ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ರೋ ಅಧ್ಯಕ್ಷ ಸ್ಥಾನದಿಂದ ರಾಧಾಕೃಷ್ಣನ್ ನಿವೃತ್ತಿ

|
Google Oneindia Kannada News

ಬೆಂಗಳೂರು, ಜ. 1: ಮಂಗಳಯಾನದಂಥ ಯಶಸ್ಸನ್ನು ಭಾರತಕ್ಕೆ ತಂದುಕೊಟ್ಟ ಡಾ.ರಾಧಾಕೃಷ್ಣನ್ ಇಸ್ರೋ ಅಧ್ಯಕ್ಷ ಸ್ಥಾನದಿಂದ ನಿವೃತ್ತರಾಗಿದ್ದಾರೆ. ಗುಜರಾತ್ ಮೂಲದ ಡಾ. ಶೈಲೇಶ್ ನಾಯಕ್ ಹಂಗಾಮಿ ಅಧ್ಯಕ್ಷ ಸ್ಥಾನದ ಹೊಣೆ ಹೊತ್ತುಕೊಂಡಿದ್ದಾರೆ.

ಇಸ್ರೋ ತನ್ನ ಮಾಜಿ ಅಧ್ಯಕ್ಷರಿಗೆ ಸಾಮಾಜಿಕ ಜಾಲತಾಣದ ಮೂಲಕ ವಿದಾಯ ತಿಳಿಸಿದೆ. ಅವರೊಬ್ಬ ಸಮರ್ಥ, ದಕ್ಷ ಆಡಳಿತಗಾರ ಎಂದು ಹೆಮ್ಮೆಯಿಂದ ಬರೆದುಕೊಂಡಿದೆ.[ಮಂಗಳನಿಂದ ಬಂದ ವಿಡಿಯೋ ನೋಡಿದ್ದೀರಾ?]

isro

2014 ಆರಂಭದಲ್ಲೇ ರಾಧಾಕೃಷ್ಣನ್ ಅಧಿಕಾರ ಮುಕ್ತಾಯವಾಗಬೇಕಿತ್ತು. ಆದರೆ ಮಂಗಳಯಾನ ಮತ್ತಿತರ ಮಹತ್ವದ ಯೋಜನೆಗಳು ಜಾರಿಯಲ್ಲಿದ್ದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅದನ್ನು ಡಿಸೆಂಬರ್ 31 ರವರೆಗೆ ವಿಸ್ತರಿಸಿತ್ತು. ಹೊಸ ವರ್ಷಕ್ಕೆ ಇಸ್ರೋಗೆ ಹೊಸ ನಾವಿಕ ಸಿಕ್ಕಂತಾಗಿದ್ದು 2009ರಲ್ಲಿ ಅಧಿಕಾರ ವಹಿಸಿಕೊಂಡಿದ್ದ ರಾಧಾಕೃಷ್ಣನ್ ತಮ್ಮ ಹುದ್ದೆಯಿಂದ ನಿರ್ಗಮಿಸಿದ್ದಾರೆ.

ಕೆ. ರಾಧಾಕೃಷ್ಣನ್ ಯಾರು?
1949 ರಲ್ಲಿ ಕೇರಳದಲ್ಲಿ ಜನಿಸಿದ ರಾಧಾಕೃಷ್ಣನ್ ಬೆಂಗಳೂರಿನಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಿದರು. ಬಾಹ್ಯಾಕಾಶ ಸಂಶೋಧನೆಯಲ್ಲಿ ವಿಶೇಷ ಸಾಧನೆ ಮಾಡಿದ ಅವರಿಗೆ ಇಸ್ರೋ ಅಧ್ಯಕ್ಷ ಪದವವಿಯೂ ದೊರೆಯಿತು. ತಮ್ಮ ಅವಧಿಯಲ್ಲಿ ಮಂಗಳಯಾನದಂಥ ಮಹತ್ತರ ಕಾರ್ಯವನ್ನು ಸಾಧಿಸಿದ ಅವರಿಗೆ 2014ರಲ್ಲಿ ಪದ್ಮಭೂಷಣ ಪ್ರಶಸ್ತಿಯೂ ಸಂದಿದೆ.

English summary
Indian Space Research Organisation (ISRO) Chairman K. Radhakrishnan retired on Wednesday. Shailesh Nayak, who is Secretary, Union Earth Sciences Ministry, will hold additional and interim charge as Chairman for a month or until a regular chief is named, said an order by the Secretary, Appointments' Committee of the Union Cabinet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X