ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking News: ಪಠಾಣ್‌ಕೋಟ್ ಸೇನಾ ಶಿಬಿರದ ತ್ರಿವೇಣಿ ಗೇಟ್ ಬಳಿ ಗ್ರೆನೇಡ್ ಸ್ಫೋಟ

|
Google Oneindia Kannada News

ಚಂಡೀಗಢ, ನವೆಂಬರ್ 22: ಪಂಜಾಬ್‌ನ ಪಠಾಣ್‌ಕೋಟ್ ಸೇನಾ ಶಿಬಿರದ ತ್ರಿವೇಣಿ ಗೇಟ್ ಬಳಿ ಗ್ರೆನೇಡ್ ಸ್ಫೋಟ ಸಂಭವಿಸಿದೆ. ಪಠಾಣ್‌ಕೋಟ್‌ನ ಧೀರಾಪುಲ್ ಬಳಿಯ ಸೇನೆಯ ತ್ರಿವೇಣಿ ಗೇಟ್‌ನಲ್ಲಿ ಸೋಮವಾರ ಮುಂಜಾನೆ ಗ್ರನೇಡ್ ಸ್ಫೋಟ ಸಂಭವಿಸಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ಮೂಲಗಳನ್ನು ಉಲ್ಲೇಖಿಸಿದೆ. ಈ ಪ್ರದೇಶದಿಂದ ಮದುವೆ ಮೆರವಣಿಗೆ ಸಾಗುತ್ತಿದ್ದಾಗ ಬೈಕ್‌ನಲ್ಲಿ ಬಂದ ಅಪರಿಚಿತರು ಸೇನಾ ಠಾಣೆ ಗೇಟ್ ಬಳಿ ಗ್ರೆನೇಡ್ ಎಸೆದಿದ್ದಾರೆ ಎಂದು ವರದಿ ತಿಳಿಸಿದೆ.
ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.

ಪಠಾಣ್‌ಕೋಟ್‌ನ ಎಲ್ಲಾ ಪೊಲೀಸ್ ಚೆಕ್‌ಪೋಸ್ಟ್‌ಗಳನ್ನು ಅಲರ್ಟ್ ಮಾಡಲಾಗಿದೆ ಎಂದು ಪಠಾಣ್‌ಕೋಟ್ ಎಸ್‌ಎಸ್‌ಪಿ ಸುರೇಂದ್ರ ಲಂಬಾ ತಿಳಿಸಿದ್ದಾರೆ. ಯಾವುದೇ ಸಾವು-ನೋವಿನ ಬಗ್ಗೆ ವರದಿಯಾಗಿಲ್ಲ.

Punjab: A grenade blast took place near Triveni Gate of an Army camp in Pathankot

ಸ್ಥಳೀಯ ಪೊಲೀಸ್ ಅಧಿಕಾರಿಗಳು ಸ್ಥಳದಿಂದ ಗ್ರೆನೇಡ್‌ನ ಭಾಗಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ಪಠಾಣ್‌ಕೋಟ್‌ನಲ್ಲಿ ಈ ಹಿಂದೆ ನಡೆದ ದಾಳಿ:
ಐದು ವರ್ಷಗಳ ಹಿಂದೆ, ಪಠಾಣ್‌ಕೋಟ್‌ನಲ್ಲಿರುವ ಭಾರತೀಯ ವಾಯುಪಡೆಯ ನೆಲೆಯ ಮೇಲೆ ಆರು ಶಸ್ತ್ರಸಜ್ಜಿತ ಭಯೋತ್ಪಾದಕರು ದಾಳಿ ನಡೆಸಿದ್ದರು. ಕಳೆದ 2015ರ ಡಿಸೆಂಬರ್ 30 ಹಾಗೂ 31ರ ರಾತ್ರಿ ವೇಳೆ ಪಾಕಿಸ್ತಾನದಿಂದ ಪಂಜಾಬ್‌ನ ಕಥುವಾ-ಗುರುದಾಸ್‌ಪುರ ಗಡಿಯ ಮೂಲಕ ಭಾರತವನ್ನು ಪ್ರವೇಶಿಸಿದರು.

ಜನವರಿ 1, 2016 ರಂದು, ಭಯೋತ್ಪಾದಕರು ಪಂಜಾಬ್ ಟಾಪ್ ಕಾಪ್ ಸಲ್ವಿಂದರ್ ಸಿಂಗ್ ಅವರ SUV ಅನ್ನು ವಾಯು ನೆಲೆಯ ಸಮೀಪಕ್ಕೆ ಹೋಗಲು ಕಾರ್ಜಾಕ್ ಮಾಡಿದರು. ಜನವರಿ 2 ರಂದು ದಾಳಿ ಪ್ರಾರಂಭವಾಗಿತ್ತು. ಆದರೆ ದಾಳಿಯ ಕಾಪ್ಟರ್‌ಗಳು ರಾಕೆಟ್‌ಗಳಿಂದ ಅವರನ್ನು ಪಿನ್ ಮಾಡಿದ ಕಾರಣ ಥರ್ಮಲ್ ಇಮೇಜಿಂಗ್ ಸಹಾಯದಿಂದ ಭಯೋತ್ಪಾದಕರನ್ನು ಭದ್ರತಾ ಪಡೆಗಳು ಪತ್ತೆ ಹಚ್ಚಿದ್ದವು.

Recommended Video

ಹಾರ್ದಿಕ್ ಪಾಂಡ್ಯ ಅವರ ಕ್ರಿಕೆಟ್ ಭವಿಷ್ಯ ಈಗ ಕೆತ್ತಲಾಗಿದೆ | Oneindia Kannada

ಮೂರು ದಿನಗಳ ಕಾಲ ನಡೆದ ಗುಂಡಿನ ಕದನದಲ್ಲಿ ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿತ್ತು. ಈ ಆದರೆ ಹೋರಾಟದಲ್ಲಿ ಏಳು ಭದ್ರತಾ ಸಿಬ್ಬಂದಿಯ ಹುತಾತ್ಮರಾಗಿದ್ದರು.

English summary
Punjab: A grenade blast took place near Triveni Gate of an Army camp in Pathankot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X