ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಭರಣ ಮಾರಿ ಸಿಯಾಚಿನ್ ನಲ್ಲಿ ಆಕ್ಸಿಜನ್ ಪ್ಲಾಂಟ್ ರಚಿಸಲು ಹೊರಟ ದಂಪತಿ

|
Google Oneindia Kannada News

ಪುಣೆ, ಏಪ್ರಿಲ್ 27: ಸಿಯಾಚಿನ್... ಆ ಶಬ್ದ ಕೇಳಿದಾಗಲೆ ಮೈ ನಡುಗಬೇಕು. ಸದಾ ಮೈನಸ್ ಡಿಗ್ರಿಯಲ್ಲೇ ಇರುವ ಇಲ್ಲಿನ ತಾಪಮಾನದಲ್ಲಿ ಕರ್ತವ್ಯ ನಿರ್ವಹಿಸುವ ನಮ್ಮ ಸೈನಿಕರಿಗೆ ಎಷ್ಟು ಬಾರಿ ತಲೆಬಾಗಿದರೂ ಕಡಿಮೆಯೇ. ಹೀಗೆ ತಲೆಬಾಗಿ ಸುಮ್ಮನಾಗುವುದು ಸಾಮಾನ್ಯರ ವಿಷಯವಾಯ್ತು. ಆದರೆ ಅಸಾಮಾನ್ಯರು ತಲೆಬಾಗಿ ಸುಮ್ಮನಾಗುವುದಿಲ್ಲ. ನಮ್ಮನ್ನು ಕಾಯುತ್ತಿರುವ ಸೈನಿಕರ ಋಣಸಂದಾಯಕ್ಕೆ ಕೊಂಚವಾದರೂ ಮಾನವೀಯ ನೆಲೆಯಿಂದ ಸೇವೆ ಮಾಡಲು ಮುಂದಾಗುತ್ತಾರೆ.

ಅಂಥ ಅಸಾಮಾನ್ಯ ಕೆಲಸಕ್ಕೆ ಮುಂದಾಗಿದ್ದಾರೆ ಮಹಾರಾಷ್ಟ್ರದ ಪುಣೆಯ ದಂಪತಿ. ತಮ್ಮ ಇಳಿ ವಯಸ್ಸಿನಲ್ಲಿ ತಮ್ಮ ಬ ಳಿ ಇರುವ ಬೆಲೆಬಾಳುವ ಆಭರಣಗಳನ್ನೆಲ್ಲ ಮಾರಿ ಅದರಿಂದ ಬಂದ ಹಣದಲ್ಲಿ ಹಿಮಾಲಯ ಶ್ರೇಣಿಯಲ್ಲಿರುವ ಸಿಯಾಚಿನ್ ನಲ್ಲಿ ಒಂದು ಆಕ್ಸಿಜನ್ ಜನರೇಶನ್ ಪ್ಲಾಂಟ್ ನಿರ್ಮಿಸಲು ಹೊರಟಿದ್ದಾರೆ.

ಕೊರೆವ ಚಳಿಯ ಸಿಯಾಚಿನ್‌ನಲ್ಲಿ ಸೈನಿಕರ ಮತ್ತೊಂದು ಸಾಹಸಕೊರೆವ ಚಳಿಯ ಸಿಯಾಚಿನ್‌ನಲ್ಲಿ ಸೈನಿಕರ ಮತ್ತೊಂದು ಸಾಹಸ

ಸಮುದ್ರ ಮಟ್ಟದಿಂದ ಸುಮಾರು 5,753 ಮೀ ಎತ್ತರದಲ್ಲಿರುವ ಸಿಯಾಚಿನ್ ನಲ್ಲಿ ಆಮ್ಲಜನಕದ ಕೊರತೆ ಕಾಡುವುದು ಸಹಜ. ಎಷ್ಟೋ ಸೈನಿಕರು ಈ ಕಾರಣದಿಂದಲೇ ಪ್ರಾಣ ಕಳೆದುಕೊಳ್ಳುವಂತಾಗುತ್ತಿರುವುದು ದುರಂತ. ಆದ್ದರಿಂದಲೇ ಈ ಪ್ರದೇಶದಲ್ಲಿ ಆಕ್ಸಿಜನ್ ಜನರೇಶನ್ ಪ್ಲಾಂಟ್ ನಿರ್ಮಿಸಲು ದಂಪತಿ ಮುಂದಾಗಿದ್ದಾರೆ.

ಹನುಮಂತಪ್ಪನ ಸ್ಮರಣೆಯಲ್ಲಿ ಸಿಯಾಚಿನ್ ಮಿಲಿಟರಿ ಮುಕ್ತವಾಗಲಿಹನುಮಂತಪ್ಪನ ಸ್ಮರಣೆಯಲ್ಲಿ ಸಿಯಾಚಿನ್ ಮಿಲಿಟರಿ ಮುಕ್ತವಾಗಲಿ

English summary
Maharashtra: Couple in Pune has sold all their jewellery to construct an oxygen-generation plant for soldiers in Siachen. They say, 'the oxygen level is very low there & so an oxygen plant is needed. We decided to set it up as it's our duty to do something to help our soldiers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X