ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ಗಾಂಧಿ ಭಾಷಣವೂ ಮತ್ತು ರಫೇಲ್ ಫೈಟರ್ ಜೆಟ್ ಮೌಲ್ಯವೂ!

|
Google Oneindia Kannada News

ನವದೆಹಲಿ, ಡಿಸೆಂಬರ್ 14 : ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ ಗಢ ಮುಖ್ಯಮಂತ್ರಿ ಆಯ್ಕೆ ಕುರಿತಂತೆ ತಲೆಬಿಸಿ ಮಾಡಿಕೊಂಡಿದ್ದ ರಾಹುಲ್ ಗಾಂಧಿ ಅವರಿಗೆ ರಫೇಲ್ ಡೀಲ್ ಕುರಿತಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಮತ್ತಷ್ಟು ಕಂಗೆಡಿಸಿದೆ.

ರಾಹುಲ್ ಗಾಂಧಿ ಅವರು ರಫೇಲ್ ಡೀಲ್ ಬಗ್ಗೆ ಮತ್ತು ನರೇಂದ್ರ ಮೋದಿಯವರ ಬಗ್ಗೆ ಎಷ್ಟು ಆಕ್ರೋಶ ತುಂಬಿಕೊಂಡಿದ್ದರೆಂದರೆ, ಮಿಜೋರಾಂನ ಗುಡ್ಡಗಾಡು ಪ್ರದೇಶಕ್ಕೇ ಹೋಗಲಿ, ಮಧ್ಯ ಪ್ರದೇಶದಲ್ಲಿರುವ ಹಳ್ಳಿಗೇ ಹೋಗಲಿ ಅಲ್ಲಿಯೂ ಕೂಡ ರಫೇಲ್ ಡೀಲ್ ಅವ್ಯವಹಾರದ ಬಗ್ಗೆ ಏರಿದ ಸ್ವರದಲ್ಲಿ ಭಾಷಣ ನೀಡುತ್ತಿದ್ದರು.

ರಫೇಲ್ ಡೀಲ್ : ಚೌಕಿದಾರ್ ಚೋರ್ ಎಂದಿದ್ದ ರಾಹುಲ್ ಗೆ ಭಾರೀ ಮುಖಭಂಗರಫೇಲ್ ಡೀಲ್ : ಚೌಕಿದಾರ್ ಚೋರ್ ಎಂದಿದ್ದ ರಾಹುಲ್ ಗೆ ಭಾರೀ ಮುಖಭಂಗ

ಫ್ರಾನ್ಸ್ ಮತ್ತು ಭಾರತ ಸರಕಾರದ ನಡುವೆ 36 ರಫೇಲ್ ಫೈಟರ್ ಜೆಟ್ ಖರೀದಿಯ ಅವ್ಯವಹಾರವನ್ನು ತನಿಖೆಗೆ ಒಳಪಡಿಸಬೇಕೆಂದು ಕೋರಲಾಗಿದ್ದ ಎಲ್ಲ ಅರ್ಜಿಗಳನ್ನು ಸರ್ವೋಚ್ಚ ನ್ಯಾಯಾಲಯ ತಿರಸ್ಕರಿಸಿದ್ದರಿಂದ, ಲೋಕಸಭೆಗೂ ಮುನ್ನ ಕಾಂಗ್ರೆಸ್ಸಿಗೆ ಮತ್ತು ರಾಹುಲ್ ಗಾಂಧಿಯವರಿಗೆ ಮುಟ್ಟಿ ನೋಡಿಕೊಳ್ಳುವಂಥ ಹೊಡೆತ ಬಿದ್ದಂತಾಗಿದೆ.

