ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶನಿವಾರವೂ ತೆರೆದಿರಲಿದೆ ಪುರಿ ಜಗನ್ನಾಥ ದೇವಾಲಯ

|
Google Oneindia Kannada News

ಪುರಿ, ಸೆಪ್ಟೆಂಬರ್ 18: ಕೊರೊನಾ ಸೋಂಕು ಕೊಂಚ ಕಡಿಮೆಯಾದ ಹಿನ್ನೆಲೆಯಲ್ಲಿ ಒಡಿಶಾದಲ್ಲಿ ಕೊರೊನಾ ನಿಯಮಗಳನ್ನು ಕೊಂಚ ಸಡಿಲಗೊಳಿಸಲಾಗಿದೆ. ಹಾಗೆಯೇ ಪುರಿ ಜಗನ್ನಾಥ ದೇವಾಲಯದಲ್ಲಿ ಇಂದಿನಿಂದ ಪ್ರತಿ ಶನಿವಾರವೂ ಭಕ್ತರಿಗೆ ದರ್ಶನ ಮಾಡಲು ಅವಕಾಶ ನೀಡಲಾಗಿದೆ.

ಕಳೆದ 4 ತಿಂಗಳ ಬಳಿಕ ಆಗಸ್ಟ್ 23ರಂದು ದೇವಾಲಯವನ್ನು ತೆರೆಯಲಾಯಿತು. ದೇವಸ್ಥಾನವು ಮೊದಲ ವಾರ ಐದು ದಿನಗಳ ಕಾಲ ತೆರೆದಿರುತ್ತಿತ್ತು. ಹಿಂದಿನ ಕೊರೊನಾ ನಿಯಮಗಳನ್ನು ಮುಂದುವರೆಸಲಾಗುತ್ತದೆ. ದೇವಸ್ಥಾನಕ್ಕೆ ಭೇಟಿ ನೀಡುವ ಎಲ್ಲಾ ಭಕ್ತರು ಎರಡೂ ಕೊರೊನಾ ಲಸಿಕೆ ಪಡೆದಿರುವ ಪ್ರಮಾಣಪತ್ರವನ್ನು ನೀಡಬೇಕು ಅಥವಾ ಕೋವಿಡ್ ನೆಗೆಟಿವ್ ಪ್ರಮಾಣಪತ್ರವನ್ನುನೀಡಬೇಕು.

Breaking News: ನಾಲ್ಕು ತಿಂಗಳ ನಂತರ ತೆರೆದ ಪುರಿ ಜಗನ್ನಾಥ ದೇವಸ್ಥಾನ Breaking News: ನಾಲ್ಕು ತಿಂಗಳ ನಂತರ ತೆರೆದ ಪುರಿ ಜಗನ್ನಾಥ ದೇವಸ್ಥಾನ

ದೇವಸ್ಥಾನಕ್ಕೆ ಬರುವ 96 ಗಂಟೆಗಳ ಒಳಗೆ ಕೊರೊನಾ ಪರೀಕ್ಷೆ ಮಾಡಿಸಿರಬೇಕು. ಎಲ್ಲಾ ಭಕ್ತರು ಫೋಟೊ ಐಡಿ ಕಾರ್ಡ್ ಅಂದರೆ ಆಧಾರ್ ಇತ್ಯಾದಿಗಳನ್ನು ತಂದು ಸಿಂಗದ್ವಾರದ ಮೂಲಕ ಪ್ರವೇಶಿಸಬೇಕಾಗುತ್ತದೆ. ನಿರ್ಗಮನ ಉತ್ತರ ದ್ವಾರದ ಮೂಲಕ ಇರುತ್ತದೆ.

Puri Jagannath Temple Reopens For Devotees On Saturdays

ಆಗಸ್ಟ್ 16ರಿಂದ ಸ್ಥಳೀಯರ ಭಕ್ತರು ಪುರಿ ಜಗನ್ನಾಥನ ದರ್ಶನ ಪಡೆಯುತ್ತಿದ್ದು. ಆಗಸ್ಟ್ 23ರ ನಂತರ ಹೊರ ರಾಜ್ಯಗಳ ಭಕ್ತರ ಪ್ರವೇಶಕ್ಕೂ ಅವಕಾಶ ಕಲ್ಪಿಸಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.

