ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಫೇಲ್: ವಿಮಾನಗಳ ಸಂಖ್ಯೆ ಇಳಿದರೂ ದರ ಶೇ 14.2ರಷ್ಟು ಹೆಚ್ಚಳ ಆಗಿದ್ದು ಹೇಗೆ?

|
Google Oneindia Kannada News

ನವದೆಹಲಿ, ಜನವರಿ 19: ಫ್ರಾನ್ಸ್‌ನೊಂದಿಗೆ ಮಾಡಿಕೊಂಡಿದ್ದ ಮೂಲ 126 ರಫೇಲ್ ಯುದ್ಧ ವಿಮಾನದ ಒಪ್ಪಂದಕ್ಕೆ ಬದಲಾಗಿ 36 ಯುದ್ಧ ವಿಮಾನಗಳಿಗೆ ಇಳಿಸುವ ನಿರ್ಧಾರವು ಪ್ರತಿ ವಿಮಾನವು ಶೇ 14ರಷ್ಟು ದುಬಾರಿಯಾಗಲು ಕಾರಣ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.

ಭಾರತದ ವಾಯುಸೇನೆ ಬಯಸಿದ ರೀತಿಯಲ್ಲಿ 13 ನಿರ್ದಿಷ್ಟ ಅಂಶಗಳ ವಿನ್ಯಾಸ ಹಾಗೂ ಅಭಿವೃದ್ಧಿಗೆ ಡಸಾಲ್ಟ್ ಬಿಲಿಯನ್ ಯೂರೋ ದರವನ್ನು ವಿಧಿಸುತ್ತಿತ್ತು. ಹೊಸ ಒಪ್ಪಂದದಲ್ಲಿ ಚೌಕಾಸಿ ನಡೆಸಿ ಈ ದರವನ್ನು 1.3 ಬಿಲಿಯನ್ ಯೂರೋಗೆ ಇಳಿಸಲಾಯಿತು.

ರಫೇಲ್ ಡೀಲ್ : ಮೋದಿ ಪುರುಷತ್ವಕ್ಕೇ ಸವಾಲು ಹಾಕಿದ ರಾಹುಲ್ ಗಾಂಧಿ! ರಫೇಲ್ ಡೀಲ್ : ಮೋದಿ ಪುರುಷತ್ವಕ್ಕೇ ಸವಾಲು ಹಾಕಿದ ರಾಹುಲ್ ಗಾಂಧಿ!

ಆದರೆ, ಅಷ್ಟು ಕಡಿಮೆ ಸಂಖ್ಯೆಯ ವಿಮಾನಗಳಿಗೆ ಈ ಮೊತ್ತ ಹಂಚಿ ಹೋಗುವುದರಿಂದ ಪ್ರತಿ ವಿಮಾನದ ವೆಚ್ಚ 11.11 ಮಿಲಿಯನ್ ಯೂರೋದಿಂದ (90 ಕೋಟಿ ರೂ.) 36.11 ಮಿಲಿಯನ್ ಯೂರೋಕ್ಕೆ ಏರಿಕೆಯಾಗಿದೆ. ಇದರ ಫಲವಾಗಿ ಯುಪಿಎ ಸರ್ಕಾರದ ಅವಧಿಯಲ್ಲಿ ಮಾಡಿಕೊಳ್ಳಲಾದ ಒಪ್ಪಂದಕ್ಕೆ ಹೋಲಿಸಿದರೆ ಎನ್‌ಡಿಎ ಸರ್ಕಾರ ಸಹಿಹಾಕಿದ ಒಪ್ಪಂದದಲ್ಲಿ ಪ್ರತಿ ವಿಮಾನದ ವೆಚ್ಚ ಶೇ 14.2ರಷ್ಟು ಹೆಚ್ಚಾಗಿದೆ ಎಂದು 'ದಿ ಹಿಂದೂ' ವರದಿ ತಿಳಿಸಿದೆ.