ರಾಹುಲ್ ಅವರು ತಮ್ಮ ಪ್ರತಿ ಭಾಷಣದಲ್ಲಿ ರಫೇಲ್ ಡೀಲ್ ಬಗ್ಗೆ ಪ್ರಸ್ತಾಪಿಸದೆ, ಪ್ರಧಾನಿ ನರೇಂದ್ರ ಮೋದಿ ಅವರನ್ನು 'ಚೌಕಿದಾರ್ ಚೋರ್ ಹೈ' ಎಂದು ಬಣ್ಣಿಸದೆ ಮುಗಿಸುತ್ತಲೇ ಇರಲಿಲ್ಲ. ಅದು ಎಷ್ಟು ಕ್ಲೀಷೆಯಾಗಿತ್ತೆಂದರೆ, ಇವರಿಗೆ ಮಾತಾಡಲು ಬೇರೆ ವಿಷಯವೇ ಇಲ್ಲವೇ ಎನ್ನುವಂತಾಗಿತ್ತು.

ರಫೇಲ್ ಮೌಲ್ಯ ನಿರ್ಧಾರ ನಮ್ಮ ಕೆಲಸವಲ್ಲ: ಕೋರ್ಟ್ ಹೇಳಿದ್ದೇನು? ರಫೇಲ್ ಮೌಲ್ಯ ನಿರ್ಧಾರ ನಮ್ಮ ಕೆಲಸವಲ್ಲ: ಕೋರ್ಟ್ ಹೇಳಿದ್ದೇನು?

ಎಲ್ಲಕ್ಕಿಂತ ಮುಖ್ಯವಾಗಿ ಪ್ರತಿಯೊಂದು ಭಾಷಣದಲ್ಲೂ ರಫೇಲ್ ಡೀಲ್ ಖರೀದಿಯ ಮೌಲ್ಯದ ಬಗ್ಗೆ ಒಂದೊಂದು ಬಾರಿ ಒಂದೊಂದು ಮೌಲ್ಯವನ್ನು ಪ್ರಸ್ತಾಪಿಸುತ್ತಿದುದು, ಅವರ ಆರೋಪದಲ್ಲಿನ ಗಾಂಭೀರ್ಯವನ್ನು ಕಡಿಮೆಗೊಳಿಸುತ್ತಿತ್ತು. ಅಸಲಿಗೆ, ಒಪ್ಪಂದದಂತೆ ಯುದ್ಧ ವಿಮಾನದ ಬೆಲೆಯನ್ನು ಬಹಿರಂಗಗೊಳಿಸುವಂತಿಲ್ಲ. ಆದರೂ, ಒಂದೊಂದು ಕಡೆಯಲ್ಲಿ ಒಂದೊಂದು ಮೌಲ್ಯವನ್ನು ರಾಹುಲ್ ಪ್ರಸ್ತಾಪಿಸಿದ್ದರು.

ಮೋದಿ = 1670 ಕೋಟಿ, ಸಿಂಗ್ = 570 ಕೋಟಿ

ಮೋದಿ = 1670 ಕೋಟಿ, ಸಿಂಗ್ = 570 ಕೋಟಿ

2018ರ ಮಾರ್ಚ್ 16ರಂದು ಮಾಡಿದ್ದ ಸರಣಿ ಟ್ವೀಟ್ ನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು, ದೇಶದ ರಕ್ಷಾ ಮಂತ್ರಿ (ನಿರ್ಮಲಾ ಸೀತಾರಾಮನ್) ಸುಳ್ಳು ಹೇಳಿದ್ದಾರೆಂದು ಹೇಳಿರುವ ಡಸ್ಸಾಲ್ಟ್ ಕಂಪನಿ, ಒಂದೊಂದು ವಿಮಾನದ ಬೆಲೆ ಹೀಗೆ ತಿಳಿಸಿದೆ : ಕತಾರ್ = 1319 ಕೋಟಿ, ಮೋದಿ = 1670 ಕೋಟಿ, ಮನಮೋಹನ ಸಿಂಗ್ = 570 ಕೋಟಿ.

