ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುತಾತ್ಮ ಸೈನಿಕರ ಹೆಸರು ಹಚ್ಚೆ ಹಾಕಿಸಿಕೊಂಡ ದೇಶಪ್ರೇಮಿ

|
Google Oneindia Kannada News

ಬಿಕಾನೇರ್, ಫೆಬ್ರವರಿ 20: ದೇಶಭಕ್ತಿಯ ಪ್ರದರ್ಶನಕ್ಕೆ ಹಲವು ಮಾರ್ಗಗಳು. ದೇಶಪ್ರೇಮ ಮೆರೆಯಲು ಅನೇಕರು ಸೇನೆಗೆ ಸೇರಿಕೊಂಡರೆ, ವಿವಿಧ ಕ್ಷೇತ್ರಗಳಲ್ಲಿ ಬದುಕು ಕಟ್ಟಿಕೊಂಡ ಜನರು ತಮ್ಮದೇ ರೀತಿಯಲ್ಲಿ ದೇಶಭಕ್ತಿ ಮೆರೆಯುತ್ತಾರೆ.

ಪುಲ್ವಾಮಾದಲ್ಲಿ ಉಗ್ರರ ದಾಳಿಗೆ ಜನ ಮುಮ್ಮಲ ಮರುಗುವಾಗ ದೇಶಪ್ರೇಮದ ಮಾತುಗಳು ಹೆಚ್ಚು ವ್ಯಕ್ತವಾಗುತ್ತಿವೆ. ಅನೇಕರು ಭಾವುಕತೆಯಿಂದ ದೇಶಕ್ಕಾಗಿ ತಾವೂ ಹೋರಾಟಕ್ಕೆ ಸಿದ್ಧ ಎನ್ನುತ್ತಿದ್ದಾರೆ. ಆದರೆ, ರಾಜಸ್ಥಾನದ ಬಿಕಾನೇರ್‌ನ ಯುವಕನದು ವಿಶಿಷ್ಟ, ವಿಚಿತ್ರ ಎನಿಸುವ ದೇಶಪ್ರೇಮ. ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರ ಹೆಸರುಗಳು ಈತನ ಮನದಲ್ಲಿ ಮಾತ್ರವಲ್ಲ, ಬೆನ್ನಿನಲ್ಲಿಯೂ ಇವೆ.

ಸೇಡು ತೀರಿಸಿಕೊಳ್ಳೋಣ: ಹತ್ತರ ಬಾಲಕಿ ಪ್ರಧಾನಿ ಮೋದಿಗೆ ಬರೆದ ಪತ್ರ ವೈರಲ್! ಸೇಡು ತೀರಿಸಿಕೊಳ್ಳೋಣ: ಹತ್ತರ ಬಾಲಕಿ ಪ್ರಧಾನಿ ಮೋದಿಗೆ ಬರೆದ ಪತ್ರ ವೈರಲ್!

ದೇಶಕ್ಕಾಗಿ ಪ್ರಾಣ ತೆತ್ತ ಸೈನಿಕರಿಗೆ ಗೌರವ ಸಲ್ಲಿಸಲು ಗೋಪಾಲ್ ಸಹರನ್ ಎಂಬಾತ ಆಯ್ದುಕೊಂಡಿರುವುದು ವಿಶಿಷ್ಟ ಮಾರ್ಗವನ್ನು. ಸೋಮವಾರ ಅವರು ತಮ್ಮ ಬೆನ್ನ ಮೇಲೆ ಒಟ್ಟು 71 ಹುತಾತ್ಮರ ಹೆಸರುಗಳನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ. ಇದರಲ್ಲಿ ಇತ್ತೀಚೆಗೆ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಗೆ ಬಲಿಯಾದ ಸೈನಿಕರೂ ಸೇರಿದ್ದಾರೆ.

pulwama terror attack bikaner youth tattoos the names of 71 martyrs on his body

ಸೇನಾ ಕಾರ್ಯಾಚರಣೆಯಲ್ಲಿ ಪುತ್ತೂರಿನ ಹೆಮ್ಮೆಯ ಯೋಧ ಜುಬೈರ್ ಸೇನಾ ಕಾರ್ಯಾಚರಣೆಯಲ್ಲಿ ಪುತ್ತೂರಿನ ಹೆಮ್ಮೆಯ ಯೋಧ ಜುಬೈರ್

ಬಿಕಾನೇರ್‌ನ ಭಗತ್ ಸಿಂಗ್ ಯುವ ಬ್ರಿಗೇಡ್‌ನ ಸದಸ್ಯನಾಗಿರುವ ಗೋಪಾಲ್ ಅವರಿಗೆ, ದೇಶಕ್ಕಾಗಿ ಪ್ರಾಣ ಕೊಟ್ಟ ವೀರ ಯೋಧರ ಹೆಸರನ್ನು ಮರೆಯಲಾಗದಂತೆ ಮಾಡಲಾಗುತ್ತಿದ್ದೇನೆ ಎಂಬ ಹೆಮ್ಮೆಯಿದೆ.

'ದೇಶಕ್ಕಾಗಿ ಬಲಿದಾನ ಮಾಡಿದ ಸೈನಿಕರಿಗೆ ಗೌರವ ಅರ್ಪಿಸಲು ನಾವು ಬೇರೆ ಬೇರೆ ಮಾರ್ಗಗಳನ್ನು ಅನುಸರಿಸುತ್ತೇವೆ. ಪುಲ್ವಾಮಾ ದಾಳಿಯ ಬಳಿಕ ನಾನು ಅವರ ಹೆಸರು ಸದಾ ಸ್ಮರಣೀಯವಾಗಿರಲು ಏನನ್ನಾದರೂ ಮಾಡಬೇಕು ಎಂದು ನಿರ್ಧರಿಸಿದ್ದೆ.

ನಿಮ್ಮಿಂದ ಆಗದಿದ್ದರೆ ಉಗ್ರನನ್ನು ನಾವೇ ಹಿಡಿಯುತ್ತೇವೆ: ಪಾಕ್‌ಗೆ ಅಮರಿಂದರ್ ತಪರಾಕಿ ನಿಮ್ಮಿಂದ ಆಗದಿದ್ದರೆ ಉಗ್ರನನ್ನು ನಾವೇ ಹಿಡಿಯುತ್ತೇವೆ: ಪಾಕ್‌ಗೆ ಅಮರಿಂದರ್ ತಪರಾಕಿ

ಫೆ. 14ರಂದು ನಡೆದ ದಾಳಿಯಲ್ಲಿ ಬಲಿಯಾದ 40ಕ್ಕೂ ಹೆಚ್ಚು ಸೈನಿಕರಲ್ಲದೆ, ಬೇರೆ ಬೇರೆ ಘಟನೆಗಳಲ್ಲಿ ಹುತಾತ್ಮರಾದ 31 ಸೈನಿಕರ ಹೆಸರನ್ನೂ ಸೇರಿಸಿ ಬೆನ್ನಿನ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದೇನೆ. ನನ್ನ ಈ ನಡೆ ದೇಶದ ಜನರಲ್ಲಿ ಸೈನಿಕರ ಕುರಿತಾದ ಗೌರವ ಹೆಚ್ಚಿಸುತ್ತದೆ ಎಂಬ ಭರವಸೆ ನನಗಿದೆ' ಎಂದು ಗೋಪಾಲ್ ತಿಳಿಸಿದ್ದಾರೆ.

English summary
Bikaner youth Gopal Saharan tattoos 71 martyrs names on his body to pay his tributes to them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X