ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆ: ಹರಿಯುತ್ತಿದೆ ಡ್ರಗ್ಸ್, ಮದ್ಯದ ಹೊಳೆ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಜನವರಿ 23: ಪಂಚ ರಾಜ್ಯ ಚುನಾವಣೆ ಸಮೀಪಿಸುತ್ತಿದ್ದು ಮಾದಕ ಪದಾರ್ಥಗಳ ಹೊಳೆ ಹರಿಯುತ್ತಿದೆ. ಚುನಾವಣೆ ನಡೆಯಲಿರುವ ಗೋವಾ, ಪಂಜಾಬ್, ಉತ್ತರ ಪ್ರದೇಶ, ಉತ್ತರಖಂಡ, ಮತ್ತು ಮಣಿಪುರ ರಾಜ್ಯಗಳಿಂದ ಪೊಲೀಸರು ಕ್ವಿಂಟಾಲುಗಟ್ಟಲೆ ಡ್ರಗ್ಸ್, ಲಕ್ಷಗಟ್ಟಲೆ ಲೀಟರ್ ಮದ್ಯ ವಶಪಡಿಸಿಕೊಡಿರುವುದೇ ಇದಕ್ಕೆ ಸಾಕ್ಷಿ.

ದೇಶದ ಡ್ರಗ್ಸ್ ರಾಜಧಾನಿ ಎಂದೇ ಕುಖ್ಯಾತವಾಗಿರುವ ಪಂಜಾಬ್ ಚುನಾವಣೆಯಲ್ಲಿ ಡ್ರಗ್ಸ್ ಬಳಕೆ ಜೋರಾಗಿದೆ. ಇಲ್ಲಿ ಭಾರಿ ಪ್ರಮಾಣದ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. 1,134 ಕೆ.ಜಿ ಮಾದಕ ವಸ್ತುಗಳನ್ನು ಪಂಜಾಬ್ ಪೊಲೀಸರು ಬೇಟೆಯಾಡಿದ್ದಾರೆ. ಇದರ ಬೆಲೆ ಸುಮಾರು 9.06 ಕೋಟಿ ಎಂದು ಅಂದಾಜು ಮಾಡಲಾಗಿದೆ.[ಪಂಜಾಬ್: ಮನೆಗೊಂದು ನೌಕರಿ, ಬಿಜೆಪಿ ಪ್ರಣಾಳಿಕೆಯ ಹೈಲೈಟ್]

 Punjab as expected tops in drug seizures during elections

ಒಟ್ಟಾರೆ 5 ರಾಜ್ಯಗಳಿಂದ ವಶಕ್ಕೆ ಪಡೆದುಕೊಂಡ ಡ್ರಗ್ಸ್ 1,485 ಕೆಜಿಯಾಗಿದೆ. ಇವುಗಳ ಮಾರುಕಟ್ಟೆ ಮೌಲ್ಯ ಬರೋಬ್ಬರಿ 10.30 ಕೋಟಿ ರೂಪಾಯಿ. ಡ್ರಗ್ಸ್ ವಶ ಪಡಿಸಿಕೊಂಡ ರಾಜ್ಯಗಳಲ್ಲಿ ಪಂಜಾಬ್ ಮೊದಲ ಸ್ಥಾನದಲ್ಲಿದ್ದರೆ ಉತ್ತರ ಪ್ರದೇಶ ನಂತರದ ಸ್ಥಾನದಲ್ಲಿದೆ. ಇಲ್ಲಿ 83 ಲಕ್ಷ ಮೌಲ್ಯದ 286.65 ಕೆ.ಜೆ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಗೋವಾದಲ್ಲಿ 17.22 ಲಕ್ಷ, ಉತ್ತರಖಂಡದಲ್ಲಿ 15.36 ಲಕ್ಷ ಹಾಗೂ ಮಣಿಪುರದಲ್ಲಿ 7.62 ಲಕ್ಷ ಮೌಲ್ಯದ ಮಾದಕ ವಸ್ತುಗಳು ಪೊಲೀಸರ ಕೈಗೆ ಸಿಕ್ಕಿವೆ.[ಉತ್ತರ ಪ್ರದೇಶ: ಕಾಂಗ್ರೆಸ್-ಎಸ್ಪಿ ಗೆಲುವಿಗೆ 35-37% ಮತಗಳು ಸಾಕಂತೆ!]

ಮದ್ಯದ ಹೊಳೆ

ಇನ್ನು ಮದ್ಯದ ವಿಜಾರಕ್ಕೆ ಬಂದಾಗ ಉತ್ತರ ಪ್ರದೇಶ ದೇಶಕ್ಕೇ ಮೊದಲ ಸ್ಥಾನದಲ್ಲಿದೆ. ಇಲ್ಲಿ 10.7 ಕೋಟಿ ರೂಪಾಯಿ ಮೌಲ್ಯದ 3.95 ಲಕ್ಷ ಲೀಟರ್ ಮದ್ಯವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಪಂಜಾಬಿನಲ್ಲಿಯೂ 1.14 ಕೋಟಿ ಮೌಲ್ಯದ ಮದ್ಯ ಸಿಕ್ಕಿದೆ. ಉತ್ತರಖಂಡ, ಮಣಿಪುರ ಮತ್ತು ಗೋವಾ ನಂತರದ ಸ್ಥಾನದಲ್ಲಿದ್ದು ಕ್ರಮವಾಗಿ 72.91 ಲಕ್ಷ, 7.5 ಲಕ್ಷ ಹಾಗೂ 1.35 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

 Punjab as expected tops in drug seizures during elections

ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳು ಮತದಾರರಿಗೆ ಹಣ ಹೆಂಡದ ಆಮಿಷಗಳನ್ನು ತೋರಿಸುವುದು ಸಾಮಾನ್ಯವಾಗಿದ್ದು, ಪೊಲೀಸರು ವಶ ಪಡಿಸಿಕೊಂಡಿರುವ ವಸ್ತುಗಳು ಇದಕ್ಕೆ ಸಾಕ್ಷಿ ನುಡಿಯುತ್ತಿವೆ.

English summary
After the dates for the 5 State Assembly elections 2017 were announced, drugs worth Rs 10.30 crore have been seized from Uttar Pradesh, Goa, Punjab, Uttarakhand and Manipur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X