ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರುಂಡವಿಲ್ಲದ ದೇಹಗಳು, ರಸ್ತೆಗಂಟಿದ ಮಾಂಸ: ಘಟನಾ ಸ್ಥಳದ ಚಿತ್ರಣ

|
Google Oneindia Kannada News

ಜಮ್ಮು ಕಾಶ್ಮೀರ, ಫೆಬ್ರವರಿ 16: ನಿನ್ನೆ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ 44 ಮಂದು ಯೋಧರು ಹುತಾತ್ಮರಾಗಿದ್ದಾರೆ. ಶನಿವಾರದಷ್ಟು ಹೊತ್ತಿಗೆ ಹುತಾತ್ಮರ ಸಂಖ್ಯೆ 49 ಕ್ಕೆ ಏರಿದೆ.

ಸ್ಪೋಟದ ತೀವ್ರತೆಗೆ ಇಡೀಯ ಬಸ್ಸು ಮುರುಟಿಕೊಂಡಿ ಹೋಗಿತ್ತು. ಸೈನಿಕನೊಬ್ಬನ ದೇಹ ಘಟನೆ ನಡೆದ ಸ್ಥಳದಿಂದ ಬರೋಬ್ಬರಿ 80 ಮೀಟರ್ ದೂರದಲ್ಲಿ ಪತ್ತೆ ಆಗಿತ್ತು. ಸ್ಪೋಟದ ತೀವ್ರತೆ ಹೇಗಿತ್ತೆಂದರೆ ಶಬ್ದ 10 ಕಿ.ಮೀವರೆಗೆ ಕೇಳಿಸಿತ್ತು.

ಮಂಡ್ಯ ಯೋಧ ಗುರು ಅಂತ್ಯಕ್ರಿಯೆಯಲ್ಲಿ ನಿರ್ಮಲಾ ಸೀತಾರಾಮನ್ ಭಾಗಿ ಮಂಡ್ಯ ಯೋಧ ಗುರು ಅಂತ್ಯಕ್ರಿಯೆಯಲ್ಲಿ ನಿರ್ಮಲಾ ಸೀತಾರಾಮನ್ ಭಾಗಿ

ಸೈನಿಕರ ದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ದೇಹದ ಭಾಗಗಳು ಹರಿದು ಆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಲ್ಲಲ್ಲಿ ಬಿದ್ದಿದ್ದವು. ಆ ದೃಶ್ಯ ನರಕಕ್ಕಿಂತಲೂ ಹೇಯವಾಗಿತ್ತು. ರುಂಡ ವಿಲ್ಲದ ದೇಹಗಳು, ಅಂಗಾಗಳು ಬೇರ್ಪಟ್ಟ ದೇಹಗಳು, ರಸ್ತೆಗೆ ಅಂಟಿಕೊಂಡ ಬಿಸಿ ಮಾಂಸದ ಮುದ್ದೆಗಳು ಇವನ್ನು ಜೊತೆಗಾರ ಸೈನಿಕರು ಒಟ್ಟು ಮಾಡಿ ಆಸ್ಪತ್ರೆಗಗಳಿಗೆ ಸಾಗಿಸಿದ್ದರು.

Pulwama terror attack: How army identified the bodies of soldiers

ಘಟನೆ ನಡೆದ ಸ್ಥಳಕ್ಕೆ ಸಾರ್ವಜನಿಕರು ಮತ್ತು ಪತ್ರಿಕಾ ಪ್ರತಿನಿಧಿಗಳ ಪ್ರವೇಶ ನಿಷೇಧಿಸಲಾಯಿತು. ಇಲ್ಲದೇ ಹೋಗಿದ್ದರೆ ಇನ್ನಷ್ಟು ಮನಕಲುಕುವ ಕತೆಗಳು ಹೊರಬರುತ್ತಿದ್ದವು. ಅಲ್ಲಿನ ಚಿತ್ರಗಳು ಈಗಾಗಲೇ ವಾಟ್ಸಾಪ್‌ನಲ್ಲಿ ಹರಿದಾಡುತ್ತಿವೆ. ಹೃದಯ ಹಿಂಡುವ ಆ ಚಿತ್ರಗಳನ್ನು ಇಲ್ಲಿ ಪ್ರಕಟಿಸುವುದು ಉಚಿತವಲ್ಲ ಎಂಬ ಕಾರಣಕ್ಕೆ ನೀಡಿಲ್ಲ.

