ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೀಫ್ ಪ್ರಿಯ ಡೊನಾಲ್ಡ್ ಟ್ರಂಪ್‌ಗೆ ಭಾರತದಲ್ಲಿ ಸಂಪೂರ್ಣ ಸಸ್ಯಾಹಾರಿ ಊಟ

|
Google Oneindia Kannada News

ನವದೆಹಲಿ, ಫೆಬ್ರವರಿ 24: 'ಡೊನಾಲ್ಡ್ ಟ್ರಂಪ್ ಸಸ್ಯಾಹಾರದ ಖಾದ್ಯ ಸೇವಿಸಿದ್ದನ್ನು ನಾವು ನೋಡಿಯೇ ಇಲ್ಲ'- ಇದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತರ ಮಾತು. ಗೋಮಾಂಸ ಸೇರಿದಂತೆ ಮಾಂಸಾಹಾರದ ತಿನಿಸುಗಳನ್ನು ಬಿಟ್ಟು ಸಸ್ಯಾಹಾರವನ್ನು ಸೇವಿಸದ ಡೊನಾಲ್ಡ್ ಟ್ರಂಪ್‌ಗೆ ಭಾರತದಲ್ಲಿ ಸಿದ್ಧವಾಗಿರುವುದು ಸಸ್ಯಾಹಾರದ ಮೆನು.

ಟ್ರಂಪ್ ಯಾವ ದೇಶಕ್ಕೆ ಭೇಟಿ ನೀಡಿದರೂ ಅವರ ಮೆಚ್ಚಿನ ಖಾದ್ಯಗಳು ಹಾಗೂ ಪಕ್ಕದಲ್ಲಿ ಕೆಚಪ್ ಬಾಟಲಿಗಳು ಸಿದ್ಧವಾಗಿರುತ್ತಿದ್ದವು. ಟ್ರಂಪ್ ಅವರಿಗೆ ಅಮೆರಿಕದಲ್ಲಿ ದೊರಕುವ ಆಹಾರವನ್ನೇ ಸಿದ್ಧಪಡಿಸಿ ನೀಡಲಾಗುತ್ತಿತ್ತು. ಆದರೆ ಭಾರತದಲ್ಲಿ ಟ್ರಂಪ್ ಅವರಿಗೆ ಅವರ ಮೆಚ್ಚಿನ ಊಟ ಸಿಗುತ್ತಿಲ್ಲ. ಮುಖ್ಯವಾಗಿ ಅವರ ಅಚ್ಚುಮೆಚ್ಚಿನ ಖಾದ್ಯ ಬೀಫ್‌ಅನ್ನೇ ಮೆನುವಿನಿಂದ ಹೊರಗಿಡಲಾಗಿದೆ.

ಗುಜರಾತಿ ಖಾದ್ಯಗಳನ್ನು ಸವಿಯಲಿರುವ ಟ್ರಂಪ್ ದಂಪತಿಗುಜರಾತಿ ಖಾದ್ಯಗಳನ್ನು ಸವಿಯಲಿರುವ ಟ್ರಂಪ್ ದಂಪತಿ

ಬರ್ಗರ್ ಮತ್ತು ಮಾಂಸದ ಬ್ರೆಡ್‌ಗಳನ್ನು ಹೆಚ್ಚಾಗಿ ಸೇವಿಸುವ ಟ್ರಂಪ್ ಅವರಿಗೆ ಎರಡು ದಿನಗಳ ಭಾರತದ ಪ್ರವಾಸದಲ್ಲಿ ಆ ಖಾದ್ಯಗಳು ಸಿಗುವುದಿಲ್ಲ. ಗುಜರಾತ್, ಆಗ್ರಾ ಮತ್ತು ದೆಹಲಿಗೆ ಟ್ರಂಪ್ ಭೇಟಿ ನೀಡಲಿದ್ದು, ಇಲ್ಲಿ ಗೋಹತ್ಯೆ ನಿಷೇಧ ಜಾರಿಯಲ್ಲಿವೆ. ಹೀಗಾಗಿ ಟ್ರಂಪ್ ಅವರ ಇಷ್ಟದ ಬೀಫ್ ಬರ್ಗರ್ ಈ ಎರಡೂ ದಿನ ಅವರಿಗೆ ಲಭ್ಯವಾಗುವುದಿಲ್ಲ.

