ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಡಾಖಿನಲ್ಲಿ ಹೊಸ ಶಕೆ ಆರಂಭ: ಮೊದಲ ಲೆ.ಗವರ್ನರ್ ಆಗಿ ಮಾಥುರ್ ಪ್ರಮಾಣವಚನ

|
Google Oneindia Kannada News

ಲಡಾಖ್, ಅಕ್ಟೋಬರ್ 31: ಹೊಸ ಕೇಂದ್ರಾಡಳಿತ ಪ್ರದೇಶವಾಗಿ ಅಕ್ಟೋಬರ್ 30 ರ ಮಧ್ಯರಾತ್ರಿ ಉದಯವಾದ ಲಡಾಖ್ ನ ಲೆಫ್ಟಿನೆಂಟ್ ಗವರ್ನರ್ ಆಗಿ ರಾಧಾ ಕೃಷ್ಣ ಮಾಥುರ್ ಅವರು ಗುರುವಾರ ಪ್ರಮಾಣವಚನ ಸ್ವೀಕರಿಸಿದರು.

1977 ರ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿದ್ದ ಮಾಥುರ್, 2018 ರಲ್ಲಿ ಭಾರತದ ಮುಖ್ಯ ಮಾಹಿತಿ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು.

ಲಡಾಖ್ ನ ಲೆಫ್ಟಿನೆಂಟ್ ಗವರ್ನರ್ ಆಗುವುದಕ್ಕೂ ಮುನ್ನ 65 ವರ್ಷ ವಯಸ್ಸಿನ ಮಾಥುರ್ ಭದ್ರತಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

Radha Krishna Mathur Takes Oath As First Lieutenant Governor Of Ladakh

ಐಐಟಿ ಕಾನ್ಪುರದಲ್ಲಿ ಓದಿದ್ದ ಮಾಥುರ್, ಸ್ಲೊವೆನಿಯಅದ ಇಂಟರ್ನ್ಯಾಶ್ನಲ್ ಸೆಂಟರ್ ಫಾರ್ ಪ್ರಮೋಶನ್ ಆಫ್ ಎಂಟರ್ ಪ್ರೈಸಸ್ (ಐಸಿಪಿಇ) ನಲ್ಲಿ ಎಂಬಿಎ ಪದವಿ ಪಡೆದಿದ್ದರು.

ತ್ರಿಪುರದ ಮುಖ್ಯ ಕಾರ್ಯದರ್ಶಿಯೂ ಆಗಿದ್ದ ಮಾಥುರ್ ಅವರನ್ನು 2011 ರಲ್ಲಿ ಅಂದಿನ ಕೇಂದ್ರ ಸರ್ಕಾರದಲ್ಲಿ ಕೇಂದ್ರ ಸಣ್ಣ, ಅತೀ ಸಣ್ಣ ಮತ್ಯು ಮಧ್ಯಮ ಕೈಗಾರಿಕೆ ವಿಭಾಗದ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿದ್ದರು.

ಮುಖ್ಯ ಮಾಹಿತಿ ಆಯುಕ್ತರಾಗಿ 2015 ರಲ್ಲಿ ನಿಯೋಜನೆಗೊಂಡಿದ್ದ ಆವರು ಕಳೆದ ವರ್ಷವಷ್ಟೇ ನಿವೃತ್ತರಾಗಿದ್ದರು. ಅವರನ್ನು ಕೇಂದ್ರಾಡಳಿತ ಪ್ರದೇಶವಾದ ಲಡಾಖ್ ನ ಮೊದಲ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಿಸಲಾಗಿದ್ದು, ಇಂದಿನಿಂದ ಲಡಾಖ್ ಪಾಲಿಗೆ ಹೊಸ ಶಕೆ ಆರಂಭವಾಗಲಿದೆ.

English summary
Radha Krishna Mathur Takes Oath As First Lieutenant Governor Of Ladakh
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X