ಮೂವರು ಸದಸ್ಯರಿಂದ ಆಕ್ಷೇಪ

ಮೂವರು ಸದಸ್ಯರಿಂದ ಆಕ್ಷೇಪ

ಭಾರತವು ಸೂಚಿಸಿರುವ ನಿರ್ದಿಷ್ಟ ಅಂಶಗಳ ವಿನ್ಯಾಸಕ್ಕೆ ವಿಧಿಸುತ್ತಿರುವ ದರವು ತೀರಾ ದುಬಾರಿಯಾಯಿತು ಎಂದು ಮೋದಿ ಸರ್ಕಾರದ ಏಳು ಸದಸ್ಯರ ಸಮಾಲೋಚನಾ ಸಮಿತಿಯ ಮೂವರು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರು.

ಜಂಟಿ ಕಾರ್ಯದರ್ಶಿ ಮತ್ತು ಖರೀದಿ ವ್ಯವಸ್ಥಾಪಕ (ವಾಯು) ರಾಜೀವ್ ವರ್ಮಾ, ಆರ್ಥಿಕ ವ್ಯವಸ್ಥಾಪಕ (ವಾಯು) ಅಜಿತ್ ಸುಳೆ ಮತ್ತು ಸಲಹೆಗಾರ (ವೆಚ್ಚ) ಎಂಪಿ ಸಿಂಗ್ ಆಕ್ಷೇಪ ಎತ್ತಿದ್ದ ಮೂವರು.

ಆದರೆ, ಅದನ್ನು ಭಾರತೀಯ ವಾಯು ಪಡೆಯ ವಾಯು ಸಿಬ್ಬಂದಿ ಉಪ ಮುಖ್ಯಸ್ಥರ ನೇತೃತ್ವದ ತಂಡದ ಉಳಿದ ನಾಲ್ವರು ಸದಸ್ಯರು ತಿರಸ್ಕರಿಸಿದ್ದರು. ವಿಮಾನದ ವೆಚ್ಚ 1.4 ಬಿಲಿಯನ್ ಯುರೋದಿಂದ 1.3 ಬಿಲಿಯನ್ ಯುರೋಗೆ ಇಳಿಕೆಯಾಗಿದ್ದು, ಅದು ಒಂದು ಸಮಯದ ವೆಚ್ಚವಾಗಲಿದೆ ಎಂದು ಅದನ್ನು 4-3ರ ಬಹುಮತದೊಂದಿಗೆ ಒಪ್ಪಿಕೊಳ್ಳಲಾಗಿತ್ತು.

'ಎಚ್ ಎಎಲ್ ಗೆ 1 ಲಕ್ಷ ಕೋಟಿಯ ಆರ್ಡರ್ ಕೊಟ್ಟಿದ್ದಕ್ಕೆ ದಾಖಲೆ ತೋರಿಸಿ, ಇಲ್ಲ ರಾಜೀನಾಮೆ ನೀಡಿ''ಎಚ್ ಎಎಲ್ ಗೆ 1 ಲಕ್ಷ ಕೋಟಿಯ ಆರ್ಡರ್ ಕೊಟ್ಟಿದ್ದಕ್ಕೆ ದಾಖಲೆ ತೋರಿಸಿ, ಇಲ್ಲ ರಾಜೀನಾಮೆ ನೀಡಿ'

ಸಿಸಿಎಸ್‌ಗೆ ವರ್ಗಾಯಿಸಿದ ಡಿಎಸಿ

ಸಿಸಿಎಸ್‌ಗೆ ವರ್ಗಾಯಿಸಿದ ಡಿಎಸಿ

ಈ ಅಂಶಗಳನ್ನು ರಕ್ಷಣಾ ಸಚಿವರ ನೇತೃತ್ವದ ರಕ್ಷಣಾ ಖರೀದಿ ಸಮಿತಿ (ಡಿಎಸಿ) ಮುಂದೆ ಇರಿಸಲಾಯಿತು. ಅದಕ್ಕೆ ಬಹುಮತದ ಅಭಿಪ್ರಾಯದ ವಾದವನ್ನು ಒಪ್ಪಿಕೊಳ್ಳಲಾಯಿತು. ಬಳಿಕ ಅದು ಭದ್ರತೆಗೆ ಸಂಬಂಧಿಸಿದ ಸಂಪುಟ ಸಮಿತಿ (ಸಿಸಿಎಸ್) ಅನುಮೋದನೆಗೆ ಒಳಗಾಯಿತು.

