ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಿಂಗ್ ಖಾನ್ ಶಾರುಖ್ ಮೇಲೆ ಎಫ್ ಐ ಆರ್

ರಾಜಸ್ಥಾನದ ಕೋಟಾ ರೈಲು ನಿಲ್ದಾಣದಲ್ಲಿ ರಯೀಸ್ ಚಿತ್ರದ ಪ್ರಚಾರದ ವೇಳೆ ಗಲಭೆ ಉಂಟು ಮಾಡಿಕೊಂಡಿದ ಆರೋಪದ ಮೇಲೆ ಬಾಲಿವುಡ್ ನಟ ಶಾರುಖ್ ಖಾನ್ ಮೇಲೆ ಪ್ರಕರಣ ದಾಖಲಿಸಿಕೊಂಡು, ಎಫ್ ಐಆರ್ ದಾಖಲಿಸಲಾಗಿದೆ.

By Mahesh
|
Google Oneindia Kannada News

ನವದೆಹಲಿ, ಫೆಬ್ರವರಿ 15: ರಾಜಸ್ಥಾನದ ಕೋಟಾ ರೈಲು ನಿಲ್ದಾಣದಲ್ಲಿ ರಯೀಸ್ ಚಿತ್ರದ ಪ್ರಚಾರದ ವೇಳೆ ಗಲಭೆ ಉಂಟು ಮಾಡಿಕೊಂಡಿದ ಆರೋಪದ ಮೇಲೆ ಬಾಲಿವುಡ್ ನಟ ಶಾರುಖ್ ಖಾನ್ ಮೇಲೆ ಪ್ರಕರಣ ದಾಖಲಿಸಿಕೊಂಡು, ಎಫ್ ಐಆರ್ ದಾಖಲಿಸಲಾಗಿದೆ.

ಜನವರಿ 23ರಂದು ಖಾನ್, ರಯೀಸ್ ಚಿತ್ರದ ಪ್ರಚಾರಕ್ಕಾಗಿ ಕೋಟಾ ರೈಲು ನಿಲ್ದಾಣಕ್ಕೆ ಆಗಮಿಸಿದ್ದ ಶಾರುಖ್ ಹಾಗೂ ಅವರ ಬೆಂಬಲಿಗರು ದಾಂಧಲೆ ಎಬ್ಬಿಸಿದ್ದರು, ಸಾರ್ವಜನಿಕ ಆಸ್ತಿ ಪಾಸ್ತಿಗೆ ನಷ್ಟ ಉಂಟು ಮಾಡಿದರು ಎಂದು ವಿಕ್ರಂ ಸಿಂಗ್ ಎಂಬುವವರು ದೂರು ನೀಡಿದ್ದರು.ರೈಲ್ವೆ ಕೋರ್ಟಿನನ ನಿರ್ದೇಶನ ಅನ್ವಯ ಪ್ರಕರಣ ದಾಖಲಿಸಿಕೊಂಡು, ಎಫ್ ಐ ಆರ್ ಹಾಕಲಾಗಿದೆ ಎಂದು ಸಿಆರ್‌ಪಿ ಪೊಲೀಸ್ ಠಾಣೆಯ ಮೂಲಗಳು ಹೇಳಿವೆ.[ಅಭಿಮಾನಿಯ ಸಾವಿಗೆ ಕಂಬನಿ ಮಿಡಿದ ಕಿಂಗ್ ಖಾನ್ ಶಾರುಖ್]

Raees promotion controversy: Kota police lodge FIR against Shah Rukh Khan

ಭಾರತೀಯ ದಂಡಸಂಹಿತೆಯ ಸೆಕ್ಷನ್ 427 (ಕುಚೋದ್ಯ, ಆಸ್ತಿಗೆ ಹಾನಿ), 120 ಬಿ (ಅಪರಾಧ ಪಿತೂರಿ), 147 (ದಂಗೆ), 149 (ಕಾನೂನು ಬಾಹಿರವಾಗಿ ಗುಂಪು ಸೇರುವುದು) ಹಾಗೂ 160 (ಗೊಂದಲ ಸೃಷ್ಟಿ) ಅನ್ವಯ ದೂರು ನೀಡಿದ್ದರು. ಆಗಸ್ಟ್ ಕ್ರಾಂತಿ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ ಗೇಟಿನಲ್ಲಿ ನಿಲ್ಲುವ ಮೂಲಕ ಖಾನ್, ಕಾನೂನು ಉಲ್ಲಂಘಿಸಿದ್ದು, ಸೇರಿದಂತೆ ರೈಲ್ವೆ ಕಾಯ್ದೆಯ ಸೆಕ್ಷನ್ 145 ಮತ್ತು 146ರ ಅನ್ವಯವೂ ಖಾನ್ ವಿರುದ್ಧ ಪ್ರಕರಣ ದಾಖಲಾಗಿದೆ.

English summary
The Government Railway Police (GRP) in Kota, Rajasthan, lodged an FIR against King Khan Shah Rukh and others under several charges, including rioting, while he was in Kota for the promotion of his film Raees on January 24.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X