ತರಕಾರಿ ಸೇವಿಸಿದ್ದನ್ನು ಒಮ್ಮೆಯೂ ನೋಡಿಲ್ಲ

ತರಕಾರಿ ಸೇವಿಸಿದ್ದನ್ನು ಒಮ್ಮೆಯೂ ನೋಡಿಲ್ಲ

ಮಾಂಸಾಹಾರ ಪ್ರಿಯ ಟ್ರಂಪ್, ಭಾರತದಲ್ಲಿ ಹಣ್ಣು, ತರಕಾರಿಯಿಂದ ಮಾಡಿರುವ ತಿನಿಸುಗಳನ್ನು ಸೇವಿಸುತ್ತಾರೆ ಎನ್ನುವುದೇ ಅವರ ಆಪ್ತರಿಗೆ ಕುತೂಹಲ ಮತ್ತು ಅಚ್ಚರಿ ಮೂಡಿಸಿದೆ. 'ಭಾರತದಲ್ಲಿ ಚೀಸ್ ಬರ್ಗರ್ ಕೂಡ ನೀಡುವುದಿಲ್ಲ. ಹೀಗಾಗಿ ತಮ್ಮ ಊಟದ ವಿಚಾರವನ್ನು ಟ್ರಂಪ್ ಹೇಗೆ ನಿಭಾಯಿಸುತ್ತಾರೋ ಗೊತ್ತಿಲ್ಲ. ಅವರು ತರಕಾರಿಯನ್ನು ತಿಂದಿದ್ದನ್ನು ನಾನು ಒಮ್ಮೆಯೂ ನೋಡಿಲ್ಲ' ಎಂದು ಅಮೆರಿಕದ ಮಾಜಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಗುಜರಾತ್‌ನಲ್ಲಿ ಸ್ಥಳೀಯ ಖಾದ್ಯ

ಗುಜರಾತ್‌ನಲ್ಲಿ ಸ್ಥಳೀಯ ಖಾದ್ಯ

ಅಹಮದಾಬಾದ್‌ಗೆ ಭೇಟಿ ನೀಡಲಿರುವ ಟ್ರಂಪ್ ಹಾಗೂ ಅವರ ಪತ್ನಿ ಮೆಲಾನಿಯಾ ಟ್ರಂಪ್ ಅವರಿಗೆ ಸಂಪೂರ್ಣ ಸಸ್ಯಾಹಾರದ ಮೆನು ತಯಾರಾಗಿದೆ. ಸಬರಮತಿ ಆಶ್ರಮಕ್ಕೆ ತೆರಳಲಿರುವ ಅಮೆರಿಕ ಅಧ್ಯಕ್ಷ ಮತ್ತು ಅವರ ಪತ್ನಿಗೆ ಫಾರ್ಚ್ಯೂನ್ ಲ್ಯಾಂಡ್ ಮಾರ್ಕ್ ಹೋಟೆಲ್‌ನಲ್ಲಿ ಖಮನ್, ಬ್ರೊಕೊಲಿ ಸಮೋಸ, ಜೇನು ತುಪ್ಪ ಬೆರೆಸಿದ ಕುಕಿಗಳು, ಬಹುಧಾನ್ಯದ ರೋಟಿ, ಎಳನೀರು, ವಿಶೇಷ ಚಹಾ ಸೇರಿದಂತೆ ಸ್ಥಳೀಯ ತಿನಿಸುಗಳನ್ನು ಮುಖ್ಯ ಬಾಣಸಿಗ ಸುರೇಶ್ ಖನ್ನಾ ಸಿದ್ಧಪಡಿಸಿದ್ದಾರೆ.

