ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಉಡ್ತಾ ಪಂಜಾಬ್‌' ಸ್ಥಿತಿ ವಿರುದ್ಧ ಸಮರ ಸಾರಿರುವ ಪಂಜಾಬ್ ಸರ್ಕಾರ

|
Google Oneindia Kannada News

ಚಂಢೀಘಡ, ಜುಲೈ 03: ಹಿಂದಿ ಚಿತ್ರ 'ಉಡ್ತಾ ಪಂಜಾಬ್‌' ನೋಡಿದ್ದರೆ ಪಂಜಾಬ್‌ನಲ್ಲಿ ಡ್ರಗ್ಸ್‌ ಎಷ್ಟು ವ್ಯಾಪಕವಾಗಿ ಹರಡಿದೆ ಎಂದು ತಿಳಿದಿರಲಿಕ್ಕೆ ಸಾಕು. ಚಿತ್ರದಲ್ಲಿ ತೋರಿರುವುದು ಅತಿಶಯೋಕ್ತಿಯಲ್ಲ ಎಂಬುದಕ್ಕೆ ಉದಾಹರಣೆ ಪಂಜಾಬ್‌ನಲ್ಲಿ ಕಳೆದ ಒಂದೇ ತಿಂಗಳಲ್ಲಿ ಡ್ರಗ್ಸ್‌ನಿಂದ ಸತ್ತವರ ಸಂಖ್ಯೆ 35.

ಮಾದಕ ವಸ್ತು ಮಾರಿಯಿಂದ ಕಂಗೆಟ್ಟಿರುವ ಪಂಜಾಬ್‌ ಸರ್ಕಾರ ಹಲವು ವಿಶೇಷ ದಳಗಳು, ತನಿಖಾ ದಳಗಳು, ಇತರೆ.. ಇತರೆಗಳ ನಂತರ ಈಗ ಈ ಜಾಲದ ಬುಡವನ್ನೇ ಕಿತ್ತೊಗೆಯಲು ಮಹತ್ತರವಾದ ಹೆಜ್ಜೆ ಇಟ್ಟಿದೆ.

Punjab government tight fight against drugs

ಡ್ರಗ್ಸ್‌ ಸಾಗಾಟ ಮಾಡುವವರಿಗೆ ಮತ್ತು ಅದರೊಂದಿಗೆ ಗುರುತಿಸಿಕೊಂಡವರಿಗೆ ಮರಣದಂಡನೆ ಶಿಕ್ಷೆ ನೀಡಲು ಮುಂದಾಗಿದ್ದು. ಇದಕ್ಕಾಗಿ ನಿಯಮಾವಳಿಗಳನ್ನು ರೂಪಿಸಿ ರಾಷ್ಟ್ರಪತಿಗಳ ಅನುಮೋದನೆಗೆ ಕಳುಹಿಸಿದೆ. ಮರಣದಂಡನೆಯಂತ 'ಅಂತಿಮ ಹಂತದ ಶಿಕ್ಷೆ' ನೀಡುವ ನಿರ್ಣಯಕ್ಕೆ ಸರ್ಕಾರ ಬಂದಿದೆ ಎಂದರೆ ಡ್ರಗ್ಸ್‌ ಪಂಜಾಬ್‌ನ ಯುವಕರನ್ನು ಎಷ್ಟು ಹಿಂಡೆ ಹಿಪ್ಪೆ ಮಾಡುತ್ತಿದೆ ಎಂದು ಸುಲಭದಲ್ಲಿ ಊಹಿಸಬಹುದು.

ಪಂಜಾಬ್‌ನಲ್ಲಿ ಕ್ಯಾಪ್ಟನ್ ಅಮರಿಂದರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಆಗಿರುವುದು 15 ತಿಂಗಳು ಮಾತ್ರ. ಅಧಿಕಾರಕ್ಕೆ ಬರುವ ಮುಂಚೆ, ಡ್ರಗ್ಸ್ ಮಾರಿಯನ್ನು ತೊಡೆದುಹಾಕುವುದಾಗಿ ಪ್ರಣಾಳಿಕೆಯಲ್ಲಿ ಘೋಷಿಸಿದ್ದರು. ಹೀಗಾಗಿ ವಿರೋಧಪಕ್ಷಗಳಾದ ಎಎಪಿ, ಎಸ್‌ಎಡಿ ಸಹ ಡ್ರಗ್ಸ್‌ ಮಾರಿಗೆ ನಿಯಂತ್ರಣ ಹೇರುವಂತೆ ಆಡಳಿತ ಪಕ್ಷದ ಪಕ್ಕೆಗೆ ಗುದ್ದುತ್ತಿವೆ.

ಪಂಜಾಬ್‌ ಸರ್ಕಾರದ ಮನವಿಗೆ ರಾಷ್ಟ್ರಪತಿಗಳ ಅಂಕಿತ ದೊರೆತದ್ದೇ ಆದಲ್ಲಿ ಡ್ರಗ್ಸ್‌ ಸಾಗಾಟಕ್ಕೆ ಮರಣದಂಡನೆ ವಿಧಿಸುವ ದೇಶದ ಮೊದಲ ರಾಜ್ಯ ಪಂಜಾಬ್ ಆಗಲಿದೆ.

ಪಂಜಾಬ್‌ ರಾಜ್ಯದಲ್ಲಿ ಒಂದೇ ವರ್ಷದಲ್ಲಿ ಡ್ರಗ್ಸ್ ಸಾಗಾಟದಲ್ಲಿ 124% ಏರಿಕೆಯಾಗಿರುವುದು ಸರ್ಕಾರವನ್ನು ಆತಂಕಕ್ಕೆ ತಳ್ಳಿದೆ. ಸಿಕ್ಕಿ ಹಾಕಿಕೊಂಡ ಡ್ರಗ್ಸ್‌ನ ಪ್ರಮಾಣವೇ ಇಷ್ಟಾದರೆ ಸಿಕ್ಕಿ ಹಾಕಿಕೊಳ್ಳದ ಡ್ರಗ್ಸ್‌ ಪ್ರಮಾಣ ಇದರ ಎರಡಷ್ಟು ಎಂದರೆ 250% ಇರಬಹುದು ಎಂದು ಅಂದಾಜು ಮಾಡಲಾಗಿದೆ.

English summary
Punjab government decided to recommend to the Center the death penalty for drug smugglers and peddlers. 31 people died in just one month due to drugs in Punjab.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X