ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಜಾಬ್‌ ಸೋಲಿಗೆ ಯಾರು ಹೊಣೆ?, ಸೋನಿಯಾ ಹೇಳುವುದು ಹೀಗೆ...

|
Google Oneindia Kannada News

ನವದೆಹಲಿ, ಮಾರ್ಚ್ 22: ಇತ್ತೀಚೆಗೆ ನಡೆದ ಪಂಜಾಬ್‌ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಹೀನಾಯವಾಗಿ ಸೋಲನ್ನು ಕಂಡಿದೆ. ಈ ಸೋಲಿಗೆ ಹೊಣೆ ಯಾರು ಎಂಬ ಪ್ರಸ್ತಾಪ ಬಂದಾಗ ಆ ಹೊಣೆಯನ್ನು ಕಾಂಗ್ರೆಸ್‌ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ವಹಿಸಿಕೊಂಡಿದ್ದಾರೆ ಎಂದು ಕಾಂಗ್ರೆಸ್‌ನ ಮೂಲಗಳು ತಿಳಿಸಿದೆ.

ಈ ತಿಂಗಳ ಆರಂಭದಲ್ಲಿ ನಡೆದ ಕಾಂಗ್ರೆಸ್‌ನ ಉನ್ನತ ಮಟ್ಟದ ಸಭೆಯಲ್ಲಿ, ಪಂಜಾಬ್ ಚುನಾವಣೆಯಲ್ಲಿ ಪಕ್ಷದ ಸೋಲಿನ ಸಂಪೂರ್ಣ ಜವಾಬ್ದಾರಿಯನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಹಿಸಿಕೊಂಡಿದ್ದಾರೆ ಎಂದು ಸಭೆಯಲ್ಲಿ ಹಾಜರಿದ್ದ ಕಾಂಗ್ರೆಸ್ ನಾಯಕರೊಬ್ಬರು ಮಾಹಿತಿ ನೀಡಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ಸೋನಿಯಾ ಗಾಂಧಿ ಎದುರು ಜಿ-23 ನಾಯಕರು ಇಟ್ಟಿರುವ ಡಿಮ್ಯಾಂಡ್ ಏನು?ಸೋನಿಯಾ ಗಾಂಧಿ ಎದುರು ಜಿ-23 ನಾಯಕರು ಇಟ್ಟಿರುವ ಡಿಮ್ಯಾಂಡ್ ಏನು?

ಪಂಜಾಬ್‌ ಹಾಗೂ ಉತ್ತರ ಪ್ರದೇಶದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಪ್ರಚಾರ ಕಾರ್ಯಗಳನ್ನು ಮಾಡಿದ್ದ, ತನ್ನ ಇಬ್ಬರು ಮಕ್ಕಳಾದ ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾರನ್ನು ಆರೋಪಗಳಿಂದ ದೂರ ಮಾಡುವ ನಿಟ್ಟಿನಲ್ಲಿ ಸೋನಿಯಾ ಗಾಂಧಿ ಪಂಜಾಬ್‌ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲಿನ ಹೊಣೆಯನ್ನು ತನ್ನ ಮೇಲೆ ಹೊರಿಸಿಕೊಂಡಿದ್ದಾರೆ ವರದಿಯು ಉಲ್ಲೇಖ ಮಾಡಿದೆ.

Punjab Assembly Elections: Whos To Blame For Punjab Debacle, What Sonia Gandhi Said

ಪಂಜಾಬ್‌ನಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್‌ ಈ ವಿಧಾನಸಭೆ ಚುಣಾವಣೆಯಲ್ಲಿ 77 ಸ್ಥಾನಗಳಿಂದ 18 ಸ್ಥಾನಗಳಿಗೆ ಇಳಿಯಿತು. ಕೊನೆಯ ಕ್ಷಣದಲ್ಲಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರನ್ನು ಬದಲಾವಣೆ ಮಾಡಬೇಕಾದ ಸ್ಥಿತಿ ಕಾಂಗ್ರೆಸ್‌ನ ಒಳ ಜಗಳಗಳಿಂದಾಗಿ ಉಂಟಾಯಿತು. ಅಷ್ಟೇ ಅಲ್ಲದೇ ಕಾಂಗ್ರೆಸ್‌ ಅಮರಿಂದರ್ ಸಿಂಗ್‌ರ ಎದುರಾಳಿ ಎಂಬಂತೆ ಇರುವ ನವಜೋತ್ ಸಿಧು ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಕಾಂಗ್ರೆಸ್‌ ನೇಮಿಸಿತು.

ಪಂಜಾಬ್ ಸೇರಿದಂತೆ ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸರಣಿ ಸೋಲಿನ ಬಗ್ಗೆ ಚರ್ಚಿಸಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಇತ್ತೀಚಿನ ಸಭೆಯಲ್ಲಿ ಸೋನಿಯಾ ಗಾಂಧಿ ಈ ಹೊಣೆಯನ್ನು ತಾನೇ ಹೊತ್ತಿದ್ದಾರೆ ಎಂದು ವರದಿಯು ಹೇಳಿದೆ. ಈ ಸಭೆಯಲ್ಲಿ ಪಕ್ಷದ 60 ಕ್ಕೂ ಹೆಚ್ಚು ಪ್ರಮುಖ ನಾಯಕರು ಭಾಗವಹಿಸಿದ್ದರು.

