ಹಸುವಿನ ಕರು ಮೇಲೆಯೇ ಅತ್ಯಾಚಾರ ಎಸಗಿದ!
ಚಂಡಿಘಡ, ಆ. 06: ಅತ್ಯಾಚಾರಕ್ಕೆ ಭಾಷೆ, ಜಾತಿ, ಲಿಂಗದ ತಾರತಮ್ಯವಿಲ್ಲ ಎಂದುಕೊಂಡಿದ್ದವರಿಗೆ ಮತ್ತೊಂದು ಆಘಾತಕಾರಿ ಸುದ್ದಿಯಿದೆ. 25 ವರ್ಷದ ಯುವಕನೊಬ್ಬ ಏಳು ತಿಂಗಳ ಹಸುವಿನ ಕರುವಿನ ಮೇಲೆಯೇ ಅತ್ಯಾಚಾರ ನಡೆಸಿದ್ದಾನೆ.
ಪಂಜಾಬ್ ನ ಅಹಮದ್ಗಢ ಸಮೀಪದ ಮಂಡಂಗ್ಲಾ ಗ್ರಾಮ ಈ ಕೆಟ್ಟ ಘಟನೆಗೆ ಸಾಕ್ಷಿಯಾಗಿದೆ. 25 ವರ್ಷ ವಯಸ್ಸಿನ ದಿನೇಶ್ ಎಂಬುವವನು ಏಳು ತಿಂಗಳ ಕರುವಿನ ಮೇಲೆ ಅತ್ಯಾಚಾರ ಎಸಗಿದ ವೇಳೆ ಗ್ರಾಮಸ್ಥರು ಆತನನ್ನು ಹಿಡಿದು ಥಳಿಸಲು ಮುಂದಾಗಿದ್ದಾರೆ. ಈ ವೇಳೆ ದಿನೇಶ್ ಅಲ್ಲಿಂದ ಕಾಲುಕಿತ್ತಿದ್ದಾನೆ.[ಒಲ್ಲದ ಗರ್ಭ ತೆಗೆಸಿದ ಅತ್ಯಾಚಾರ ಸಂತ್ರಸ್ತೆಗೆ ನವಜೀವ!]
ಆಕಳ ಕರುವಿನ ಮಾಲಿಕ ಸುಖ್ಪಾಲ್ ಪೊಲೀಸರಿಗೆ ದೂರು ನೀಡಿದ್ದು ದಿನೇಶ್ ವಿರುದ್ಧ ಭಾರತೀಯ ದಂಡ ಸಂಹಿತೆ 377ನೇ ವಿಧಿ(ನಿಸರ್ಗಕ್ಕೆ ವಿರೋಧವಾದ ರೀತಿಯ ಲೈಂಗಿಕ ಕ್ರಿಯೆ) ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.[ಕಾಮದ ಕಣ್ಣಿಂದ ನೋಡಿದ್ದಕ್ಕೆ ಕೊಲೆಯಾಗಿ ಹೋದ]
ದೌರ್ಜನ್ಯಕ್ಕೆ ಒಳಗಾದ ಆಕಳ ಕರುವನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ. ಹಿಂದೆ ತಮಿಳುನಾಡಿನಲ್ಲಿ ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಹಸುವಿನ ಮೇಲೆ ಅತ್ಯಾಚಾರ ಮಾಡಿದ್ದ.