ಐದು ಪ್ರತ್ಯೇಕ ಸನ್ನಿವೇಶಗಳಲ್ಲಿ ಒಪ್ಪಂದವನ್ನು ಡಿಎಸಿಗೆ ಮರು ಪರಿಶೀಲನೆಗೆ ಕಳುಹಿಸಲಾಗಿತ್ತು. ಸಮಾಲೋಚನಾ ತಂಡದಲ್ಲಿನ 4-3ರ ಒಡಕಿನ ನಡುವೆಯೇ 10 ವಿವಾದಾಸ್ಪದ ಸಂಗತಿಗಳನ್ನು ಬಗೆಹರಿಸಲಾಯಿತು.

ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಡಿಎಸಿಗೆ ಇತ್ತು. ಅದು ತನ್ನ ಹೊಣೆಗಾರಿಕೆಯನ್ನು ಪ್ರಧಾನಿ ನೇತೃತ್ವದ ಸಿಸಿಎಸ್ ಹೆಗಲಿಗೆ ವರ್ಗಾಯಿಸಿತು. ಅಲ್ಲಿ ಪ್ರಮುಖ ನಿರ್ಧಾರಗಳು ಕೂಡಲೇ ಅನುಮೋದನೆಗೊಂಡವು ಎಂದು ರಫೇಲ್ ಒಪ್ಪಂದದ ಬಗ್ಗೆ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ವರದಿ ಆಧರಿಸಿ ದಿ ಹಿಂದೂ ವರದಿ ಮಾಡಿದೆ.

ರಫೇಲ್ ಪ್ರಶ್ನೆಗಳಿಗೆ ಉತ್ತರಿಸಿದ ರಕ್ಷಣಾ ಸಚಿವರಿಗೆ ರಾಹುಲ್ ಮರು ಪ್ರಶ್ನೆರಫೇಲ್ ಪ್ರಶ್ನೆಗಳಿಗೆ ಉತ್ತರಿಸಿದ ರಕ್ಷಣಾ ಸಚಿವರಿಗೆ ರಾಹುಲ್ ಮರು ಪ್ರಶ್ನೆ

ಯುರೋಫೈಟರ್ ಟೈಫೂನ್ ಹೆಸರೂ ಇತ್ತು

ಯುರೋಫೈಟರ್ ಟೈಫೂನ್ ಹೆಸರೂ ಇತ್ತು

ಡಸಾಲ್ಟ್‌ಗೆ ಪ್ರತಿಯಾಗಿ ವ್ಯವಹಾರ ಕುದುರಿಸಲು ಅದರ ಪ್ರತಿಸ್ಪರ್ಧಿ ಸಂಸ್ಥೆ ಯೂರೋಫೈಟರ್ ಟೈಫೂನ್ಸ್ ಅನ್ನು ಸಮಿತಿಯ ಮೂವರು ಸೂಚಿಸಿದ್ದರು. ಆದರೆ, ಈಗಾಗಲೇ ಬಿಡ್ಡಿಂಗ್ ಮುಕ್ತಾಯವಾಗಿರುವುದರಿಂದ ಸಿವಿಸಿ ಮಾರ್ಗದರ್ಶಿಯ ಉಲ್ಲಂಘನೆ ಹಾಗೂ ರಕ್ಷಣಾ ಖರೀದಿ ಪ್ರಕ್ರಿಯೆಯ ನಿಯಮಾವಳಿಗಳಿಗೆ ವಿರುದ್ಧವಾಗುವುದರಿಂದ ಮತ್ತೊಂದು ಸಂಸ್ಥೆಯನ್ನು ಪರಿಗಣಿಸುವುದು ಅಪೇಕ್ಷಣೀಯವಲ್ಲ ಎಂದು ನಾಲ್ವರು ಸದಸ್ಯರು ಆ ಪ್ರಸ್ತಾವವನ್ನು ತಳ್ಳಿಹಾಕಿದ್ದರು.