ಸೋನಿಯಾ ಗಾಂಧಿ ತಲೆದಂಡಕ್ಕೆ ಒತ್ತಡ ತೀವ್ರ: ಶತಮಾನಗಳ ಇತಿಹಾಸದ ಕಾಂಗ್ರೆಸ್ ಇಬ್ಬಾಗದತ್ತ?ಸೋನಿಯಾ ಗಾಂಧಿ ತಲೆದಂಡಕ್ಕೆ ಒತ್ತಡ ತೀವ್ರ: ಶತಮಾನಗಳ ಇತಿಹಾಸದ ಕಾಂಗ್ರೆಸ್ ಇಬ್ಬಾಗದತ್ತ?

"ಪಂಜಾಬ್‌ ಹತ್ಯಾಕಾಂಡ"ಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದ್ದ ಗುಲಾಂ

ಸಭೆಯಲ್ಲಿ, ಹಿರಿಯ ಕಾಂಗ್ರೆಸ್ ನಾಯಕ ಮತ್ತು G-23 ಕಾಂಗ್ರೆಸ್ ಭಿನ್ನಮತೀಯರ ಗುಂಪಿನ ಸದಸ್ಯ ಗುಲಾಂ ನಬಿ ಆಜಾದ್ ಅವರು ಕೂಡಾ ಭಾಗಿಯಾಗಿದ್ದರು. "ಪಂಜಾಬ್‌ನಲ್ಲಿ ನಡೆದ ಹತ್ಯಾಕಾಂಡ"ಕ್ಕೆ ಯಾರು ಹೊಣೆ ಎಂದು ಗುಲಾಂ ನಬಿ ಆಜಾದ್ ಪ್ರಶ್ನೆ ಮಾಡಿದ್ದರು.

ಚುನಾವಣೆಗೆ ಮೂರು ತಿಂಗಳ ಮೊದಲು ಅಮರಿಂದರ್ ಸಿಂಗ್ ಬದಲಿಗೆ ಚರಣ್‌ಜೀತ್‌ ಸಿಂಗ್‌ ಚನ್ನಿ ಅವರನ್ನು ನೇಮಿಸುವ ನಿರ್ಧಾರವನ್ನು ಯಾರು ತೆಗೆದುಕೊಂಡರು? ಕಾಂಗ್ರೆಸ್ಸಿನ ಬಗ್ಗೆ ಟೀಕೆಗಳನ್ನು ಇಟ್ಟುಕೊಂಡಿರುವ ನವಜೋತ್ ಸಿಂಗ್ ಸಿಧು ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿದವರು ಯಾರು? ಎಂದು ಕೂಡಾ ಗುಲಾಂ ನಬಿ ಆಜಾದ್ ಸಭೆಯಲ್ಲಿ ಪ್ರಶ್ನಿಸಿದ್ದರು ಎಂದು ಮೂಲಗಳು ತಿಳಿಸಿದೆ. ಆದರೆ ಸೋನಿಯಾ ಗಾಂಧಿ ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ ಹೊಣೆಯನ್ನು ತಾನು ಹೊತ್ತುಕೊಂಡಿದ್ದಾರೆ. "ಈ ವಿಚಾರದಲ್ಲಿ ಯಾರ ಹೆಸರನ್ನು ಕೂಡಾ ಉಲ್ಲೇಖ ಮಾಡಬೇಡಿ. ಪಂಜಾಬ್‌ನಲ್ಲಿ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಂಡಿದ್ದೇನೆ ಮತ್ತು ನಾನು ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ," ಸೋನಿಯಾ ತಿಳಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ಇನ್ನು ಗುಲಾಂ ನಬಿ ಆಜಾದ್‌ "ಜವಾಬ್ದಾರಿ ವಹಿಸಿದ್ದಕ್ಕಾಗಿ" ಧನ್ಯವಾದ ಹೇಳುವ ಮೂಲಕ ಪ್ರತಿಕ್ರಿಯಿಸಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಇನ್ನು ಕಾಂಗ್ರೆಸ್ ಭಿನ್ನಮತೀಯ ಗುಂಪಿನ ಇಬ್ಬರು ಸದಸ್ಯರಾದ ಕಪಿಲ್ ಸಿಬಲ್ ಮತ್ತು ಮನೀಶ್ ತಿವಾರಿ ಅವರು ಸಂದರ್ಶನಗಳಲ್ಲಿ ಪಕ್ಷದ ನಾಯಕತ್ವವನ್ನು ಸಾರ್ವಜನಿಕವಾಗಿ ಟೀಕಿಸಿದ್ದಾರೆ. ಕ್ಷದ ವರಿಷ್ಠರು "ಕೋಗಿಲೆ ನಾಡಿನಲ್ಲಿ ವಾಸಿಸುತ್ತಿದ್ದಾರೆ, ಪಕ್ಷದ ಅಧ್ಯಕ್ಷರು ಅಲ್ಲ. ಆದರೆ ಅವರು ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ," ಎಂದು ಆರೋಪ ಮಾಡಿದ್ದರು.

Recommended Video

ಮತ್ತೊಂದು ಭೂಮಿ ಹುಡುಕಾಟದಲ್ಲಿ NASA | Oneindia Kannada

English summary
Punjab Assembly Elections: Who's To Blame For Punjab Debacle, What Sonia Gandhi Said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X