ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ ವಿಪ್ಲವ್ ದೇವ್

|
Google Oneindia Kannada News

ಅಗರ್ತಲ, ಮೇ 11: "ಸ್ವಾತಂತ್ರ್ಯ ಹೋರಾಟದ ವಿರುದ್ಧ ಹೋರಾಡುವ ಉದ್ದೇಶದಿಂದ ತಮಗೆ ಸಿಕ್ಕ ನೊಬೆಲ್ ಪ್ರಶಸ್ತಿಯನ್ನು ರವೀಂದ್ರನಾಥ್ ಠಾಗೋರ್ ಅವರು ಹಿಂದಿರುಗಿಸಿದ್ದರು" ಎಂಬ ಹೇಳಿಕೆ ನೀಡುವ ಮೂಲಕ ತ್ರಿಪುರ ಮುಖ್ಯಮಂತ್ರಿ ವಿಪ್ಲವ್ ದೇವ್ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ.

ತ್ರಿಪುರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ವಿಪ್ಲವ್ ದೇವ್ ಈ ರೀತಿ ಹೇಳಿಕೆ ನೀಡಿದ್ದರು. ಆದರೆ ವಾಸ್ತವದಲ್ಲಿ ಎಂದಿಗೂ ರವೀಂದ್ರನಾಥ್ ಠಾಗೋರ್ ತಮ್ಮ ಪ್ರಶಸ್ತಿಯನ್ನು ಹಿಂದಿರುಗಿಸಿರಲಿಲ್ಲ. 1919 ರಲ್ಲಿ ನಡೆದ ಜಲಿಯನ್ ವಾಲಾಬಾಗ್ ಹತ್ಯಾಕಾಂಡವನ್ನು ವಿರೋಧಿಸಿದ್ದ ಅವರು ವೈಸ್ ರಾಯ್ ಗೆ ಪತ್ರ ಬರೆದಿದ್ದರು. ಎಂದಿಗೂ ತಮ್ಮ ಪ್ರಶಸ್ತಿಯನ್ನು ಹಿಂದಿರುಗಿಸಿರಲಿಲ್ಲ.

Rabhindranath Tagore gave away nobel prize: Tripura CM

"ಸರ್ಕಾರಿ ಉದ್ಯೋಗ ಹುಡುಕುವುದಕ್ಕಾಗಿ ಕಾಲಹರಣ ಮಾಡುವ ಬದಲು ಪಾನ್ ಶಾಪ್ ತೆರೆಯಿರಿ" ಎಂಬ ದೇವ್ ಹೇಳಿಕೆ ಸಹ ವಿವಾದ ಸೃಷ್ಟಿಸಿತ್ತು. ಕಾರ್ಯಕ್ರಮವೊಂದರಲ್ಲಿ "ನಿಜವಾದ ಭಾರತೀಯ ನಾರಿ ಐಶ್ವರ್ಯ ರೈ, ಡಯಾನಾ ಹೆಡನ್ ಅಲ್ಲ. ಡಯಾನಾ ಹೇಗೆ ವಿಶ್ವ ಸುಂದರಿಯಾದರೋ ನನಗಂತೂ ಗೊತ್ತಿಲ್ಲ" ಎಂಬ ಹೇಳಿಕೆ ನೀಡಿದ್ದರು. ಈ ಕುರಿತು ಮಾಜಿ ವಿಶ್ವಸುಂದರಿ ಡಯಾನಾ ಬೇಸರ ವ್ಯಕ್ತಪಡಿಸಿದ್ದರಿಂದ ಕ್ಷಮೆ ಯಾಚಿಸಿದ್ದರು.

ಕೊನೆಗೂ ಕ್ಷಮೆ ಯಾಚಿಸಿದ ತ್ರಿಪುರ ಮುಖ್ಯಮಂತ್ರಿ ವಿಪ್ಲವ್ಕೊನೆಗೂ ಕ್ಷಮೆ ಯಾಚಿಸಿದ ತ್ರಿಪುರ ಮುಖ್ಯಮಂತ್ರಿ ವಿಪ್ಲವ್

ಅದಕ್ಕೂ ಮುನ್ನ, "ಮಹಾಭಾರತದ ಕಾಲದಲ್ಲೇ ಅಂತರ್ಜಾಲ ಸೌಲಭ್ಯಗಳಿದ್ದವು" ಎಂಬ ಹೇಳಿಕೆಯನ್ನು ಸಹ ನೀಡಿದ್ದರು.

English summary
"Nobel laureate Rabindranath Tagore gave away his Nobel prize in protest against British" says Tripura Chief minister Biplab Deb. After many controversial statements it his latest in his list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X