ಚೀನಾ ಯೋಜನೆಗೆ ಅಮೆರಿಕ-ಭಾರತ ಪ್ರತಿತಂತ್ರ: ಬ್ಲೂ ಡಾಟ್ ಯೋಜನೆ ಬಗ್ಗೆ ಮಾತುಕತೆಚೀನಾ ಯೋಜನೆಗೆ ಅಮೆರಿಕ-ಭಾರತ ಪ್ರತಿತಂತ್ರ: ಬ್ಲೂ ಡಾಟ್ ಯೋಜನೆ ಬಗ್ಗೆ ಮಾತುಕತೆ

ವಿದೇಶ ಪ್ರಯಾಣದಲ್ಲಿಯೂ ಮಾಂಸಾಹಾರ ಬೇಕು

ವಿದೇಶ ಪ್ರಯಾಣದಲ್ಲಿಯೂ ಮಾಂಸಾಹಾರ ಬೇಕು

ಸಂಪೂರ್ಣ ಸಸ್ಯಾಹಾರಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ಜತೆಗೆ ಟ್ರಂಪ್ ಕೂಡ ಸಸ್ಯಾಹಾರ ಸೇವನೆ ಮಾಡಲಿದ್ದಾರೆ. ಸಾಮಾನ್ಯವಾಗಿ ಟ್ರಂಪ್ ಅವರ ಪ್ರವಾಸ ವೇಳೆ ಕೊನೆಯ ಕ್ಷಣಗಳಲ್ಲಿ ಮೆನುವನ್ನು ಅಂತಿಮಗೊಳಿಸಲಾಗುತ್ತದೆ. ಟ್ರಂಪ್ ಅವರ ಊಟದ ಅಭಿರುಚಿಗೆ ತಕ್ಕಂತೆ ಖಾದ್ಯಗಳನ್ನು ಸಿದ್ಧಪಡಿಸುವ ವಿಚಾರದಲ್ಲಿ ಅವರ ಆಪ್ತರು ಯಾವಾಗಲೂ ಮಧ್ಯಪ್ರವೇಶ ಮಾಡುತ್ತಾರೆ. ವಿದೇಶ ಪ್ರಯಾಣದಲ್ಲಿ ಟ್ರಂಪ್ ದಿನಕ್ಕೆ ಎರಡು ಬಾರಿಯಾದರೂ ಸ್ಟೀಕ್ ಸೇವನೆ ಮಾಡುತ್ತಾರೆ.

ಮೆನು ಬದಲಾದ ಉದಾಹರಣೆಗಳಿವೆ

ಮೆನು ಬದಲಾದ ಉದಾಹರಣೆಗಳಿವೆ

ಟ್ರಂಪ್ ಅವರ ಪ್ರತಿ ಊಟದಲ್ಲಿಯೂ ಈ ಹಿಂದೆ ಮತ್ತು ಈಗಲೂ ಸಲಾಡ್ ಇರುತ್ತದೆ. ಆದರೆ ಅದರಾಚೆಗೆ ಅವರು ಎಂದಿಗೂ ಒಂದು ತರಕಾರಿ ಸೇವನೆ ಮಾಡಿದ್ದನ್ನು ತಾವು ನೋಡಿಯೇ ಇಲ್ಲ ಎಂದು ಅವರ ಆಪ್ತರು ಹೇಳುತ್ತಾರೆ. ವಿವಿಧ ದೇಶಗಳ ಟ್ರಂಪ್ ಭೇಟಿ ಸಂದರ್ಭದಲ್ಲಿ ಮೆನುನಲ್ಲಿ ಇರದ ಮಟನ್ ಮತ್ತು ಸ್ಟೀಕ್ ಖಾದ್ಯಗಳನ್ನು ಅವರಿಗೆ ಪೂರೈಸಿದ ಉದಾಹರಣೆಗಳಿವೆ. ಹೀಗಾಗಿ ಭಾರತದಲ್ಲಿ ಟ್ರಂಪ್ ಸಸ್ಯಾಹಾರ ಸೇವನೆ ಮಾಡುತ್ತಾರೋ ಅಥವಾ ಬೇರೆ ಖಾದ್ಯಗಳಿಗೆ ಬೇಡಿಕೆ ಇರಿಸುತ್ತಾರೋ ಎನ್ನುವುದು ಅವರ ಆಪ್ತರಿಗೂ ಗೊತ್ತಾಗುತ್ತಿಲ್ಲ.