ದಾಖಲೆ ಬೇಡ ಎಂದು ಯೋಧನ ವಿಮೆ ಹಣ ನೀಡಿ ಮಾನವೀಯತೆ ಮೆರೆದ ಎಲ್‌ಐಸಿದಾಖಲೆ ಬೇಡ ಎಂದು ಯೋಧನ ವಿಮೆ ಹಣ ನೀಡಿ ಮಾನವೀಯತೆ ಮೆರೆದ ಎಲ್‌ಐಸಿ

ರುಂಡ-ಮುಂಡಗಳು ಬೇರ್ಪಟ್ಟ ದೇಹಗಳನ್ನು ಇಟ್ಟುಕೊಂಡು ಸೈನಿಕರ ಗುರುತು ಪತ್ತೆ ಮಾಡುವುದು ಸೈನ್ಯಕ್ಕೆ ಬಹುದೊಡ್ಡ ಸವಾಲಾಗಿತ್ತು. ದಾಳಿಗೆ ಒಳಗಾದ ಬಸ್‌ನಲ್ಲಿ ಯಾರ್ಯಾರೆಲ್ಲಾ ಇದ್ದರು ಎಂಬುದು ಸೈನ್ಯದ ಬಳಿ ದಾಖಲೆ ಇತ್ತಾದರೂ ಯಾವ ದೇಹ ಯಾರದ್ದು ಎಂಬುದು ಪತ್ತೆ ಮಾಡುವುದು ಸುಲಭವಾಗಿರಲಿಲ್ಲ.

ಸೈನಿಕರ ಸಮವಸ್ತ್ರದಲ್ಲಿದ್ದ ಆಧಾರ್ ಕಾರ್ಡ್‌, ರಜೆ ಚೀಟಿ, ಮರಳಿ ಕೆಲಸಕ್ಕೆ ಸೇರುವ ಆದೇಶ ಪತ್ರಗಳನ್ನು ಕಲೆ ಹಾಕಿ ಸೈನಿಕರ ಗುರುತು ಪತ್ತೆ ಮಾಡಲಾಯಿತು. ಇನ್ನುಳಿದಂತೆ ಸೈನ್ಯದ ಬಳಿ ಇದ್ದ ಸೈನಿಕರ ದೈಹಿಕ ಗುರುತು ಮಾಹಿತಿಗಳಿಗೆ ತಾಳೆ ನೋಡಿ ಕೆಲವನ್ನು ಗುರುತು ಪತ್ತೆ ಮಾಡಲಾಯಿತು.

ಪುಲ್ವಾಮಾ ದಾಳಿ ರೂವಾರಿ ಅಬ್ದುಲ್ ರಶೀದ್ ಗಾಜಿ ಸುಳಿವು ಪತ್ತೆ ಪುಲ್ವಾಮಾ ದಾಳಿ ರೂವಾರಿ ಅಬ್ದುಲ್ ರಶೀದ್ ಗಾಜಿ ಸುಳಿವು ಪತ್ತೆ

ಎಷ್ಟೆ ಆದರೂ ನಿನ್ನೆಯವರೆಗೆ ಕೇವಲ 41 ಯೋಧರ ಗುರುತನ್ನಷ್ಟೆ ಪತ್ತೆ ಮಾಡಲಾಗಿತ್ತು. ನಿನ್ನೆ ಸಂಜೆ ವೇಳೆಗೆ ಸಾವಿನ ಸಂಖ್ಯೆ ಹೆಚ್ಚಾಗಿದೆಯಾದರೂ ಅವರ ಗುರುತು ಸೈನ್ಯಕ್ಕೆ ಸಿಕ್ಕಿದೆ. ಇನ್ನೂ ಮೂವರು ಯೋಧರ ಗುರುತು ಪತ್ತೆ ಮಾಡಲಾಗಿರಲಿಲ್ಲ.

English summary
Indian army identify the soldiers body by soldiers Adhar card and leave notifications found int heir pockets. still three bodies need to be identified. Pulwama terror attack.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X