ರೈತರ ಬೆಳೆ ಸಾಲಮನ್ನಾ: ಇದೀಗ ಪಂಜಾಬಿನ ಸರದಿ

Posted By:
Subscribe to Oneindia Kannada

ಚಂಡಿಘರ್, ಜೂನ್ 20: ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳು ರೈತರ ಬೆಳೆ ಸಾಲ ಮನ್ನಾಕ್ಕೆ ಅಸ್ತು ಎಂದಿರುವ ಬೆನ್ನಲ್ಲೇ ಪಂಜಾಬ್ ಸರ್ಕಾರ ಸಹ ರೈತರ ಸಾಲಮನ್ನಾಕ್ಕೆ ಮುಂದಾಗಿದೆ.

5 ಎಕರೆ ಗಿಂತ ಕಡಿಮೆ ಜಮೀನು ಹೊಂದಿದ ರೈತರ 2 ಲಕ್ಷದವರೆಗಿನ ಸಾಲವನ್ನು ಮನ್ನಾ ಮಾಡುವುದಾಗಿ ಜೂನ್ 19 ರಂದು ಪಂಜಾಬ್ ಮುಖ್ಯಮಂತ್ರಿ ಕ್ಯಾ. ಅಮರೀಂದರ್ ಸಿಂಗ್ ಘೋಷಿಸುತ್ತಿದ್ದಂತೆಯೇ ಪಂಜಾಬಿನಾದ್ಯಂತ ರೈತರ ಸಂತಸ ಮುಗಿಲುಮುಟ್ಟಿದೆ.

Punjab to waive farm loan: Amarinder Singh

ಆದರೆ ಈ ಸಾಲಮನ್ನಾದಿಂದ ಪಂಜಾಬ್ ಸರ್ಕಾರದ ಮೇಲೆ 24,000 ಕೋಟಿ ರೂ. ಹೊರೆಬೀಳಲಿದೆ.

ನಮ್ಮ ರಾಜ್ಯದಲ್ಲಿ ಹೆಚ್ಚುತ್ತಿರುವ ರೈತರ ಆತ್ಮಹತ್ಯೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Chief minister of Punjab Amarinder Singh announced farm loan waiver in Punjab state. By this Punjab became third state to announce farm loan waiver after Uttar Pradesh, Maharashtra
Please Wait while comments are loading...