ಆಫರ್ ನೀಡಿದ್ದ ಯುರೋ ಫೈಟರ್

ಆಫರ್ ನೀಡಿದ್ದ ಯುರೋ ಫೈಟರ್

ತನ್ನ ಈ ಹಿಂದಿನ ದರಕ್ಕಿಂತ ಸುಧಾರಿತ ವೈಮಾನಿಕ ಸಾಮರ್ಥ್ಯಗಳೊಂದಿಗೆ ಯುರೋ ಫೈಟರ್ ಶೇ 20ರಷ್ಟು ರಿಯಾಯಿತಿಯ ಆಫರ್ ನೀಡಿತ್ತು. ಜೊತೆಗೆ ಸರ್ಕಾರಕ್ಕೆ ಅನುಕೂಲಕರವಾದ ಪಾವತಿ ನೀತಿಗಳು, ಉತ್ಪಾದನಾ ಕ್ರಮ ಸಿದ್ಧಪಡಿಸುವುದು ಮತ್ತು ಭಾರತದಲ್ಲಿ ಯುರೋಫೈಟರ್ ಟೈಫೂನ್ ಕೈಗಾರಿಕಾ ಪಾರ್ಕ್ ನಿರ್ಮಿಸಿ ಪರಿಣಾಮಕಾರಿ ತರಬೇತಿ ಹಾಗೂ ಅದಕ್ಕೆ ಬೆಂಬಲದಾಯಕ ಚಟುವಟಿಕೆಗಳನ್ನು ನಡೆಸುವುದಾಗಿ ಭರವಸೆ ನೀಡಿತ್ತು. ಅಲ್ಲದೆ, ಜರ್ಮನಿ, ಇಂಗ್ಲೆಂಡ್, ಇಟಲಿ ಮತ್ತು ಸ್ಪೇನ್‌ಗೆ ನೀಡಬೇಕಾದ ಜೆಟ್‌ಗಳನ್ನು ಪರಿವರ್ತಿಸಿ ಭಾರತಕ್ಕೆ ತ್ವರಿತವಾಗಿ ನೀಡುವ ಪ್ರಸ್ತಾವವನ್ನೂ ಮುಂದಿಟ್ಟಿತ್ತು.

ಐಎಎಫ್‌ನ ಅಗತ್ಯಗಳಿಗೆ ಸಂಪೂರ್ಣವಾಗಿ ತಾಂತ್ರಿಕ ಹೊಂದಾಣಿಕೆಯಿದ್ದರೂ 2011ರಲ್ಲಿ ದರದ ಕಾರಣವೊಂದಕ್ಕೇ ಒಪ್ಪಂದದಿಂದ ಹೊರಹೋಗಬೇಕಾಯಿತು.

189 ಜೆಟ್‌ಗಳ ಖರೀದಿ ಸಾಧ್ಯವಿತ್ತು

189 ಜೆಟ್‌ಗಳ ಖರೀದಿ ಸಾಧ್ಯವಿತ್ತು

ರಕ್ಷಣಾ ಒಪ್ಪಂದಗಳ ಸಾಮಾನ್ಯ ವಾಡಿಕೆಯಂತೆ ಖರೀದಿದಾರರು ಮೂಲ ಒಪ್ಪಂದದ ಸಂಖ್ಯೆಗಿಂತ ಶೇ 50ರಷ್ಟು ಹೆಚ್ಚು ಸಾಧನಗಳನ್ನು ಅದೇ ನಿಯಮಗಳಲ್ಲಿ ಖರೀದಿಸಲು ಅವಕಾಶವಿದೆ. ಯುಪಿಎ ಒಪ್ಪಂದದಲ್ಲಿ 126 ಜೆಟ್ ವಿಮಾನಗಳ ಜೊತೆಗೆ ಹೆಚ್ಚುವರಿಯಾಗಿ ಇನ್ನೂ 63 ಜೆಟ್‌ಗಳನ್ನು ಅದೇ ವಿನ್ಯಾಸ ಹಾಗೂ ಅಭಿವೃದ್ಧಿ ದರದಲ್ಲಿ ಖರೀದಿ ಮಾಡಲು ಅವಕಾಶವಿತ್ತು. ಅಂದರೆ ಭಾರತ ಒಟ್ಟು 189 ಜೆಟ್‌ಗಳನ್ನು ಖರೀದಿ ಮಾಡಬಹುದಾಗಿತ್ತು. ಈ ನಿಯಮವನ್ನು 2016ರಲ್ಲಿ ಒಪ್ಪಂದದಿಂದ ತೆಗೆದುಹಾಕಲಾಗಿತ್ತು.