ಮೋದಿ ವಿರುದ್ಧ ಆಕ್ರೋಶಭರಿತ ಭಾಷಣ

ಮೋದಿ ವಿರುದ್ಧ ಆಕ್ರೋಶಭರಿತ ಭಾಷಣ

ಜನ್ ಆಕ್ರೋಶ ರ‍್ಯಾಲಿಯಲ್ಲಿ 2018ರ ಏಪ್ರಿಲ್ 29ರಂದು ನವದೆಹಲಿಯಲ್ಲಿ ನರೇಂದ್ರ ಮೋದಿ ಸರಕಾರದ ವಿರುದ್ಧ ಆಕ್ರೋಶ ಭರಿತ ಭಾಷಣ ಬಿಗಿದಿದ್ದ ರಾಹುಲ್ ಗಾಂಧಿ ಅವರು, ಮತ್ತೆ ರಫೇಲ್ ಹಗರಣದ ಬಗ್ಗೆ ಪ್ರಸ್ತಾಪಿಸಿ, ಡಾ. ಮನಮೋಹನ ಸಿಂಗ್ ಅವರು ಭಾರತದ ಪ್ರಧಾನಿಯಾಗಿದ್ದಾಗ ಪ್ರತಿ ಜೆಟ್ ವಿಮಾನದ ಬೆಲೆ 700 ಕೋಟಿ ರುಪಾಯಿ ಇತ್ತು ಎಂದಿದ್ದರು.

ಕೇಂದ್ರ ಸರ್ಕಾರದ ಪರ ರಫೇಲ್ ತೀರ್ಪು: ಗಣ್ಯರೇನಂತಾರೆ? ಕೇಂದ್ರ ಸರ್ಕಾರದ ಪರ ರಫೇಲ್ ತೀರ್ಪು: ಗಣ್ಯರೇನಂತಾರೆ?

ಕಣ್ಣು ಮಿಟುಕಿಸುವ ಮುನ್ನ

ಕಣ್ಣು ಮಿಟುಕಿಸುವ ಮುನ್ನ

2018ರ ಜೂನ್ 20ರಂದು, ಸಂಸತ್ತಿನಲ್ಲಿ ತೆಲುಗು ದೇಶಂ ಪಕ್ಷ ನರೇಂದ್ರ ಮೋದಿ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದಾಗ, ಕಣ್ಣು ಮಿಟುಕಿಸುವ ಮುನ್ನ, ಪ್ರಧಾನಿಯನ್ನು ನಾಟಕೀಯವಾಗಿ ತಬ್ಬಿಕೊಳ್ಳುವ ಮುನ್ನ, 45 ನಿಮಿಷ ಪ್ರಖರ ಭಾಷಣ ಮಾಡಿದ್ದ ರಾಹುಲ್, ಯುಪಿಎ ಸರಕಾರವಿದ್ದಾಗ ರಫೇಲ್ ಯುದ್ಧ ವಿಮಾನದ ಮೌಲ್ಯ 520 ಕೋಟಿ ರುಪಾಯಿ ಇತ್ತು ಎಂದಿದ್ದರು.

ಪ್ರತಿ ಫೈಟರ್ ಜೆಟ್ ಬೆಲೆ 540 ಕೋಟಿ

ಪ್ರತಿ ಫೈಟರ್ ಜೆಟ್ ಬೆಲೆ 540 ಕೋಟಿ

2018ರ ಆಗಸ್ಟ್ 10ರಂದು ಛತ್ತೀಸ್ ಗಢದ ರಾಯ್ಪುರದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತ, ಯುಪಿಎ ಸರಕಾರ ಫ್ರಾನ್ಸ್ ಸರಕಾರದೊಂದಿಗೆ ರಫೇಲ್ ಯುದ್ಧ ವಿಮಾನದ ಒಪ್ಪಂದ ಮಾಡಿಕೊಂಡಿದ್ದಾಗ ಪ್ರತಿ ಫೈಟರ್ ಜೆಟ್ ಬೆಲೆ 540 ಕೋಟಿ ರುಪಾಯಿ ಇತ್ತು ಎಂದಿದ್ದರು.

