇಲ್ ಒಪ್ಪಂದದಲ್ಲಿ ಭ್ರಷ್ಟಾಚಾರ ಆರೋಪ: 2 ವಾರಗಳಲ್ಲಿ ಹೊಸ ಅರ್ಜಿ ವಿಚಾರಣೆ

|

ನವದೆಹಲಿ, ಏಪ್ರಿಲ್ 12: ರಫೇಲ್ ಯುದ್ಧ ವಿಮಾನ ಖರೀದಿಗಾಗಿ ಫ್ರಾನ್ಸ್ ಜತೆ ಮಾಡಿಕೊಂಡ ಒಪ್ಪಂದದ ಕುರಿತು ನಡೆದಿದೆ ಎನ್ನಲಾದ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಕೋರಿ ಹೊಸ ಅರ್ಜಿಯೊಂದು ದಾಖಲಾಗಿದ್ದು, ಅದನ್ನು ಎರಡು ವಾರಗಳಲ್ಲಿ ಸುಪ್ರೀಂಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.

2016ರಲ್ಲಿ ಭಾರತ ಮತ್ತು ಫ್ರಾನ್ಸ್ ನಡುವೆ ನಡೆದ ರಫೇಲ್ ಹೊಸ ಒಪ್ಪಂದದಲ್ಲಿ ಡಸಾಲ್ಟ್ ಏವಿಯೇಷನ್ ಸಂಸ್ಥೆಯು ಭಾರತೀಯ ಮಧ್ಯವರ್ತಿಯೊಬ್ಬರಿಗೆ 1.1 ಮಿಲಿಯನ್ ಯುರೋ ಲಂಚ ನೀಡಿದೆ ಎಂದು ಫ್ರಾನ್ಸ್‌ನ ಮಾಧ್ಯಮ ಸಂಸ್ಥೆಯೊಂದು ವರದಿ ಪ್ರಕಟಿಸಿತ್ತು. ಈ ವರದಿ ತೀವ್ರ ಕೋಲಾಹಲ ಸೃಷ್ಟಿಸಿತ್ತು. ಈ ಸಂಬಂಧ ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿದೆ.

ರಫೇಲ್ ಒಪ್ಪಂದದಲ್ಲಿ ಭಾರತದ ಮಧ್ಯವರ್ತಿಗೆ 1 ಮಿಲಿಯನ್ ಯುರೋ ಹಣ: ಫ್ರಾನ್ಸ್ ಪತ್ರಿಕೆ ಸ್ಫೋಟಕ ವರದಿರಫೇಲ್ ಒಪ್ಪಂದದಲ್ಲಿ ಭಾರತದ ಮಧ್ಯವರ್ತಿಗೆ 1 ಮಿಲಿಯನ್ ಯುರೋ ಹಣ: ಫ್ರಾನ್ಸ್ ಪತ್ರಿಕೆ ಸ್ಫೋಟಕ ವರದಿ

ವಕೀಲ ಮನೋಹರ ಲಾಲ್ ಶರ್ಮಾ ಹೊಸ ಅರ್ಜಿ ಸಲ್ಲಿಸಿದ್ದಾರೆ. ರಫೇಲ್ ಒಪ್ಪಂದದಲ್ಲಿ ಅವ್ಯವಹಾರ ನಡೆದಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿ ಈ ಹಿಂದೆಯೂ ಮನೋಹರ್ ಲಾಲ್ ಶರ್ಮಾ ಅರ್ಜಿ ಸಲ್ಲಿಸಿದ್ದರು. ಆದರೆ 2018ರ ಡಿಸೆಂಬರ್‌ನಲ್ಲಿ ಅರ್ಜಿಯನ್ನು ತಿರಸ್ಕರಿಸಲಾಗಿತ್ತು. 2019ರ ನವೆಂಬರ್‌ನಲ್ಲಿ ಪರಾಮರ್ಶನ ಅರ್ಜಿ ಕೂಡ ತಿರಸ್ಕೃತಗೊಂಡಿತ್ತು.

ಆದರೆ ಫ್ರಾನ್ಸ್‌ನ ಮಾಧ್ಯಮವೊಂದು ಇತ್ತೀಚೆಗೆ ಒಪ್ಪಂದದಲ್ಲಿ ಅವ್ಯವಹಾರ ನಡೆದಿದೆ ಎಂದು ವರದಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಅವರು ಹೊಸದಾಗಿ ಮತ್ತೊಂದು ಅರ್ಜಿ ಸಲ್ಲಿಸಿದ್ದಾರೆ. ಈ ಆರೋಪಗಳನ್ನು ಡಸಾಲ್ಟ್ ಏವಿಯೇಷನ್ ಮತ್ತು ಬಿಜೆಪಿ ನಿರಾಕರಿಸಿವೆ.

ರಫೇಲ್ ಒಪ್ಪಂದ; ಹಣ ಪಾವತಿ ಆರೋಪ ನಿರಾಧಾರ ಎಂದ ಬಿಜೆಪಿರಫೇಲ್ ಒಪ್ಪಂದ; ಹಣ ಪಾವತಿ ಆರೋಪ ನಿರಾಧಾರ ಎಂದ ಬಿಜೆಪಿ

ದೇಶದ ಭ್ರಷ್ಟಾಚಾರ ನಿಗ್ರಹ ಸಂಸ್ಥೆಯ ತನಿಖೆಯನ್ನು ಉಲ್ಲೇಖಿಸಿ, ಡಸಾಲ್ಟ್ ಕಂಪೆನಿಯು ಭಾರತದ ಡೆಫ್ಸಿಸ್ ಸಲ್ಯೂಷನ್ಸ್ ಎಂಬ ಕಂಪೆನಿಗೆ 50 ಮಾದರಿ ವಿಮಾನಗಳನ್ನು ತಯಾರಿಸುವ ಸಲುವಾಗಿ ಉಡುಗೊರೆಯಾಗಿ 1.1 ಮಿಲಿಯನ್ ಯುರೋ ನೀಡಿರುವುದಾಗಿ ಫ್ರಾನ್ಸ್‌ನ 'ಮೀಡಿಯಾಪಾರ್ಟ್' ಪತ್ರಿಕೆ ವರದಿ ಮಾಡಿತ್ತು.

English summary
Rafale Deal Corruption Charges: Supreme Court to hear fresh petition in two weeks filed by advocate Manohar Lal Sharma.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X