ಆಗಸ್ಟ್ 16ರಿಂದ 20ರವರೆಗೆ ಕೇವಲ ಪುರಿಯ ಸುತ್ತಮುತ್ತಲಿನ ಭಕ್ತರ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು, ಆಗಸ್ಟ್ 23ರಿಂದ ಎಲ್ಲರಿಗೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು ಆದರೆ, ಶನಿವಾರ ಮತ್ತು ಭಾನುವಾರ ಒರಿಸ್ಸಾದಲ್ಲಿ ವೀಕೆಂಡ್ ಕರ್ಫ್ಯೂ ಇರುವುದರಿಂದ ಪುರಿ ಜಗನ್ನಾಥ ಸ್ವಾಮಿಯ ದರ್ಶನಕ್ಕೆ ಅವಕಾಶ ನೀಡಲಾಗಿರಲಿಲ್ಲ,

ಹಾಗೇ, ಆಗಸ್ಟ್ 30ರಂದು ಜನ್ಮಾಷ್ಟಮಿ ಉತ್ಸವದ 2ದಿನಗಳು ಭಕ್ತರಿಗೆ ಪುರಿ ಜಗನ್ನಾಥ ದೇವಾಲಯದ ಪ್ರವೇಶವನ್ನು ನಿಷೇಧಿಸಲಾಗಿತ್ತು. ಇನ್ನು ದೇವಾಲಯದ 3500 ಕ್ಕೂ ಹೆಚ್ಚು ಸೇವಕರು ಮತ್ತು ಅವರ ಕುಟುಂಬಗಳಿಗೆ ಸಮಗ್ರ ಲಸಿಕೆ ಅಭಿಯಾನ ನಡೆಸಲಾಗಿದ್ದು, ದೇವಸ್ಥಾನಕ್ಕೆ ಪ್ರವೇಶಿಸಲು ಕಟ್ಟುನಿಟ್ಟಾದ ಕೋವಿಡ್ ಪ್ರೋಟೋಕಾಲ್ ಅನ್ನು ರೂಪಿಸುವುದು ಆಡಳಿತ ಮಂಡಳಿಯ ಜವಾಬ್ದಾರಿಯಾಗಿದೆ.

2020ರಲ್ಲಿ ರಥಯಾತ್ರೆ ನಡೆಸುವುದು ದೊಡ್ಡ ಸವಾಲಾಗಿತ್ತು. ಆಗ ಇನ್ನು ಕೋವಿಡ್ ರೋಗವು ಹೊಸದು, ಮತ್ತು ಅಪರಿಚಿತರ ಭಯವು ಹೆಚ್ಚಾಗಿತ್ತು.ಈ ಬಾರಿ ತೀರ್ಥ ಕ್ಷೇತ್ರ ಜಗನ್ನಾಥಪುರಿಯಲ್ಲಿ ಜಗದ್ವಿಖ್ಯಾತ ರಥಯಾತ್ರೆ ಕೋವಿಡ್-19 ಶಿಷ್ಟಾಚಾರ, ಭದ್ರತೆಯ ನಡುವೆ ನಡೆದಿದೆ.

ಸರ್ವಾಲಂಕೃತಗೊಂಡ ಭಗವಾನ್ ಜಗನ್ನಾಥ ಹಾಗೂ ಬಲರಾಮ, ಸುಭದ್ರೆಯರ ಮೂರು ರಥಗಳನ್ನು ಶ್ರದ್ಧಾಭಕ್ತಿಗಳಿಂದ ಜುಲೈ 12ರಂದು ಮೆರವಣಿಗೆ ನಡೆಸಲಾಗಿತ್ತು. ಸತತ ಎರಡನೇ ವರ್ಷವೂ ಕೋವಿಡ್-19 ಹಿನ್ನೆಲೆಯಲ್ಲಿ ಹೆಚ್ಚು ಜನ ಭಾಗವಹಿಸದೇ ರಥ ಯಾತ್ರೆ ನಡೆಯಿತು.

ರಥಯಾತ್ರೆ ಹಿನ್ನೆಲೆಯಲ್ಲಿ ಸಾವಿರಾರು ಆರ್ ಟಿ-ಪಿಸಿಆರ್ ಪರೀಕ್ಷೆಗಳನ್ನು ನಡೆಸಲಾಗಿತ್ತು. ಈ ಪೈಕಿ ದೇವಾಲಯದ ಸೇವಕರು, ಅಧಿಕಾರಿಗಳು, ಪೊಲೀಸರಿಗೂ ಕೋವಿಡ್-19 ಪರೀಕ್ಷೆ ನಡೆಸಲಾಗಿತ್ತು.

English summary
Amidst growing concerns of the possible third wave of coronavirus, the Odisha government is easing restrictions for religious institutions and temples with strict adherence to COVID-19 rules.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X