ಪ್ರತಿ ಜೆಟ್ ವಿಮಾನಕ್ಕೆ 520 ಕೋಟಿ

ಪ್ರತಿ ಜೆಟ್ ವಿಮಾನಕ್ಕೆ 520 ಕೋಟಿ

ಅದರ ಮರುದಿನವೇ, ಅಂದರೆ 2018ರ ಆಗಸ್ಟ್ 11ರಂದು ರಾಜಸ್ಥಾನದ ಜೈಪುರದಲ್ಲಿ ಪಕ್ಷದ ಕಾರ್ಯಕರ್ತನ್ನು ಉದ್ದೇಶಿಸಿ ಆವೇಶದಿಂದ ಭಾಷಣ ಮಾಡಿದ್ದ ರಾಹುಲ್ ಗಾಂಧಿ ಅವರು, ಡಸ್ಸಾಲ್ಟ್ ಕಂಪನಿಯ ಜೊತೆ ಯುಪಿಎ ಸರಕಾರ ಪ್ರತಿ ಜೆಟ್ ವಿಮಾನದ ಮೌಲ್ಯವನ್ನು 520 ಕೋಟಿ ರುಪಾಯಿಗೆ ನಿಗದಿ ಪಡಿಸಿ ಒಪ್ಪಂದ ಮಾಡಿಕೊಂಡಿತ್ತು. ನಂತರ ಅದೇ ಭಾಷಣದಲ್ಲಿ ಯುಪಿಎ ಸರಕಾರ ಪ್ರತಿ ಜೆಟ್ ವಿಮಾನಕ್ಕೆ 540 ಕೋಟಿ ರುಪಾಯಿ ನಿಗದಿ ಪಡಿಸಿತ್ತು ಎಂದು ತಿದ್ದಿಕೊಂಡಿದ್ದರು.

'ನಾನು ಸುಳ್ಳು ಹೇಳೊಲ್ಲ': ರಾಹುಲ್ ಗಾಂಧಿ ಮೇಲೆ ರಫೇಲ್ ಸಿಇಒ ಸಿಟ್ಟು'ನಾನು ಸುಳ್ಳು ಹೇಳೊಲ್ಲ': ರಾಹುಲ್ ಗಾಂಧಿ ಮೇಲೆ ರಫೇಲ್ ಸಿಇಒ ಸಿಟ್ಟು

526 ಕೋಟಿ ರುಪಾಯಿಂದ 1600 ಕೋಟಿ

526 ಕೋಟಿ ರುಪಾಯಿಂದ 1600 ಕೋಟಿ

ನಂತರ ಎರಡೇ ಎರಡು ದಿನಗಳ ನಂತರ, 2018ರ ಆಗಸ್ಟ್ 13ರಂದು ಹೈದರಾಬಾದ್ ನಲ್ಲಿ ನರೇಂದ್ರ ಮೋದಿ ಮತ್ತು ಬಿಜೆಪಿ ಸರಕಾರವನ್ನು ವಾಚಾಮಗೋಚರವಾಗಿ ಟೀಕಿಸಿದ್ದ ರಾಹುಲ್ ಗಾಂಧಿ ಅವರು, ನಾನು ಸಂಸತ್ತಿನಲ್ಲಿ ಭಾಷಣ ಮಾಡುತ್ತಿದ್ದಾಗ, ದೇಶದ ಚೌಕಿದಾರ(ನರೇಂದ್ರ ಮೋದಿ) ನನ್ನು ಒಂದು ಪ್ರಶ್ನೆ ಕೇಳಿದ್ದೆ. ಅದೇನೆಂದರೆ, ರಫೇಲ್ ಜೆಟ್ ವಿಮಾನದ ಬೆಲೆ 526 ಕೋಟಿ ರುಪಾಯಿಂದ 1600 ಕೋಟಿ ರುಪಾಯಿಗೆ ಹೇಗೆ ಹೋಯಿತು ಎಂದು. ಅವರ ಬಳಿ ಉತ್ತರವಿರಲಿಲ್ಲ. ಅವರು ನನ್ನತ್ತ ನೋಡುವುದೂ ಇಲ್ಲ ಎಂದಿದ್ದರು.

English summary
Rafale deal and inconsitancy in pricing by Rahul Gandhi. The Congress president had made it a habit to mention about Rafale deal and slam Narendra Modi whenever he got the chance. But, the pricing was different every time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X