ರಫೇಲ್: ಎಷ್ಟೆಷ್ಟಾಗುತ್ತಿತ್ತು ವೆಚ್ಚ?

ರಫೇಲ್: ಎಷ್ಟೆಷ್ಟಾಗುತ್ತಿತ್ತು ವೆಚ್ಚ?

2011ರಲ್ಲಿ ಒಪ್ಪಂದ ನಡೆದಾಗ ಒಂದು ಸಾಮಾನ್ಯ ವಿಮಾನದ ಬೆಲೆ 100.85 ಮಿಲಿಯನ್ ಯುರೋ (817.51 ಕೋಟಿ ಇತ್ತು. 2016ರಲ್ಲಿ ಒಪ್ಪಂದ ಮಾಡಿಕೊಂಡಾಗ ಶೇ 9ರಷ್ಟು ಕಡಿಮೆ ಅಂದರೆ 91.76 ಮಿಲಿಯನ್ ಯುರೋಗೆ (743.75 ಕೋಟಿ ರೂ.) ವ್ಯವಹಾರ ಮಾಡಿಕೊಳ್ಳಲಾಗಿತ್ತು.

ಎರಡೂ ಒಪ್ಪಂದಗಳು ಭಾರತದ ನಿರ್ದಿಷ್ಟ ಅಗತ್ಯಗಳ 13 ಅಂಶಗಳನ್ನು ಒಳಗೊಂಡಿದ್ದು, ವಿಮಾನಗಳ ಸಂಖ್ಯೆ ಬದಲಾದರೂ ಇದರಲ್ಲಿ ವ್ಯತ್ಯಾಸಗಳಾಗಲಿಲ್ಲ. ಇದಕ್ಕೆ ವೆಚ್ಚವಾಗಿ ಡಸಾಲ್ಟ್ 1.4 ಬಿಲಿಯನ್ ಯುರೋ ಬೇಡಿಕೆ ಮುಂದಿಟ್ಟಿತು. ಚರ್ಚೆಯ ಬಳಿಕ 1.3 ಬಿಲಿಯನ್ ಯುರೋಗೆ ಅಂತಿಮಗೊಂಡಿತು.

2011ರಲ್ಲಿನ 126 ಯುದ್ಧ ವಿಮಾನಗಳ ಒಪ್ಪಂದದಲ್ಲಿ ಈ ಶುಲ್ಕ ಒಂದು ವಿಮಾನಕ್ಕೆ 11.11 ಮಿಲಿಯನ್ ಯುರೋ (ಎಲ್ಲ ವಿಮಾನಗಳಿಗೂ ಸೇರಿ) 1.4 ಬಿಲಿಯನ್ ಯುರೋ ತಗುಲುತ್ತಿತ್ತು. ಆದರೆ, 2016ರಲ್ಲಿ ಕೇವಲ 36 ವಿಮಾನಗಳಿಗೆ ಇದರ ವೆಚ್ಚ 25.8 ಮಿಲಿಯನ್ ಯುರೋದಷ್ಟು ಹೆಚ್ಚು ಅಂದರೆ, ಒಂದು ವಿಮಾನಕ್ಕೆ 36.11 ಮಿಲಿಯನ್ ಯುರೋದಷ್ಟಾಯಿತು.

ಈ ಕಾರಣದಿಂದ 2011ರ ಒಪ್ಪಂದಲ್ಲಿ 126 ಯುದ್ಧ ವಿಮಾನಗಳಿಗೆ ಒಟ್ಟು 111.96 ಮಿಲಿಯನ್ ಯುರೋ ತಗುಲುತ್ತಿದ್ದರೆ, 2016ರ 36 ವಿಮಾನಗಳ ಒಪ್ಪಂದಕ್ಕೆ 127.86 ಮಿಲಿಯನ್ ಯುರೋ ಅಂದರೆ ಶೇ 14.2ರಷ್ಟು ಹೆಚ್ಚು ವೆಚ್ಚ ತಗುಲುತ್ತದೆ.

English summary
NDA government decision to buy 36 rafale aircraft instead of the originally proposed 126 during UPA pushed up the total cost of the acquisition per craft about 14%, a report in The Hindu said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X