ಟ್ರಂಪ್ ಭೇಟಿ: ಮೂರು ಗಂಟೆ ಭದ್ರತೆಗೆ 80 ಕೋಟಿ ಖರ್ಚುಟ್ರಂಪ್ ಭೇಟಿ: ಮೂರು ಗಂಟೆ ಭದ್ರತೆಗೆ 80 ಕೋಟಿ ಖರ್ಚು

ಟ್ರಂಪ್ ಅವರ ನೆಚ್ಚಿನ ಫಾಸ್ಟ್ ಫುಡ್ ರೆಸ್ಟೋರೆಂಟ್‌ಗಳಲ್ಲಿ ಒಂದಾದ ಮೆಕ್‌ಡೊನಾಲ್ಡ್ಸ್ ಕೂಡ ಭಾರತದಲ್ಲಿ ಬೀಫ್ ತಿನಿಸು ಒದಗಿಸುವುದಿಲ್ಲ. ಸ್ಥಳೀಯರು ಚಿಕನ್ ಬರ್ಗರ್ ಅಥವಾ ಫ್ರೈಡ್ ಪನ್ನೀರ್ ಚೀಸ್ ಸ್ಯಾಂಡ್‌ವಿಚ್‌ಗಳನ್ನು ಸೇವಿಸುತ್ತಾರೆ.

ಡೇರಿ ಉತ್ಪನ್ನ ಆಮದು ಮಾಡಲು ಬಿಡೊಲ್ಲ

ಡೇರಿ ಉತ್ಪನ್ನ ಆಮದು ಮಾಡಲು ಬಿಡೊಲ್ಲ

ಡೊನಾಲ್ಡ್ ಟ್ರಂಪ್ ವೇಳೆ ಭಾರತ ಮತ್ತು ಅಮೆರಿಕ ವಿವಿಧ ಒಪ್ಪಂದಗಳನ್ನು ಮಾಡಿಕೊಳ್ಳುವ ನಿರೀಕ್ಷೆಯಿದೆ. ಭಾರತದ ಭೇಟಿಯಲ್ಲಿ ಯಾವುದೇ ಒಡಂಬಡಿಕೆಗೆ ಸಹಿ ಹಾಕುವುದಿಲ್ಲ ಎಂದು ಡೊನಾಲ್ಡ್ ಟ್ರಂಪ್ ಸ್ಪಷ್ಟನೆ ನೀಡಿದ್ದಾರೆ. ಅಮೆರಿಕದಿಂದ ಡೇರಿ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವ ಒಪ್ಪಂದಗಳಿಗೆ ಅವಕಾಶ ನೀಡುವುದಿಲ್ಲ ಎಂದು ಆರೆಸ್ಸೆಸ್ ಹೇಳಿದೆ.

ಅಮೆರಿಕದಿಂದ ಡೇರಿ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲು ಬಿಡುವುದಿಲ್ಲ. ನಾವು ಹಸುವನ್ನು ಭಾರತದ ತಾಯಿ ಎಂಬಂತೆ ಪೂಜಿಸುತ್ತೇವೆ. ಹೀಗಾಗಿ ಡೇರಿ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಬೇಕೆಂಬ ತನ್ನ ಬೇಡಿಕೆ ನ್ಯಾಯಯುತವಲ್ಲ ಎಂಬುದನ್ನು ಅಮೆರಿಕ ಅರ್ಥಮಾಡಿಕೊಳ್ಳಬೇಕು ಎಂದು ಸ್ವದೇಶಿ ಜಾಗರಣ ಮಂಚ್‌ನ ಪ್ರಧಾನ ಕಾರ್ಯದರ್ಶಿ ಅಶ್ವಿನಿ ಮಹಾಜನ್ ಹೇಳಿದ್ದಾರೆ.

English summary
India prepared vegetarian menu for US president Donald Trump in his two days visit, who is a beef lover.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X